India vs Bangladesh: ಚಹಾರ್​ ಹ್ಯಾಟ್ರಿಕ್​, ಭಾರತದ ವಿರುದ್ಧ ಮಂಡಿಯೂರಿದ ಬಾಂಗ್ಲಾ; ಟೀಂ ಇಂಡಿಯಾಗೆ ಟಿ20 ಸರಣಿ

ಬೃಹತ್​ ಗುರಿ ಬೆನ್ನು ಹತ್ತಿದ ಬಾಂಗ್ಲಾಗೂ ಆರಂಭಿಕ ಆಘಾತ ಕಾಡಿದೆ. ಲಿಟನ್​ ದಾಸ್​ 9 ರನ್​ಗೆ ಔಟ್​ ಆದರೆ, ಸೌಮ್ಯ ಸರ್ಕಾರ ಡಕ್​ಔಟ್​ ಆದರು. ಹಾಲಿ ಬಾಂಗ್ಲಾ 73ಕ್ಕೆ 2 ವಿಕೆಟ್​ ಪಡೆದುಕೊಂಡಿದೆ. 

news18-kannada
Updated:November 11, 2019, 10:50 AM IST
India vs Bangladesh: ಚಹಾರ್​ ಹ್ಯಾಟ್ರಿಕ್​, ಭಾರತದ ವಿರುದ್ಧ ಮಂಡಿಯೂರಿದ ಬಾಂಗ್ಲಾ; ಟೀಂ ಇಂಡಿಯಾಗೆ ಟಿ20 ಸರಣಿ
ಟೀಂ ಇಂಡಿಯಾ
  • Share this:
ನಾಗಪುರ (ನ.10): ನಾಗ್ಪುರದಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧ ಮೂರನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲುವ ಮೂಲಕ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಮೊದಲು ಬ್ಯಾಟ್​ ಮಾಡಿದ್ದ ಭಾರತ ಆರಂಭಿಕ ಆಘಾತ ಎದುರಿಸಿತು. ರೋಹಿತ್​ ಶರ್ಮಾ 2 ರನ್​ಗೆ ಔಟ್​ ಆದರೆ, ಶಿಖರ್​ ದವನ್​ 19ರನ್​ಗೆ ಪೆವಿಲಿಯನ್​ ಸೇರಿದರು. ನಂತರ ಕನ್ನಡಿಗ ಕೆಎಲ್​ ರಾಹುಲ್ (52) ಹಾಗೂ ಶ್ರೇಯಸ್​ ಐಯ್ಯರ್​ (62) ಎಚ್ಚರಿಕೆಯ ಆಟವಾಡಿದರು. ಭಾರತ 20 ಓವರ್​ಗಳಲ್ಲಿ 5 ವಿಕೆಟ್​  ಕಳೆದುಕೊಂಡು 174 ರನ್​ ಗಳಿಸಿತು.

ಬೃಹತ್​ ಗುರಿ ಬೆನ್ನು ಹತ್ತಿದ ಬಾಂಗ್ಲಾಗೂ ಆರಂಭಿಕ ಆಘಾತ ಕಾಡಿದೆ. ಲಿಟನ್​ ದಾಸ್​ 9 ರನ್​ಗೆ ಔಟ್​ ಆದರೆ, ಸೌಮ್ಯ ಸರ್ಕಾರ ಡಕ್​ಔಟ್​ ಆದರು. ನಂತರ ಸಾಲು ಸಾಲು ವಿಕೆಟ್​ಗಳು ಬಿದ್ದವು. ಕೊನೆಗೆ ಬಾಂಗ್ಲಾ 19ನೇ ಒವರ್​ನಲ್ಲಿ ಆಲ್​ಔಟ್​ ಆಗಿದೆ.

ಮೊದಲ ಟಿ-20 ಮ್ಯಾಚ್​ನಲ್ಲಿ ಸೋತ ನಂತರ ಭಾರತ ಎಚ್ಚರಿಕೆಯ ಆಟವಾಡುತ್ತಿದೆ. ಎರಡನೇ ಟಿ-20 ಪಂದ್ಯ ಗೆದ್ದಿದ್ದು, ಈ ಪಂದ್ಯದಲ್ಲೂ ಜಯಶಾಲಿ ಆಗುವ ಮೂಲಕ ಭಾರತಕ್ಕೆ ಸರಣಿ ಒಲಿಯಿತು.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಕೆ ಎಲ್ ರಾಹುಲ್, ಶ್ರೇಯಸ್ ಐಯರ್, ರಿಷಭ್ ಪಂತ್ (ವಿಕೆಟ್- ಕೀಪರ್), ಕ್ರುನಾಲ್ ಪಾಂಡ್ಯ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಾಲ್, ಖಲೀಲ್ ಅಹ್ಮದ್, ದೀಪಕ್ ಚಹಾರ್.

ಬಾಂಗ್ಲಾದೇಶ ತಂಡ: ಲಿಟನ್ ದಾಸ್, ಸೌಮ್ಯ ಸರ್ಕಾರ್, ಮೊಹಮ್ಮದ್ ನೈಮ್, ಮುಷ್ಫೀಕರ್ ರಹೀಮ್ (ವಿಕೆಟ್- ಕೀಪರ್), ಮೊಹಮ್ಮದುಲ್ಲ (ನಾಯಕ), ಅಫಿಫ್ ಹೊಸೈನ್, ಮೊಸದ್ದೆಕ್ ಹೊಸೈನ್, ಅಮಿನುಲ್ ಇಸ್ಲಾಂ, ಶಾಫಿಲ್ ಇಸ್ಲಾಂ, ಮುಸ್ತಫಿಜುರ್ ರೆಹ್ಮಾನ್, ಅಲ- ಅಮಿನ್ ಹೊಸೈನ್.

First published:November 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading