ಪಂತ್ ಮಹಾ ಎಡವಟ್ಟು; ವಿಕೆಟ್ ಮುಂದೆ ಬಾಲ್ ಹಿಡಿದು ಸ್ಟಂಪ್​ಔಟ್​​; ನೋ ಬಾಲ್ ಎಂದ ಅಂಪೈರ್

ಇಂದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಮಾಡದೆ ಕಳೆದ ಪಂದ್ಯದಲ್ಲಿ ಆಡಿದ ಆಟಗಾರರೇ ಕಣಕ್ಕಿಳಿಯುತ್ತಿದ್ದಾರೆ. ಇತ್ತ ಬಾಂಗ್ಲಾದೇಶ ಯಾವುದೇ ಬದಲಾವಣೆ ಮಾಡದೆ ಕಳೆದ ಗೆದ್ದ ತಂಡವನ್ನೇ ಕಣಕ್ಕಿಳಿಸುತ್ತಿದೆ.

Vinay Bhat | news18-kannada
Updated:November 7, 2019, 8:02 PM IST
ಪಂತ್ ಮಹಾ ಎಡವಟ್ಟು; ವಿಕೆಟ್ ಮುಂದೆ ಬಾಲ್ ಹಿಡಿದು ಸ್ಟಂಪ್​ಔಟ್​​; ನೋ ಬಾಲ್ ಎಂದ ಅಂಪೈರ್
ಹೀಗಾಗಿ ಅತ್ತ ಬಾಂಗ್ಲಾ ಹುಡುಗರು ಗೆಲುವು ನಮ್ಮದೇ ಎಂದು ಬೀಗಲಾರಂಭಿಸಿದ್ದರು. ಸುಲಭ ಗುರಿಯನ್ನು ಬೆನ್ನತ್ತಿ ವಿಜಯ ಕೇಕೆ ಹಾಕಬೇಕೆಂದು ಬಯಸಿದ್ದ ಬಾಂಗ್ಲಾ ಆಟಗಾರರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ್ದು ಅಥರ್ವ ಅಂಕೋಲೇಕರ್.
  • Share this:
ಬೆಂಗಳೂರು (ನ. 07): ರಾಜ್ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್​ ಕ್ರೀಡಾಂಗಣದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ನಡುವೆ ಎರಡನೇ ಟಿ-20 ಪಂದ್ಯ ಸಾಗುತ್ತಿದೆ. ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಬಾಂಗ್ಲಾ ಭರ್ಜರಿ ಆಟ ಪ್ರದರ್ಶಿಸುತ್ತಿದೆ.

ಈ ನಡುವೆ ವಿಕೆಟ್ ಕೀಪರ್ ರಿಷಭ್ ಪಂತ್ ಮಾಡಿದ ಎಡವಟ್ಟಿನಿಂದ ಬಾಂಗ್ಲಾ ಬ್ಯಾಟ್ಸ್​ಮನ್​ ಲಿಟನ್ ದಾಸ್ ಜೀವದಾನ ಪಡೆದರು. 6ನೇ ಓವರ್​ನ ಯಜುವೇಂದ್ರ ಚಹಾಲ್​ರ 3ನೇ ಎಸೆತದಲ್ಲಿ ದಾಸ್ ಚೆಂಡನ್ನು ಸಿಕ್ಸ್​ಗೆ ಅಟ್ಟಲು ಕ್ರೀಸ್ ಬಿಟ್ಟು ಎದುರು ಬಂದರು. ಬಾಲ್ ಟರ್ನ್ ಆಗಿದ್ದರಿಂದ ಬ್ಯಾಟಿಂಗ್​ಗೆ ತಾಗದೇ ಚೆಂಡು ಕೀಪರ್ ಪಂತ್ ಕೈಗೆ ಸೇರಿತು.

India vs Bangladesh, Live: ಬಾಂಗ್ಲಾದೇಶದ ಮೊದಲ ವಿಕೆಟ್ ಪತನ

ಈ ಸಂದರ್ಭ ಸ್ಟಂಪ್​ಔಟ್ ಮಾಡುವ ಬರದಲ್ಲಿ ಪಂತ್ ತಮ್ಮ ಕೈಯನ್ನು ವಿಕೆಟ್​ ಮುಂದೆ ತಂದು ಬಾಲ್ ಹಿಡಿದು ಸ್ಟಂಪ್​ಗೆ ಬಾಲ್ ತಾಗಿಸಿದರು. ಮೊದಲಿಗೆ ಔಟ್ ಎಂದು ಭಾವಿಸಿದ್ದ ಎಲ್ಲರು, ಬಳಿಕ ಮೂರನೇ ಅಂಪೈರ್ ಸೂಕ್ಷ್ಮವಾಗಿ ಗಮನಿಸಿದಾಗ ನಾಟೌಟ್ ಎಂದು ತಿಳಿದಿದೆ.

 ಬಳಿಕ 8ನೇ ಓವರ್​ನಲ್ಲಿ ಲಿಟನ್ ದಾಸ್​ರನ್ನು ಅದ್ಭುತವಾಗಿ ರನೌಟ್​ ಮಾಡುವಲ್ಲಿ ಪಂತ್ ಯಶಸ್ವಿಯಾದರು. ಸದ್ಯ ಬಾಂಗ್ಲಾದೇಶ ಭರ್ಜರಿ ಆಟ ಪ್ರದರ್ಶಿಸುತ್ತಿದ್ದು, ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ.

(VIDEO): ಸುದ್ದಿಗೋಷ್ಠಿಯಲ್ಲಿ ರೊಚ್ಚಿಗೆದ್ದ ರೋಹಿತ್ ಶರ್ಮಾ; ಅಷ್ಟಕ್ಕು ಆಗಿದ್ದೇನು ಗೊತ್ತಾ?

 ಇಂದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಮಾಡದೆ ಕಳೆದ ಪಂದ್ಯದಲ್ಲಿ ಆಡಿದ ಆಟಗಾರರೇ ಕಣಕ್ಕಿಳಿಯುತ್ತಿದ್ದಾರೆ. ಇತ್ತ ಬಾಂಗ್ಲಾದೇಶ ಯಾವುದೇ ಬದಲಾವಣೆ ಮಾಡದೆ ಕಳೆದ ಗೆದ್ದ ತಂಡವನ್ನೇ ಕಣಕ್ಕಿಳಿಸುತ್ತಿದೆ.
First published:November 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading