HOME » NEWS » Sports » CRICKET INDIA VS BANGLADESH SANJU SAMSON AND SHIVAM DUBE LIKELY TO BE PICKED FOR THE T20I SERIES VB

IND vs BAN: ಬಾಂಗ್ಲಾ ವಿರುದ್ಧ ಟಿ-20 ಫೈಟ್; ದ್ವಿಶತಕ ವೀರನಿಗೆ ಸ್ಥಾನ; ಲಿಸ್ಟ್​ನಲ್ಲಿ ಆರ್​ಸಿಬಿ ಆಟಗಾರ?

ಬಾಂಗ್ಲಾದೇಶ ವಿರುದ್ಧ ಭಾರತ ನವೆಂಬರ್ 3 ರಂದು ಡೆಲ್ಲಿಯಲ್ಲಿ ಮೊದಲ ಟಿ-20 ಪಂದ್ಯ ಆಡಿದರೆ, ಎರಡನೇ ಪಂದ್ಯ ನ .7ಕ್ಕೆ ರಾಜ್ಕೋಟ್​ನಲ್ಲಿ ಹಾಗೂ ನ. 10 ರಂದು ನಾಗ್ಪುರದಲ್ಲಿ ಅಂತಿಮ ಮೂರುನೆ ಟಿ-20 ಆಯೋಜಿಸಲಾಗಿದೆ.

Vinay Bhat | news18-kannada
Updated:October 19, 2019, 10:56 AM IST
IND vs BAN: ಬಾಂಗ್ಲಾ ವಿರುದ್ಧ ಟಿ-20 ಫೈಟ್; ದ್ವಿಶತಕ ವೀರನಿಗೆ ಸ್ಥಾನ; ಲಿಸ್ಟ್​ನಲ್ಲಿ ಆರ್​ಸಿಬಿ ಆಟಗಾರ?
ಶಿವಂ ದುಬೆ, ವಿರಾಟ್ ಕೊಹ್ಲಿ ಹಾಗೂ ಸಂಜು ಸ್ಯಾಮ್ಸನ್
  • Share this:
ಬೆಂಗಳೂರು (ಅ. 19): ಟೀಂ ಇಂಡಿಯಾ ಸದ್ಯ ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಂತಿಮ ಟೆಸ್ಟ್​ ಪಂದ್ಯವನ್ನಾಡುತ್ತಿದೆ. ಇದಾದ ಬಳಿಕ ಬಾಂಗ್ಲಾದೇಶ ವಿರುದ್ಧ ಕೊಹ್ಲಿ ಪಡೆ ತವರಿನಲ್ಲಿ ಮೂರು ಪಂದ್ಯಗಳ ಟಿ-20 ಹಾಗೂ ಎರಡು ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ.

ಬಾಂಗ್ಲಾದೇಶ ವಿರುದ್ಧದ ಸರಣಿಗೆ ಟೀಂ ಇಂಡಿಯಾವನ್ನು ಇನ್ನಷ್ಟೆ ಪ್ರಕಟಿಸಬೇಕಿದೆ. ಅಕ್ಟೋಬರ್ 24 ರಂದು ಬಿಸಿಸಿಐ ಆಯ್ಕೆ ಸಮಿತಿ ಆಟಗಾರರ ಹೆಸರನ್ನು ಘೋಷಿಸಲಿದೆ ಎಂದು ಹೇಳಲಾಗಿದೆ.

ಈ ನಡುವೆ ದೇಶೀಯ ಕ್ರಿಕೆಟ್​ನಲ್ಲಿ ಮಿಂಚುತ್ತಿರುವ ಇಬ್ಬರು ಯುವ ಆಟಗಾರರು ಬಾಂಗ್ಲಾ ವಿರುದ್ಧದ ಟಿ-20 ಸರಣಿಗೆ ಆಯ್ಕೆ ಆಗಲಿದ್ದಾರೆ ಎಂಬ ಮಾತುಗಳು ಕ್ರೀಡಾವಲಯದಿಂದ ಕೇಳಿಬರುತ್ತಿದೆ.

Sanju Samson, Shivam Dube In The Fray To Be Selected For Bangladesh T20Is: Report
ಸಂಜು ಸ್ಯಾಮ್ಸನ್


ಟೆಸ್ಟ್ ಪಂದ್ಯ ಆಯೋಜಿಸುವ ಮುನ್ನ ಯೋಚಿಸುವ ಪರಿಸ್ಥಿತಿ; ಇದು ಧೋನಿ ತವರೂರಿನ ದುಸ್ಥಿತಿ!

