ಭಾರತ- ಬಾಂಗ್ಲಾ ಡೇ ನೈಟ್ ಟೆಸ್ಟ್​​ನಲ್ಲಿ ಇದೇ ಮೊದಲ ಬಾರಿಗೆ ಕಾಮೆಂಟೇಟರ್ ಆಗಿ ಎಂಎಸ್ ಧೋನಿ

ಈಗಾಗಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ನಾವು ಪ್ರತೀ ವರ್ಷವೂ ಭಾರತದಲ್ಲಿ ಡೇ ನೈಟ್ ಟೆಸ್ಟ್ ಪಂದ್ಯ ಆಯೋಜಿಸಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. ಹೀಗಿರುವಾಗ ಕ್ರಿಕೆಟ್ ವಲಯದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ.

ವೆಸ್ಟ್ ಇಂಡೀಸ್, ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಮೈದಾನಕ್ಕಿಳಿಯದ ಮಾಹಿ, ತವರಿನಲ್ಲಿ ನಡೆಯಲಿರುವ ವಿಂಡೀಸ್ ಸರಣಿಯಿಂದಲೂ ಕಣಕ್ಕಿಯಲ್ಲ ಎಂಬ ವಿಚಾರ ಗೊತ್ತಾಗಿದೆ.

ವೆಸ್ಟ್ ಇಂಡೀಸ್, ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಮೈದಾನಕ್ಕಿಳಿಯದ ಮಾಹಿ, ತವರಿನಲ್ಲಿ ನಡೆಯಲಿರುವ ವಿಂಡೀಸ್ ಸರಣಿಯಿಂದಲೂ ಕಣಕ್ಕಿಯಲ್ಲ ಎಂಬ ವಿಚಾರ ಗೊತ್ತಾಗಿದೆ.

  • Share this:
ಹೊನಲು ಬೆಳಕಿನ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಭಾರತ ಅಡಿ ಇಡುತ್ತಿದೆ. ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಒಂದು ಪಂದ್ಯವನ್ನು ಹೊನಲು ಬೆಳಕಿನಲ್ಲಿ ಆಡಲು ನಿರ್ಧರಿಸಲಾಗಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯೂ ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದೆ.

ಭಾರತ- ಬಾಂಗ್ಲಾದೇಶ ನಡುವಣ ಕ್ರಿಕೆಟ್ ಸರಣಿಯ ಕೊನೆಯ ಟೆಸ್ಟ್ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದ್ದು ಡೇ ನೈಟ್ ಮ್ಯಾಚ್ ಆಗಿರಲಿದೆ. ಈ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಈಗಿನಿಂದಲೆ ಬಿಸಿಸಿಐ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕ್ರಿಕೆಟ್ ಇತಿಹಾಸದಲ್ಲಿ ಭಾರತಕ್ಕೆ ಇದು ಚೊಚ್ಚಲ ಡೇ ನೈಟ್ ಟೆಸ್ಟ್ ಪಂದ್ಯವಾಗಿರಲಿದೆ. ನವೆಂಬರ್ 22ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.

ವಿಡಿಯೋ ಕಾಲ್​ನಲ್ಲಿ ಹಸ್ತಮೈಥುನ ಮಾಡಿದ ಆರೋಪ; ಮೌನ ಮುರಿದ ಪಾಕಿಸ್ತಾನ ಯುವ ಕ್ರಿಕೆಟಿಗ

ಈಗಾಗಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ನಾವು ಪ್ರತೀ ವರ್ಷವೂ ಭಾರತದಲ್ಲಿ ಡೇ ನೈಟ್ ಟೆಸ್ಟ್ ಪಂದ್ಯ ಆಯೋಜಿಸಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. ಹೀಗಿರುವಾಗ ಕ್ರಿಕೆಟ್ ವಲಯದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ.

ಟೀಂ ಇಂಡಿಯಾ ಮಾಜಿ ನಾಯಕ, ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಈ ಡೇ ನೈಟ್​ ಟೆಸ್ಟ್​ಗೆ ಸಾಕ್ಷಿಯಾಗಲಿದ್ದಾರೆ. ಮಾಹಿತಿಯ ಪ್ರಕಾರ ಎಂಎಸ್ ಧೋನಿ ಡೇ ನೈಟ್​​ ಟೆಸ್ಟ್​ನ ಮೊದಲ ಎರಡು ದಿನ ಕಾಮೆಂಟೇರ್ ಆಗಿ ಕಾರ್ಯನಿರ್ವಹಿಸಲಿದ್ದಾರಂತೆ. ಹಾಗೆಲ್ಲಾದರು ಧೋನಿ ವೀಕ್ಷಕ ವಿವರಣೆಗಾರರಾಗಿ ಕಾರ್ಯ ನಿರ್ವಹಿಸಲು ಒಪ್ಪಿದ್ದೆ ಆದಲ್ಲಿ ಇದೇ ಮೊದಲ ಬಾರಿಗೆ ಕೂಲ್ ಕ್ಯಾಪ್ಟನ್​ನನ್ನು ಕಾಮೆಂಟೇಟರ್ ಆಗಿ ನೋಡಲಿದ್ದೇವೆ.

ಸಾಮಾನ್ಯವಾಗಿ ಡೇ ನೈಟ್ ಟೆಸ್ಟ್ ಪಂದ್ಯ ಮಧ್ಯಾಹ್ನಾ 2:30ಕ್ಕೆ ಆರಂಭವಾಗುತ್ತದೆ. ಆದರೆ, ಭಾರತ- ಬಾಂಗ್ಲಾ ನಡುವಣ ಡೇ ನೈಟ್ ಟೆಸ್ಟ್ ಸ್ವಲ್ಪ ಬೇಗೆ 1:30ಕ್ಕೆ ಶುರುಮಾಡುವ ಬಗ್ಗೆ ಮಾತುಕತೆ ನಡೆಯುತ್ತದೆ. ರಾತ್ರಿ ಸುಮಾರು 8:30 ಹೊತ್ತಿಗೆ ದಿನದ ಆಟವನ್ನು ಅಂತ್ಯಗೊಳಿಸುವ ಚಿಂತನೆಯಾಗುತ್ತಿದೆ.

ನಮ್ಮ ಆಟಗಾರರು ವಿಶ್ರಾಂತಿ ಪಡೆದರೆ ಮತ್ತೆ ಸ್ಥಾನ ಸಿಗುವುದಿಲ್ಲ; ಆಯ್ಕೆ ಸಮಿತಿ ವಿರುದ್ಧ ಯುವಿ ಗರಂ

ನವೆಂಬರ್ 22ರಂದು ನಡೆಯಲಿರುವ ಈ ಪಂದ್ಯಕ್ಕೆ ವಿವಿಧ ಕ್ರೀಡೆಗಳ ಸೂಪರ್​ಸ್ಟಾರ್​ಗಳು ಸಾಕ್ಷಿಯಾಗಲಿದ್ದಾರೆ. ಒಲಿಂಪಿಕ್ ದಿಗ್ಗಜರಾದ ಶೂಟಿಂಗ್ ಸ್ಟಾರ್ ಅಭಿನವ್ ಬಿಂದ್ರಾ, ಮಹಿಳಾ ಬಾಕ್ಸರ್ ಮೇರಿ ಕೋಮ್, ಬ್ಯಾಡ್ಮಿಂಟನ್ ಸ್ಟಾರ್ ಪಿ.ವಿ. ಸಿಂಧು ಮೊದಲಾದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲು ಬಿಸಿಸಿಐ ಉದ್ದೇಶಿಸಿದೆ.

First published: