ಟೆಸ್ಟ್​​ ಕ್ರಿಕೆಟ್​ ಮೇಲೆತ್ತಲು ಪಿಂಕ್ ಬಾಲ್​​ ಉತ್ತಮ ಮಾರ್ಗ, ಆದರೆ...; ರಾಹುಲ್ ದ್ರಾವಿಡ್

2001ರ ವೇಳೆ ಈಡನ್ ಗಾರ್ಡನ್ಸ್​ಗೆ ಪಂದ್ಯ ವೀಕ್ಷಿಸಲು 1 ಲಕ್ಷ ಜನರು ಹಾಜರಿರುತ್ತಿದ್ದರು. ಆದರೆ, ಈಗ ಜನರು ಮೈದಾನದತ್ತ ಬರುವುದು ಕಡಿಮೆಯಾಗಿದೆ. ಮನೆಯಲ್ಲಿ ಹೆಚ್.ಡಿ ಟಿವಿಗಳಲ್ಲಿ ಹಾಗೂ ಮೊಬೈಲ್ ಗಳಲ್ಲಿ ಪಂದ್ಯ ವೀಕ್ಷಿಸುತ್ತಾರೆ- ರಾಹುಲ್ ದ್ರಾವಿಡ್

2001ರ ವೇಳೆ ಈಡನ್ ಗಾರ್ಡನ್ಸ್​ಗೆ ಪಂದ್ಯ ವೀಕ್ಷಿಸಲು 1 ಲಕ್ಷ ಜನರು ಹಾಜರಿರುತ್ತಿದ್ದರು. ಆದರೆ, ಈಗ ಜನರು ಮೈದಾನದತ್ತ ಬರುವುದು ಕಡಿಮೆಯಾಗಿದೆ. ಮನೆಯಲ್ಲಿ ಹೆಚ್.ಡಿ ಟಿವಿಗಳಲ್ಲಿ ಹಾಗೂ ಮೊಬೈಲ್ ಗಳಲ್ಲಿ ಪಂದ್ಯ ವೀಕ್ಷಿಸುತ್ತಾರೆ- ರಾಹುಲ್ ದ್ರಾವಿಡ್

2001ರ ವೇಳೆ ಈಡನ್ ಗಾರ್ಡನ್ಸ್​ಗೆ ಪಂದ್ಯ ವೀಕ್ಷಿಸಲು 1 ಲಕ್ಷ ಜನರು ಹಾಜರಿರುತ್ತಿದ್ದರು. ಆದರೆ, ಈಗ ಜನರು ಮೈದಾನದತ್ತ ಬರುವುದು ಕಡಿಮೆಯಾಗಿದೆ. ಮನೆಯಲ್ಲಿ ಹೆಚ್.ಡಿ ಟಿವಿಗಳಲ್ಲಿ ಹಾಗೂ ಮೊಬೈಲ್ ಗಳಲ್ಲಿ ಪಂದ್ಯ ವೀಕ್ಷಿಸುತ್ತಾರೆ- ರಾಹುಲ್ ದ್ರಾವಿಡ್

  • Share this:
ಬೆಂಗಳೂರು (ನ. 20): ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಸದ್ಯ ಎರಡನೇ ಟೆಸ್ಟ್​ಗೆ ಅಭ್ಯಾಸ ನಡೆಸುತ್ತಿದೆ. ಉಭಯ ತಂಡಗಳಿಗೆ 2ನೇ ಟೆಸ್ಟ್​ ಐತಿಹಾಸಿಕ ಪಂದ್ಯವಾಗಲಿದ್ದು ಪಿಂಕ್ ಬಾಲ್​ನಲ್ಲಿ ಡೇ ನೈಟ್ ಮ್ಯಾಚ್ ನಡೆಯಲಿದೆ.

ನವೆಂಬರ್ 22 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನ ಹಗಲು ರಾತ್ರಿ ಟೆಸ್ಟ್​​ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಈ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ಟೆಸ್ಟ್ ಅನ್ನು ನೋಡುವಂತೆ ಮಾಡಲು ಹೊಸ ಪ್ರಯತ್ನವಾಗಿದೆ ಎಂದು ಮಾಜಿ ಆಟಗಾರ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ ಅಧ್ಯಕ್ಷ ರಾಹುಲ್ ದ್ರಾವಿಡ್ ಹೇಳಿದ್ದಾರೆ.

Yuvraj Singh: ಕೋಚ್ ಆಗಲಿರುವ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್; ಯಾವಾಗ?

"ಟೆಸ್ಟ್​​ ಕ್ರಿಕೆಟ್​ ಅನ್ನು ಮೇಲೆತ್ತಲು ಇದೊಂದು ಮಾರ್ಗ. ಆದರೆ, ಈ ಇದೊಂದೇ ದಾರಿ ಸಾಲದು. ಸಾಮಾನ್ಯವಾಗಿ ಮೈದಾನದಲ್ಲಿನ ತೇವಾಂಶದಿಂದ ಚೆಂಡು ಒದ್ದೆಯಾದರೆ ಬೌಲರ್‌ಗಳಿಗೆ ಬಾಲ್ ಮಾಡಲು ಕಷ್ಟವಾಗುತ್ತದೆ. ಅಷ್ಟೇ ಅಲ್ಲದೆ ಚೆಂಡಿನಲ್ಲಿ ಯಾವುದೇ ಸ್ವಿಂಗ್‌ ಉಳಿಯುವುದಿಲ್ಲ. ಆದರೂ ಪಿಂಕ್‌ ಬಾಲ್‌ ಮೂಲಕ ಕ್ರೀಡಾಂಗಣಕ್ಕೆ ಜನರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ ಎಂದರೆ ಪ್ರಯತ್ನಿಸಲೇಬೇಕು" ಎಂಬುದು ದ್ರಾವಿಡ್ ಮಾತು.

"2001ರ ವೇಳೆ ಈಡನ್ ಗಾರ್ಡನ್ಸ್​ಗೆ ಪಂದ್ಯ ವೀಕ್ಷಿಸಲು 1 ಲಕ್ಷ ಜನರು ಹಾಜರಿರುತ್ತಿದ್ದರು. ಆದರೆ, ಈಗ ಜನರು ಮೈದಾನದತ್ತ ಬರುವುದು ಕಡಿಮೆಯಾಗಿದೆ. ಮನೆಯಲ್ಲಿ ಹೆಚ್.ಡಿ ಟಿವಿಗಳಲ್ಲಿ ಹಾಗೂ ಮೊಬೈಲ್ ಗಳಲ್ಲಿ ಪಂದ್ಯ ವೀಕ್ಷಿಸುತ್ತಾರೆ"

"ಆದರೆ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಣ ಆ್ಯಷಸ್ ಟೆಸ್ಟ್ ಪಂದ್ಯ ವೀಕ್ಷಿಸಲು ಜನರು ಕಿಕ್ಕಿರಿದು ಸೇರುತ್ತಾರೆ. ಏಕೆಂದರೆ, ಅದು ಎರಡೂ ದೇಶಗಳು ಸರಣಿಗೆ ಉತ್ತಮವಾಗಿ ಯೋಜನೆ ರೂಪಿಸಿಕೊಳ್ಳುತ್ತವೆ" ಎಂದು ದ್ರಾವಿಡ್ ಹೇಳಿದ್ದಾರೆ.

ಈ ಅದ್ಭುತ ಘಳಿಗೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಜರಿರಲಿದ್ದಾರೆ. ಶಾ ಜೊತೆ ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಉಪಸ್ಥಿತರಿರಲಿದ್ದಾರೆ.

ಫೀಫಾ ವಿಶ್ವಕಪ್ ಕ್ವಾಲಿಫಯರ್: ಐದನೇ ಪಂದ್ಯದಲ್ಲೂ ಭಾರತಕ್ಕೆ ದಕ್ಕದ ಗೆಲುವು; ಓಮನ್ ಎದುರು ಸೋಲಿನ ಆಘಾತ

ಈ ದಿನ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು, ಒಲಿಂಪಿಕ್ ದಿಗ್ಗಜರಾದ ಶೂಟಿಂಗ್ ಸ್ಟಾರ್ ಅಭಿನವ್ ಬಿಂದ್ರಾ, ಮಹಿಳಾ ಬಾಕ್ಸರ್ ಮೇರಿ ಕೋಮ್, ಬ್ಯಾಡ್ಮಿಂಟನ್ ಸ್ಟಾರ್ ಪಿ.ವಿ. ಸಿಂಧು ಸೇರಿ ಮೊದಲಾದವರನ್ನು ಸನ್ಮಾನಿಸಲು ಬಿಸಿಸಿಐ ಉದ್ದೇಶಿಸಿದೆ. ಜೊತೆಗೆ ಸಚಿನ್ ತೆಂಡೂಲ್ಕರ್ ಅವರಿಂದ ಭಾಷಣ ಏರ್ಪಡಿಸಲಾಗಿದೆ.

ಇನ್ನು ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ಅವರನ್ನು ಡೇ ನೈಟ್ ಟೆಸ್ಟ್​ಗೆ ಕಾಮೆಂಟೇಟರ್ ಆಗಿ ಆಹ್ವಾನಿಸಲಾಗಿದೆ. ಆದರೆ, ಧೋನಿ ಉಪಸ್ಥಿತಿ ಇದೆಯೇ ಎಂಬ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹೊನಲು ಬೆಳಕಿನ ಟೆಸ್ಟ್ ಪಂದ್ಯ ಹೊಸತಲ್ಲ. ಕ್ರಿಕೆಟ್ ಇತಿಹಾಸದಲ್ಲಿ ಇದೂವರೆಗೂ 11 ಬಾರಿ ಡೇ ನೈಟ್ ಟೆಸ್ಟ್ ಪಂದ್ಯಗಳು ನಡೆದಿವೆ. ಭಾರತ ಮತ್ತು ಬಾಂಗ್ಲಾದೇಶದ್ದು ಇಂದು 12ನೇ ಪಂದ್ಯವಾಗಿದೆ.

First published: