IND vs BAN: ರೋಹಿತ್ ಪಡೆಗೆ ಹೀನಾಯ ಸೋಲು; ಭಾರತ ವಿರುದ್ಧ ಚೊಚ್ಚಲ ಟಿ-20 ಗೆದ್ದ ಬಾಂಗ್ಲಾ!

7 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ಬಾಂಗ್ಲಾದೇಶ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಅಲ್ಲದೆ ಅಂತರಾಷ್ಟ್ರೀಯ ಟಿ-20 ಪಂದ್ಯದಲ್ಲಿ ಭಾರತ ವಿರುದ್ಧ ಬಾಂಗ್ಲಾದೇಶ ಸಾಧಿಸಿದ ಮೊಟ್ಟ ಮೊದಲ ಗೆಲುವು ಇದಾಗಿದೆ.

ಭಾರತ vs ಬಾಂಗ್ಲಾದೇಶ

ಭಾರತ vs ಬಾಂಗ್ಲಾದೇಶ

  • Share this:
ಬೆಂಗಳೂರು (ನ. 04): ಬಾಂಗ್ಲಾದೇಶ ವಿರುದ್ಧದ ಸರಣಿಯನ್ನು ಕೆಟ್ಟದಾಗಿ ಆರಂಭಿಸಿರುವ ಟೀಂ ಇಂಡಿಯಾ ಮೊದಲ ಟಿ-20 ಪಂದ್ಯದಲ್ಲೇ ಸೋಲುಂಡಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಉತ್ತಮ ಶುಭಾರಂಭ ಮಾಡಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಭಾರತಕ್ಕೆ ಆರಂಭದಲ್ಲೆ ನಾಯಕ ರೋಹಿತ್ ಶರ್ಮಾ(9) ಔಟ್ ಆಗುವ ಮೂಲಕ ಆಘಾತ ನೀಡಿದರು. ಕೆ ಎಲ್ ರಾಹುಲ್ ಕೂಡ ಕಮ್​ಬ್ಯಾಕ್ ಮಾಡಲು ವಿಫಲರಾದರು. 15 ರನ್ ಗಳಿಸಿ ನಿರ್ಗಮಿಸಿದರು.

 ಹೀಗೆ ಎರಡು ಪ್ರಮುಖ ವಿಕೆಟ್ ಕಳೆದುಕೊಂಡರು ಶಿಖರ್ ಧವನ್ ತಂಡದ ರನ್ ಗತಿಯನ್ನು ಏರಿಸಲು ಯತ್ನಿಸಿದರು. ಇವರ ಜೊತೆ ಶ್ರೇಯಸ್ ಐಯರ್ ಕೂಡ ಪ್ರಯತ್ನ ಪಟ್ಟರು. ಐಯರ್ 13 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಸಿಡಿಸಿ 22 ರನ್​ಗೆ ಔಟ್ ಆದರು. ಧವನ್41 ರನ್ ಗಳಿಸಿರುವಾಗ ರನೌಟ್​ಗೆ ಬಲಿಯಾಗಬೇಕಾಯಿತು.

IND vs BAN: ಟೀಂ ಇಂಡಿಯಾಕ್ಕೆ ಸಿಕ್ಕ ಮತ್ತೊಬ್ಬ ಯುವರಾಜ; ಯಾರೀತ ಗೊತ್ತೆ?, ಇಂದಿನ ಪಂದ್ಯದಲ್ಲಿ ಕಣಕ್ಕೆ ಸಾಧ್ಯತೆ!

ಇತ್ತ ರಿಷಭ್ ಪಂತ್(27) ಕೆಲಹೊತ್ತು ಬ್ಯಾಟ್ ಬೀಸಿದರಷ್ಟೆ. ಪದಾರ್ಪಣೆ ಪಂದ್ಯದಲ್ಲಿ ಶಿವಂ ಬುಬೆ(1) ಆಟ ನಡೆಯಲಿಲ್ಲ. ಕೊನೆಯಲ್ಲಿ ಕ್ರುನಾಲ್ ಪಾಂಡ್ಯ(15*) ಹಾಗೂ ವಾಷಿಂಗ್ಟನ ಸುಂದರ್(14*) ಅಬ್ಬರಿಸಿದ ಪರಿಣಾಮ ಬಾರತ 20 ಓವರ್​ಗೆ 6 ವಿಕೆಟ್ ಕಳೆದುಕೊಂಡು 148 ರನ್ ಕಲೆಹಾಕಿತು. ಬಾಂಗ್ಲಾ ಪರ ಶಾಯ್​ಫುಲ್ ಇಸ್ಲಾಂ ಹಾಗೂ ಅಮಿನುಲ್ ಇಸ್ಲಾಂ ತಲಾ 2 ವಿಕೆಟ್ ಪಡೆದರು.

149 ರನ್​ಗಳ ಸಾಧಾರಣ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಆರಂಭದಲ್ಲೇ ಲಿಟನ್ ದಾಸ್(7) ವಿಕೆಟ್ ಕಳೆದುಕೊಂಡಿತಾದರು, ಬಳಿಕ ಅತ್ಯುತ್ತಮ ಆಟ ಪ್ರದರ್ಶಿಸಿತು. ಮೊಹಮ್ಮದ್ ನಸೀಂ 28 ಎಸೆತಗಳಲ್ಲಿ 26 ರನ್ ಗಳಿಸಿದರು.

ಸೌಮ್ಯ ಸರ್ಕಾರ್ ಹಾಗೂ ಅನುಭವಿ ಮುಷ್ಫೀಕರ್ ರಹೀಮ್ ಜೊತೆಯಾಟ ತಂಡದ ಗೆಲುವಿನಲ್ಲಿ ಪ್ರಮುಕ ಪಾತ್ರವಹಿಸಿತು. ಅದ್ಭುತ ಆಟವಾಡಿದ ಇವರು 60 ರನ್​ಗಳ ಕಾಣಿಕೆ ಜೊತೆ ತಂಡದ ಮೊತ್ತವನ್ನು 100ರ ಗಡಿ ದಾಟಿಸಿ ಗೆಲುವನ್ನು ಸನಿಹ ತಂದರು. ಸರ್ಕಾರ್ 35 ಎಸೆತಗಳಲ್ಲಿ 39 ರನ್ ಗಳಿಸಿ ಔಟ್ ಆದರು.

ಕೊನೆಯಲ್ಲಿ ನಾಯಕ ಮೊಹಮ್ಮದುಲ್ಲ ಜೊತೆಗೂಡಿ ರಹೀಂ ಸ್ಫೋಟಕ ಆಟವಾಡಿ ತಂಡಕ್ಕೆ ಗೆಲುವು ತಂದಿಟ್ಟರು. ಪರಿಣಾಮ ಬಾಂಗ್ಲಾದೇಶ 19.3 ಓವರ್​ನಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 154 ರನ್ ಕಲೆಹಾಕಿ ಗೆದ್ದು ಬೀಗಿತು.

 ರಹೀಮ್ 43 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಿಡಿಸಿ ಅಜೇಯ 60 ರನ್ ಬಾರಿಸಿದರೆ, ಮೊಹಮ್ಮದುಲ್ಲ ಅಜೇಯ 15 ರನ್ ಗಳಿಸಿದರು. ಭಾರತ ಪರ ದೀಪಕ್ ಚಹಾರ್, ಖಲೀಲ್ ಅಹ್ಮದ್ ಹಾಗೂ ಚಹಾಲ್ ತಲಾ 1 ವಿಕೆಟ್ ಪಡೆದರು.

7 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ಬಾಂಗ್ಲಾದೇಶ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಅಲ್ಲದೆ ಅಂತರಾಷ್ಟ್ರೀಯ ಟಿ-20 ಪಂದ್ಯದಲ್ಲಿ ಭಾರತ ವಿರುದ್ಧ ಬಾಂಗ್ಲಾದೇಶ ಸಾಧಿಸಿದ ಮೊಟ್ಟ ಮೊದಲ ಗೆಲುವು ಇದಾಗಿದೆ. ಮುಷ್ಫೀಕರ್ ರಹೀಮ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.
First published: