IND vs BAN: ಭಾರತ- ಬಾಂಗ್ಲಾದೇಶ 2ನೇ ಟಿ-20 ಪಂದ್ಯ ನಡೆಯುವುದು ಅನುಮಾನ!

ಹವಾಮಾನ ಇಲಾಖೆ ಈಗಾಗಲೇ ಸೌರಾಷ್ಟ್ರ ತೀರದ ಮೀನುಗಾರರಿಗೆ ಎಚ್ಚರಿಕೆ ನೀಡಿದೆ. ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚಿಸಲಾಗಿದೆ. ಹೀಗಿರುವಾಗ ಭಾರತ- ಬಾಂಗ್ಲಾ ಪಂದ್ಯಕ್ಕೆ ಮಳೆ ಅಡ್ಡಿಸುವುದು ಖಚಿತ.

Vinay Bhat | news18-kannada
Updated:November 5, 2019, 12:15 PM IST
IND vs BAN: ಭಾರತ- ಬಾಂಗ್ಲಾದೇಶ 2ನೇ ಟಿ-20 ಪಂದ್ಯ ನಡೆಯುವುದು ಅನುಮಾನ!
ತಾಲೀಮಿನಲ್ಲಿ ಟೀಂ ಇಂಡಿಯಾ ಆಟಗಾರರು
Vinay Bhat | news18-kannada
Updated: November 5, 2019, 12:15 PM IST
ಬೆಂಗಳೂರು (ನ. 05): ತವರಿನಲ್ಲಿ ಬಾಂಗ್ಲಾದೇಶ ವಿರುದ್ಧದ ಸರಣಿಯನ್ನು ಕೆಟ್ಟದಾಗಿ ಆರಂಭಿಸಿರುವ ಟೀಂ ಇಂಡಿಯಾ ಸದ್ಯ ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ನವೆಂಬರ್ 7 ರಂದು ರಾಜ್ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಬಾಂಗ್ಲಾ ವಿರುದ್ಧ ರೋಹಿತ್ ಪಡೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ.

ಆದರೆ, ಎರಡನೇ ಟಿ-20 ಪಂದ್ಯ ನಡೆಯುವುದೇ ಅನುಮಾನ ಎಂದು ಹೇಳಲಾಗುತ್ತಿದೆ. ಈಗಾಗಲೇ 'ಮಹಾ' ಚಂಡಮಾರುತ ಗುಜರಾತ್​ಗೆ ಪ್ರವೇಶ ಮಾಡಿದ್ದು, ಪಂದ್ಯಕ್ಕೆ ವರುಣ ಅಡ್ಡಿಪಡಿಸುವ ಸಾಧ್ಯತೆ ದಟ್ಟವಾಗಿದೆ.

ಹವಾಮಾನ ವರದಿಗಳ ಪ್ರಕಾರ, ನವೆಂಬರ್‌ 6 ಮತ್ತು 7ರಂದು ರಾಜ್ಕೋಟ್​ನಲ್ಲಿ ಚಂಡಮಾರುತ ಬೀಸಲಿದ್ದು, ಪಂದ್ಯ ನಡೆಯುವುದು ಬಹುತೇಕ ಅನುಮಾನ ಎಂದು ಹೇಳಲಾಗುತ್ತಿದೆ.

ವಿರಾಟ್ ಕೊಹ್ಲಿ ಈಗ ಟಿಕ್​ಟಾಕ್ ಸ್ಟಾರ್; ಆದ್ರೆ ಇದು ಟೀಂ ಇಂಡಿಯಾ ನಾಯಕನಲ್ಲ, ಮತ್ಯಾರು?

 



Virat Kohli: 31ನೇ ವಸಂತಕ್ಕೆ ವಿರಾಟ್; ಇಲ್ಲಿದೆ ಕಿಂಗ್ ಕೊಹ್ಲಿಯ ಅಪರೂಪದ ಫೋಟೋಗಳು

ಹವಾಮಾನ ಇಲಾಖೆ ಈಗಾಗಲೇ ಸೌರಾಷ್ಟ್ರ ತೀರದ ಮೀನುಗಾರರಿಗೆ ಎಚ್ಚರಿಕೆ ನೀಡಿದೆ. ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚಿಸಲಾಗಿದೆ. ಹೀಗಿರುವಾಗ ಭಾರತ- ಬಾಂಗ್ಲಾ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವುದು ಖಚಿತ.

ದೆಹಲಿ ದಟ್ಟ ವಾಯುಮಾಲಿನ್ಯದಿಂದ ಕೂಡಿದ್ದರು ಬಿಸಿಸಿಐ ಭಾರತ- ಬಾಂಗ್ಲಾದೇಶ ನಡುವಣ ಮೊದಲ ಟಿ-20 ಪಂದ್ಯವನ್ನು ಸ್ಥಳಾಂತರ ಮಾಡಿದೆ ಅಲ್ಲೇ ನಡೆಸಿತ್ತು. ಭಾರತ ಸೋಲುಂಡಿತ್ತು. ಈಗ ಎರಡನೇ ಪಂದ್ಯಕ್ಕೆ ಚಂಡಮಾರುತ ಎದುರಾಗಿದ್ದು, ಪಂದ್ಯ ನಡೆಯುತ್ತಾ ಎಂಬುದು ಆಯೋಜಕರಿಗೆ ತಲೆನೋವಾಗಿ ಪರಿಣಮಿಸಿದೆ.

First published:November 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...