ಈ ಹಿಂದೆ ದ. ಆಫ್ರಿಕಾ, ವೆಸ್ಟ್​ ಇಂಡೀಸ್ ವಿರುದ್ಧದ ಟಿ-20 ಸರಣಿಗೆ ಭಾರತ ತಂಡವನ್ನು ಪ್ರಕಟಿಸುವ ವೇಳೆ ನಾಯಕ ಹಾಗೂ ಆಯ್ಕೆ ಸಮಿತಿ ಒಂದು ವಿಚಾರವನ್ನು ಬಹಿರಂಗ ಪಡಿಸಿತ್ತು. "2020 ರಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ ಟಿ-20 ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಯುವ ಆಟಗಾರರಿಗೆ ಟೀಂ ಇಂಡಿಯಾದಲ್ಲಿ ಹೆಚ್ಚಿನ ಅವಕಾಶ ನೀಡುತ್ತೇವೆ. ಟಿ-20 ವಿಶ್ವಕಪ್​ಗೂ ಮುನ್ನ ಸಾಕಷ್ಟು ಪ್ರಯೋಗ ನಡೆಸಿ ನಮ್ಮ ತಂಡವನ್ನು ಬಲಿಷ್ಠವಾಗಿಸಬೇಕು" ಎಂದು ಹೇಳಿದ್ದರು.

ಅದರಂತೆ ಬಾಂಗ್ಲಾ ವಿರುದ್ಧದ ಟಿ-20 ಸರಣಿಗೆ ಸದ್ಯ ವಿಜಯ್ ಹಜಾರೆ ಟ್ರೋಫಿಯಲ್ಲಿ ಕೇರಳ ತಂಡದ ಪರ ಮಿಂಚುತ್ತಿರುವ ಸಂಜು ಸ್ಯಾಮ್ಸನ್ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗಿದೆ. ಇವರ ಜೊತೆ ಆರ್​ಸಿಬಿ ಆಟಗಾರ ಶಿವಂ ದುಬೆ ಹೆಸರುಕೂಡ ಕೇಳಿಬರುತ್ತಿದೆ.ಸ್ಯಾನ್ಸನ್ ಉತ್ತಮ ಫಾರ್ಮ್​ನಲ್ಲಿದ್ದು ವಿಜಯ್ ಹಜಾರೆ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇತ್ತೀಚೆಗಷ್ಟೆ ಗೋವಾ ವಿರುದ್ಧದ ಪಂದ್ಯದಲ್ಲಿ ಸಂಜು 129 ಎಸೆತಗಳಲ್ಲಿ 21 ಬೌಂಡರಿ ಹಾಗೂ 10 ಸಿಕ್ಸರ್ ಸಿಡಿಸಿ ಅಜೇಯ 212 ರನ್ ಚಚ್ಚಿ ದ್ವಿಶತಕ ಬಾರಿಸಿದ್ದರು.

India vs South Africa, Live Cricket Score: ಭಾರತಕ್ಕೆ ಆರಂಭಿಕ ಆಘಾತ; 2 ವಿಕೆಟ್ ಪತನ

ಶ್ರೇಷ್ಠ ಆಲ್ರೌಂಡರ್ ಆಗಿರುವ ದುಬೆ ಕೂಡ ಆಯ್ಕೆ ಸಮಿತಿ ಕದ ತಟ್ಟುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ ರಿಷಭ್ ಪಂತ್ ಕೂಡ ಕಳಪೆ ಫಾರ್ಮ್​ನಲ್ಲಿದ್ದು, ಇತ್ತ ಸ್ಯಾಮ್ಸನ್ ಸ್ಥಾನ ಪಡೆದುಕೊಂಡರೆ ಬ್ಯಾಟಿಂಗ್ ಜೊತೆ ವಿಕೆಟ್ ಕೀಪಿಂಗ್ ಕೂಡ ಮಾಡಬಲ್ಲರು.

ಬಾಂಗ್ಲಾದೇಶ ವಿರುದ್ಧ ಭಾರತ ನವೆಂಬರ್ 3 ರಂದು ಡೆಲ್ಲಿಯಲ್ಲಿ ಮೊದಲ ಟಿ-20 ಪಂದ್ಯ ಆಡಿದರೆ, ಎರಡನೇ ಪಂದ್ಯ ನ .7ಕ್ಕೆ ರಾಜ್ಕೋಟ್​ನಲ್ಲಿ ಹಾಗೂ ನ. 10 ರಂದು ನಾಗ್ಪುರದಲ್ಲಿ ಅಂತಿಮ ಮೂರುನೆ ಟಿ-20 ಆಯೋಜಿಸಲಾಗಿದೆ.

First published: October 19, 2019, 10:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories