(VIDEO): ಸೆಂಚುರಿ ಸಿಡಿಸಿದಾಗ ಪೆವಿಲಿಯನ್​ನಿಂದ ಕೊಹ್ಲಿ ಕೊಟ್ರು ಸಿಗ್ನಲ್; ಓಕೆ ಎಂದ ಮಯಾಂಕ್

ಕೊಹ್ಲಿ ಹೇಳಿದಂತೆ ಮಯಾಂಕ ದ್ವಿಶತಕದತ್ತ ದಾಪುಗಾಲಿಡುತ್ತಿದ್ದಾರೆ. ಟೀ ವಿರಾಮದ ವೇಳೆಗೆ ಅಗರ್ವಾಲ್ 251 ಎಸೆತಗಳಲ್ಲಿ 21 ಬೌಂಡರಿ, 3 ಸಿಕ್ಸರ್ ಸಿಡಿಸಿ 156 ರನ್ ಗಳಿಸಿದ್ದಾರೆ.

ಮಯಾಂಕ್ ಅಗರ್ವಾಲ್ ಹಾಗೂ ವಿರಾಟ್ ಕೊಹ್ಲಿ

ಮಯಾಂಕ್ ಅಗರ್ವಾಲ್ ಹಾಗೂ ವಿರಾಟ್ ಕೊಹ್ಲಿ

  • Share this:
ಬೆಂಗಳೂರು (ನ. 15): ಇಂದೋರ್​ನ ಹೋಲ್ಕಾರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸಾಗುತ್ತಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ. ಅಜಿಂಕ್ಯಾ ರಹಾನೆ ಹಾಗೂ ಮಯಾಂಕ್ ಅಗರ್ವಾಲ್ ದ್ವಿಶತಕದ ಜೊತೆಯಾಟದತ್ತ ದಾಪುಗಾಲಿಡುತ್ತಿದ್ದು ತಂಡದ ಮೊತ್ತ 300ರ ಗಡಿ ದಾಟಿದೆ.

ಈ ನಡುವೆ ಮಯಾಂಕ್ ಅಗರ್ವಾಲ್ 183 ಎಸೆತಗಳಲ್ಲಿ 15 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ ಟೆಸ್ಟ್​ ಕ್ರಿಕೆಟ್​ನಲ್ಲಿ 3ನೇ ಶತಕ ಪೂರೈಸಿದ್ದಾರೆ. ಅಲ್ಲದೆ ದ್ವಿಶತಕದತ್ತ ಮುನ್ನುಗ್ಗುತ್ತಿದ್ದಾರೆ. ಮಯಾಂಕ್ ಸೆಂಚುರಿ ಬಾರಿಸುತ್ತಿದ್ದಂತೆ ಪೆವಿಲಿಯನ್​ ಕಡೆ ತಿರುಗಿ ಬ್ಯಾಟ್ ಮೇಲೆತ್ತಿ ಸಂಭ್ರಮಿಸಿದರು.

 Watch: Mayank Agarwal responds with thumbs up after Virat Kohli signals him to go for 200
ಮಯಾಂಕ್ ಅಗರ್ವಾಲ್​ಗೆ ಸಿಗ್ನಲ್ ನೀಡುತ್ತಿರುವ ವಿರಾಟ್ ಕೊಹ್ಲಿ


Prithvi Shaw: ಪೃಥ್ವಿ ಶಾ ನಿಷೇಧ ಇಂದಿಗೆ ಮುಕ್ತಾಯ; ನ. 17ಕ್ಕೆ ಮುಂಬೈ ತಂಡ ಸೇರ್ಪಡೆ!

ಈ ವೇಳೆ ಪೆವಿಲಿಯನ್​ನಲ್ಲಿದ್ದ ನಾಯಕ ವಿರಾಟ್ ಕೊಹ್ಲಿ, ಮಯಾಂಕ್​ಗೆ 200 ರನ್ ಬಾರಿಸು ಎಂದು ಕೈಯಲ್ಲಿ ಸಿಗ್ನಲ್ ಕೊಟ್ಟಿದ್ದಾರೆ. ಇದಕ್ಕೆ ಮಯಾಂಕ್ ಕೂಡ ಓಕೆ ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.

 ಕೊಹ್ಲಿ ಹೇಳಿದಂತೆ ಮಯಾಂಕ್ ದ್ವಿಶತಕದತ್ತ ದಾಪುಗಾಲಿಡುತ್ತಿದ್ದಾರೆ. ಟೀ ವಿರಾಮದ ವೇಳೆಗೆ ಅಗರ್ವಾಲ್ 251 ಎಸೆತಗಳಲ್ಲಿ 21 ಬೌಂಡರಿ, 3 ಸಿಕ್ಸರ್ ಸಿಡಿಸಿ 156 ರನ್ ಗಳಿಸಿದ್ದಾರೆ. ಇತ್ತ ರಹಾನೆ 168 ಎಸೆತಗಳಲ್ಲಿ 8 ಬೌಂಡರಿ ಬಾರಿಸಿ 82 ರನ್ ಗಳಿಸಿದ್ದಾರೆ. ಭಾರತ ಬೃಹತ್ ಮೊತ್ತದತ್ತ ಚಿತ್ತ ನೆಟ್ಟಿದೆ.

ನಿನ್ನೆ ಬಾಂಗ್ಲಾದೇಶವನ್ನು 150 ರನ್​ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್​ ಆರಂಭಿಸಿದ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 86 ರನ್ ಕಲೆಹಾಕಿತ್ತು. ಪೂಜಾರ 43 ಹಾಗೂ ಅಗರ್ವಾಲ್ 37 ರನ್ ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.

ಕೊಹ್ಲಿ-ಎಬಿಡಿಯನ್ನು ಖರೀದಿಸಲು ಮುಂದಾದ ರಾಜಸ್ಥಾನ್; ಆರ್​ಸಿಬಿ ನೀಡಿದ ಉತ್ತರವೇನು ಗೊತ್ತಾ?

ಅದರಂತೆ ಇಂದು ಬ್ಯಾಟಿಂಗ್ ಮುಂದುವರೆಸಿದ ಇವರಿಬ್ಬರು ಪೈಕಿ ಚೇತೇಶ್ವರ್ ಪೂಜಾರ ಅರ್ಧಶತಕದ ಬಾರಿಸಿದ ಬೆನ್ನಲ್ಲೆ ನಿರ್ಗಮಿಸಿದರು. ಸೈಫ್ ಹಸನ್​ಗೆ ಕ್ಯಾಚಿತ್ತು72 ಎಸೆತಗಳಲ್ಲಿ 54 ರನ್​​ಗೆ ಪೂಜಾರ ತಮ್ಮ ಇನ್ನಿಂಗ್ಸ್​ ಅಂತ್ಯಗೊಳಿಸಿದರು. ನಾಯಕ ವಿರಾಟ್ ಕೊಹ್ಲಿ ಬಂದ ಬೆನ್ನಲ್ಲೆ ಎಲ್​ಬಿ ಬಲೆಗೆ ಸಿಲುಕಿ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರು.

 

First published: