ರೋಹಿತ್ ಶರ್ಮಾ ಆರ್ಭಟಕ್ಕೆ ಧೋನಿ, ಎಬಿಡಿ ದಾಖಲೆಗಳು ಉಡೀಸ್..!

India vs Bangladesh: ಬಾಂಗ್ಲಾ ಬೌಲರುಗಳನ್ನು ಮನಸೊ ಇಚ್ಛೆ ದಂಡಿಸಿ ಹಿಟ್​ ಮ್ಯಾನ್ ವಿಶ್ವಕಪ್​ನಲ್ಲಿಂದು ಮತ್ತೊಂದು ಶತಕ ಸಿಡಿಸಿದ್ದರು.

zahir | news18
Updated:July 2, 2019, 7:18 PM IST
ರೋಹಿತ್ ಶರ್ಮಾ ಆರ್ಭಟಕ್ಕೆ ಧೋನಿ, ಎಬಿಡಿ ದಾಖಲೆಗಳು ಉಡೀಸ್..!
Rohit sharma
  • News18
  • Last Updated: July 2, 2019, 7:18 PM IST
  • Share this:
ಬರ್ಮಿಂಗ್‌ಹ್ಯಾಮ್​ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಹೊಸ ದಾಖಲೆಗಳನ್ನು ಬರೆದಿದ್ದಾರೆ. ಬಾಂಗ್ಲಾ ಬೌಲರುಗಳನ್ನು ಮನಸೊ ಇಚ್ಛೆ ದಂಡಿಸಿ ಹಿಟ್​ ಮ್ಯಾನ್ ವಿಶ್ವಕಪ್​ನಲ್ಲಿಂದು ಮತ್ತೊಂದು ಶತಕ ಸಿಡಿಸಿದ್ದರು. ಈ ಮೂಲಕ ಭಾರತದ ಪರ ವರ್ಲ್ಡ್​ಕಪ್​ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ಆಟಗಾರನೆಂಬ ದಾಖಲೆ ಸೃಷ್ಟಿಸಿದರು.

ಇನ್ನು ಇದೇ ಪಂದ್ಯದಲ್ಲಿ 5 ಭರ್ಜರಿ ಸಿಕ್ಸರ್​ ಸಿಡಿಸಿ ಮತ್ತೊಂದು ಮೈಲುಗಲ್ಲು ನೆಟ್ಟಿದ್ದಾರೆ. ಸಿಕ್ಸರ್ ಸುರಿಮಳೆ ಮೂಲಕ ಇದೀಗ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಸಿಕ್ಸ್​ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಮೊದಲ ಮೂರು ಸಿಕ್ಸರ್ ಎತ್ತುವುದರೊಂದಿಗೆ ಟೀಂ ಇಂಡಿಯಾದ ಮಾಜಿ ನಾಯಕ ಧೋನಿಯ ದಾಖಲೆಯನ್ನು ಸರಿಗಟ್ಟಿದ್ದ ರೋಹಿತ್ ಮತ್ತೆರೆಡು ಭರ್ಜರಿ ಹೊಡೆತದೊಂದಿಗೆ ಹೊಸ ದಾಖಲೆ ಬರೆದರು.

ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿರುವ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.  ಹಾಗೆಯೇ ಅತ್ಯಧಿಕ ಸಿಕ್ಸ್ ಬಾರಿಸಿದ ವಿಶ್ವದ 4ನೇ ಆಟಗಾರನೆಂಬ ದಾಖಲೆಯನ್ನು ಹಿಟ್​ಮ್ಯಾನ್ ಸೃಷ್ಟಿಸಿದ್ದಾರೆ.

ಏಕದಿನ ಕ್ರಿಕೆಟ್​ನಲ್ಲಿ ಮಹೇಂದ್ರ ಸಿಂಗ್ ಧೋನಿ 228 ಸಿಕ್ಸ್​ ಸಿಡಿಸಿದರೆ, ರೋಹಿತ್ ಶರ್ಮಾ 230 ಸಿಕ್ಸರ್ ಬಾರಿಸಿ ಮಾಜಿ ನಾಯಕನ ದಾಖಲೆ ಮುರಿದಿದರು. 207 ಇನ್ನಿಂಗ್ಸ್‌ನಲ್ಲಿ 230 ಸಿಕ್ಸರ್ ಸಿಡಿಸುವ ಮೂಲಕ ಟೀಂ ಇಂಡಿಯಾದ ಸಿಕ್ಸರ್ ಕಿಂಗ್ ಎಂಬ ಪಟ್ಟವನ್ನು ತಮ್ಮ ಹೆಸರಿಗೆ ಬರೆದುಕೊಂಡರು.

ಒಟ್ಟಾರೆಯಾಗಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್ ಅಫ್ರಿದಿ ಅಗ್ರಸ್ಥಾನದಲ್ಲಿದ್ದರೆ, ಕ್ರಿಸ್ ಗೇಲ್ ದ್ವಿತೀಯ ಸ್ಥಾನವನ್ನು ಅಲಂಕರಿಸಿದ್ದಾರೆ.

ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಆಟಗಾರರು:ಶಾಹೀದ್ ಆಫ್ರಿದಿ- 351 ಸಿಕ್ಸ್​
ಕ್ರಿಸ್ ಗೇಲ್ - 326 ಸಿಕ್ಸ್
ಸನತ್ ಜಯಸೂರ್ಯ -270 ಸಿಕ್ಸ್
ರೋಹಿತ್ ಶರ್ಮಾ - 230 ಸಿಕ್ಸ್
ಮಹೇಂದ್ರ ಸಿಂಗ್ ಧೋನಿ - 228 ಸಿಕ್ಸ್
ಇಯಾನ್ ಮೋರ್ಗನ್-211 ಸಿಕ್ಸ್
ಎಬಿ ಡಿವಿಲಿಯರ್ಸ್- 204 ಸಿಕ್ಸ್
 ಬ್ರ್ಯಾಂಡಮ್ ಮೆಕಲಂ- 200 ಸಿಕ್ಸ್

First published:July 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