ಬೆಂಗಳೂರು (ನ. 07): ಟೀಂ ಇಂಡಿಯಾ ರಾಜ್ಕೋಟ್ನಲ್ಲಿ ಬಾಂಗ್ಲಾದೇಶ ವಿರುದ್ಧ ಎರಡನೇ ಟಿ-20 ಪಂದ್ಯ ಆಡುತ್ತಿದೆ. ಈಗಾಗಲೇ ಟಾಸ್ ಗೆದ್ದ ರೋಹಿತ್ ಶರ್ಮಾ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇದು ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
![Rohit Sharma Loses Temper As PhoneIndia vs Bangladesh: Rings At A Press Conference]()
ರೋಹಿತ್ ಶರ್ಮಾ
India vs Bangladesh, Live: ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ!
ಈ ನಡುವೆ ಪಂದ್ಯ ಆರಂಭಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ರೋಹಿತ್ ಶರ್ಮಾ ಸಾಕಷ್ಟು ವಿಚಾರವನ್ನು ಹಂಚಿಕೊಂಡರು. ಮೊದಲ ಪಂದ್ಯದ ಸೋಲಿಗೆ ಕಾರಣ ತಿಳಿಸಿದರು. ಅಲ್ಲದೆ ಹಿಂದಿನ ತಪ್ಪನ್ನು ತಿದ್ದಿ ಎರಡನೇ ಟಿ-20ಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಈ ನಡುವೆ ಸುದ್ದಿಗೋಷ್ಠಿ ನಡೆಯುತ್ತಿರುವವಾಗ ಹಿಟ್ಮ್ಯಾನ್ ಪತ್ರಕರ್ತರ ಮೇಲೆ ಕೋಪಗೊಂಡ ಘಟನೆ ನಡೆಯಿತು. ಪ್ರಮುಖ ವಿಚಾರವನ್ನು ಹಂಚಿಕೊಳ್ಳುತ್ತಿರುವಾಗ ಅಲ್ಲಿರುವವರ ಫೋನ್ ಪದೇ ಪದೇ ರಿಂಗ್ ಆಗಿದೆ. ಇದರಿಂದ ಕೋಪಗೊಂಡ ರೋಹಿತ್, ಸ್ವಲ್ಪ ಫೋನ್ ಸೈಲೆಂಟ್ಗೆ ಹಾಕಿ ಬಾಸ್ ಎಂದು ಗದರಿದರು.
ಈ ವಿಡಿಯೋ ಸದ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ಭಾರತ ಹಾಗೂ ಬಾಂಗ್ಲಾಕ್ಕೆ ಇಂದಿನ ಪಂದ್ಯ ಮುಖ್ಯವಾಗಿದೆ. ಭಾರತ ಗೆದ್ದರೆ ಸರಣಿ ಸಮಬಲವಾಗಲಿದೆ. ಎಲ್ಲಾದರು ಬಾಂಗ್ಲಾ ಜಯ ಸಾಧಿಸಿದರೆ ಸರಣಿ ವಶಪಡಿಸಿಕೊಳ್ಳಲಿದೆ. ಹೀಗಾಗಿ ರೋಹಿತ್ ಪಡೆಗೆ ಇದು ಮಾಡುಇಲ್ಲವೇ ಮಡಿ ಪಂದ್ಯದಂತಾಗಿದೆ.
ಐಪಿಎಲ್ನಲ್ಲಿ ಉದ್ಘಾಟನಾ ಸಮಾರಂಭ ರದ್ದು; ಕೋಟಿ- ಕೋಟಿ ಹಣ ಸೇನೆಗೆ ಕೊಡಲು ನಿರ್ಧರಿಸಿದ ಗಂಗೂಲಿ
ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಮಾಡದೆ ಕಳೆದ ಪಂದ್ಯದಲ್ಲಿ ಆಡಿದ ಆಟಗಾರರೇ ಕಣಕ್ಕಿಳಿಯುತ್ತಿದ್ದಾರೆ. ಇತ್ತ ಬಾಂಗ್ಲಾದೇಶ ಕೂಡ ಯಾವುದೇ ಬದಲಾವಣೆ ಮಾಡದೆ ಕಳೆದ ಗೆದ್ದ ತಂಡವನ್ನೇ ಕಣಕ್ಕಿಳಿಸುತ್ತಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಕೆ ಎಲ್ ರಾಹುಲ್, ಶ್ರೇಯಸ್ ಐಯರ್, ರಿಷಭ್ ಪಂತ್ (ವಿಕೆಟ್- ಕೀಪರ್), ಕ್ರುನಾಲ್ ಪಾಂಡ್ಯ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಾಲ್, ಖಲೀಲ್ ಅಹ್ಮದ್, ದೀಪಕ್ ಚಹಾರ್.
ಬಾಂಗ್ಲಾದೇಶ ತಂಡ: ಲಿಟನ್ ದಾಸ್, ಸೌಮ್ಯ ಸರ್ಕಾರ್, ಮೊಹಮ್ಮದ್ ನೈಮ್, ಮುಷ್ಫೀಕರ್ ರಹೀಮ್ (ವಿಕೆಟ್- ಕೀಪರ್), ಮೊಹಮ್ಮದುಲ್ಲ (ನಾಯಕ), ಅಫಿಫ್ ಹೊಸೈನ್, ಮೊಸದ್ದೆಕ್ ಹೊಸೈನ್, ಅಮಿನುಲ್ ಇಸ್ಲಾಂ, ಶಾಫಿಲ್ ಇಸ್ಲಾಂ, ಮುಸ್ತಫಿಜುರ್ ರೆಹ್ಮಾನ್, ಅಲ- ಅಮಿನ್ ಹೊಸೈನ್.