IND vs BAN: 2ನೇ ಟಿ-20 ಪಂದ್ಯಕ್ಕೆ ಮಹತ್ವದ ಬದಲಾವಣೆ; ಹಿಂಟ್ ಕೊಟ್ಟ ಹಿಟ್​ಮ್ಯಾನ್; ಯಾರಿಗೆ ಚಾನ್ಸ್?

ರೋಹಿತ್ ಶರ್ಮಾ ಬ್ಯಾಟಿಂಗ್ ವಿಬಾಗದಲ್ಲಿ ಯಾವುದೇ ಬದಲಾವಣೆ ಮಾಡದೆ, ಬೌಲಿಂಗ್​ನಲ್ಲಿ ಪ್ರಯೋಗ ಮಾಡುವ ಅಂದಾಜಿದೆ. ಇದಕ್ಕೆ ಕಾರಣವೂ ಇದೆ....

Vinay Bhat | news18-kannada
Updated:November 7, 2019, 2:24 PM IST
IND vs BAN: 2ನೇ ಟಿ-20 ಪಂದ್ಯಕ್ಕೆ ಮಹತ್ವದ ಬದಲಾವಣೆ; ಹಿಂಟ್ ಕೊಟ್ಟ ಹಿಟ್​ಮ್ಯಾನ್; ಯಾರಿಗೆ ಚಾನ್ಸ್?
ರೋಹಿತ್ ಶರ್ಮಾ ಬ್ಯಾಟಿಂಗ್ ವಿಬಾಗದಲ್ಲಿ ಯಾವುದೇ ಬದಲಾವಣೆ ಮಾಡದೆ, ಬೌಲಿಂಗ್​ನಲ್ಲಿ ಪ್ರಯೋಗ ಮಾಡುವ ಅಂದಾಜಿದೆ. ಇದಕ್ಕೆ ಕಾರಣವೂ ಇದೆ....
  • Share this:
ಬೆಂಗಳೂರು (ನ. 07): ಬಾಂಗ್ಲಾದೇಶ ವಿರುದ್ಧ ಮೊದಲ ಟಿ-20 ಸೋತ ಬೆನ್ನಲ್ಲೆ ಬಹಳಷ್ಟು ಟೇಕೆಗಳಿಗೆ ಗುರಿಯಾಗಿರುವ ಟೀಂ ಇಂಡಿಯಾ ಸದ್ಯ ಕಮ್​ಬ್ಯಾಕ್ ಮಾಡಬೇಕಾದ ಒತ್ತಡದಲ್ಲಿದೆ. ಅಲ್ಲದೆ ಎಲ್ಲಾದರು ಇಂದು ನಡೆಯಲಿರುವ ಎರಡನೇ ಟಿ-20 ಪಂದ್ಯ ಸೋತರೆ ಸರಣಿಯಲ್ಲಿ ಕೈಚೆಲ್ಲಲಿದೆ. ಹೀಗಾಗಿ ರೋಹಿತ್ ಪಡೆಗೆ ಇದು ಮುಖ್ಯ ಪಂದ್ಯ.

ಎರಡನೇ ಟಿ-20 ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ರೋಹಿತ್ ಶರ್ಮಾ, "ನಮ್ಮ ಬ್ಯಾಟಿಂಗ್ ಕ್ರಮಾಂಕ ಉತ್ತಮವಾಗಿದೆ. ಹೀಗಾಗಿ ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆ ಮಾಡುವ ಬಗ್ಗೆ ಯೋಚನೆಯಿಲ್ಲ. ಆದರೆ, ಪಿಚ್ ಹೇಗೆ ಸಹಕರಿಸುತ್ತದೆ ಎಂಬುದನ್ನು ನೋಡಬೇಕು. ಬೌಲರ್​ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವತ್ತ ಗಮನ ಹರಿಸುತ್ತಿದ್ದೇವೆ" ಎಂದಿದ್ದಾರೆ.

IND vs BAN: 2ನೇ ಟಿ-20 ಪಂದ್ಯದಲ್ಲಿ ಸೃಷ್ಟಿಯಾಗಲಿದೆ ಒಂದಲ್ಲಾ ಎರಡಲ್ಲಾ ಬರೋಬ್ಬರಿ 9 ದಾಖಲೆಗಳು!

ಈ ಮೂಲಕ ರೋಹಿತ್ ಶರ್ಮಾ ಬ್ಯಾಟಿಂಗ್ ವಿಬಾಗದಲ್ಲಿ ಯಾವುದೇ ಬದಲಾವಣೆ ಮಾಡದೆ, ಬೌಲಿಂಗ್​ನಲ್ಲಿ ಪ್ರಯೋಗ ಮಾಡುವ ಅಂದಾಜಿದೆ. ಇದಕ್ಕೆ ಕಾರಣವೂ ಇದೆ. ಕಳೆದ ಟಿ-20 ಪಂದ್ಯ ಸೋಲಲು ಭಾರತ ಪ್ರಮುಖ ಕಾರಣ ಬೌಲಿಂಗ್ ವಿಭಾಗ. 19ನೇ ಓವರ್ ಬೌಲಿಂಗ್​ ಮಾಡಿದ ಖಲೀಲ್ ಅಹ್ಮದ್ 19 ರನ್ ನೀಡಿದ ತಂಡದ ಸೋಲಿಗೆ ಕಾರಣರಾದರು.

 ಮಾತು ಮುಂದುವರೆಸಿದ ರೋಹಿತ್ ಶರ್ಮಾ, "ಕಳೆದ ಡೆಲ್ಲಿ ಪಿಚ್​ಗೆ ಹೋಲಿಸಿದರೆ ಇದು ಸಂಪೂರ್ಣ ವಿಭಿನ್ನವಾಗಿದೆ. ನಾನು ಪಿಚ್ ಪರಿಶೀಲಿಸಿದ್ದೇನೆ. ಹೀಗಾಗಿ ನಮ್ಮ ಬೌಲಿಂಗ್​ನಲ್ಲಿ ಕೆಲ ಬದಲಾವಣೆಯ ಅಗತ್ಯವಿದೆ. ಬ್ಯಾಟಿಂಗ್​ಗೆ ಹೆಚ್ಚುನ ಸಹಕಾರಿಯಾಗುವ ಈ ಪಿಚ್ ಬೌಲರ್​ಗಳಿಗೂ ಉಪಯುಕ್ತವಾಗಿದೆ"

KPL ಸ್ಪಾಟ್ ಫಿಕ್ಸಿಂಗ್ ಪ್ರಕರಣ: ಬಳ್ಳಾರಿ ಟಸ್ಕರ್ಸ್​​ ತಂಡದ ಇಬ್ಬರು ಆಟಗಾರರ ಬಂಧನ

"ಬ್ಯಾಟಿಂಗ್ ವಿಭಾಗದಲ್ಲಿ ತೊಂದರೆಯಿಲ್ಲ. ಬೌಲರ್​ಗಳು ಪ್ರಮುಖ ಹಂತದಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಬೇಕು. ಹಿಂದಿನ ಪಂದ್ಯದಲ್ಲಿ ಮಾಡಿದ ತಪ್ಪಿನ ಅರಿವಾಗಿದೆ. ಈ ಬಾರಿ ಆ ತಪ್ಪು ಮಾಡದೆ ಉತ್ತಮ ಪ್ರದರ್ಶನ ನೀಡುತ್ತೇವೆ" ಎಂದು ರೋಹಿತ್ ಹೇಳಿದ್ದಾರೆ.

 ಪಂದ್ಯ ಆರಂಭ: ಸಂಜೆ 7 ಗಂಟೆಗೆ

ಸ್ಥಳ: ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣ, ರಾಜ್ಕೋಟ್

 

First published:November 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading