India vs Bangladesh: ಭಾರತಕ್ಕೆ ಇನ್ನಿಂಗ್ಸ್ ಹಾಗೂ 130 ರನ್​ಗಳ ಜಯ; ಮೂರೇ ದಿನಕ್ಕೆ ಅಂತ್ಯಕಂಡ ಮೊದಲ ಟೆಸ್ಟ್​

ಇನ್ನಿಂಗ್ಸ್​ ಹಾಗೂ 130 ರನ್​ಗಳ ಭರ್ಜರಿ ಜಯದೊಂದಿಗೆ ಮೂರೇ ದಿನದಲ್ಲಿ ಮೊದಲ ಟೆಸ್ಟ್​ ಅನ್ನು ಭಾರತ ಅಂತ್ಯಗೊಳಿಸಿದೆ. ಎರಡು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

Vinay Bhat | news18-kannada
Updated:November 16, 2019, 3:54 PM IST
India vs Bangladesh: ಭಾರತಕ್ಕೆ ಇನ್ನಿಂಗ್ಸ್ ಹಾಗೂ 130 ರನ್​ಗಳ ಜಯ; ಮೂರೇ ದಿನಕ್ಕೆ ಅಂತ್ಯಕಂಡ ಮೊದಲ ಟೆಸ್ಟ್​
ಇನ್ನಿಂಗ್ಸ್​ ಹಾಗೂ 130 ರನ್​ಗಳ ಭರ್ಜರಿ ಜಯದೊಂದಿಗೆ ಮೂರೇ ದಿನದಲ್ಲಿ ಮೊದಲ ಟೆಸ್ಟ್​ ಅನ್ನು ಭಾರತ ಅಂತ್ಯಗೊಳಿಸಿದೆ. ಎರಡು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
  • Share this:
ಬೆಂಗಳೂರು (. 16): ಇಂದೋರ್​​ ಹೋಲ್ಕಾರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ಪಂದ್ಯದಲ್ಲಿ ಕೊಹ್ಲಿ ಪಡೆ ಭರ್ಜರಿ ಗೆಲುವು ಸಾಧಿಸಿದೆ. ಟೀಂ ಇಂಡಿಯಾ ಬೌಲರ್​ಗಳ ಸಂಘಟಿತ ದಾಳಿಗೆ ನಲುಗಿದ ಬಾಂಗ್ಲಾ 2ನೇ ಇನ್ನಿಂಗ್ಸ್​ನಲ್ಲಿ 213 ರನ್​ಗೆ ಆಲೌಟ್ ಆಯಿತು. ಈ ಮೂಲಕ ಇನ್ನಿಂಗ್ಸ್ಹಾಗೂ 130 ರನ್​ಗಳಿಂದ ಭಾರತ ಗೆದ್ದು ಬೀಗಿದೆ.

ಬಾಂಗ್ಲಾದೇಶವನ್ನು 150 ರನ್​ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್​ ಆರಂಭಿಸಿದ ಭಾರತ ಮಯಾಂಕ್ ಅಗರ್ವಾಲ್ ಅವರ ಅಮೋಘ 243 ರನ್, ಅಜಿಂಕ್ಯಾ ರಹಾನೆ 86, ರವೀಂದ್ರ ಜಡೇಜಾ ಅಜೇಯ 60 ಹಾಗೂ ಚೇತೇಶ್ವರ್ ಪೂಜಾರ ಅವರ 54 ರನ್​ಗಳ ನೆರವಿನಿಂದ ನಿನ್ನೆ ಎರಡನೇ ದಿನದಾಟದ ಅಂತ್ಯಕ್ಕೆ 114 ಓವರ್​ನಲ್ಲಿ 6 ವಿಕೆಟ್ ಕಳೆದುಕೊಂಡು 493 ರನ್ ಕಲೆಹಾಕಿತ್ತು.

 



ಆದರೆ, ಇಂದು ಮೂರನೇ ದಿನದ ಆರಂಭದಲ್ಲೇ ಬ್ಯಾಟಿಂಗ್ ಮುಂದುವರಿಸಲು ಬಯಸದ ಭಾರತ ಡಿಕ್ಲೇರ್ ಘೋಷಿಸಿತು. 343 ರನ್​ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿದ ಬಾಂಗ್ಲಾ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಮೊಹಮ್ಮದ್ ಶಮಿ ಬೌಲಿಂಗ್ ಬಿರುಗಾಳಿಗೆ ಸಿಲುಕಿದ ಬಾಂಗ್ಲಾ ಬೇಗನೆ ವಿಕೆಟ್ ಕಳೆದುಕೊಂಡು ಸಾಗಿತು.

ಮುಷ್ಫೀಕರ್ ರಹೀಮ್(64) ಏಕಾಂಗಿ ಹೋರಾಟ ನಡೆಸಿದರೂ ಇವರಿಗೆ ಯಾವೊಬ್ಬ ಬ್ಯಾಟ್ಸ್​ಮನ್​ ಸಾಥ್ ನೀಡಲಿಲ್ಲ. ಪರಿಣಾಮ ಬಾಂಗ್ಲಾದೇಶ 71 ಓವರ್​​ನಲ್ಲಿ 213 ರನ್​ಗೆ ಸರ್ವಪತನ ಕಂಡಿತು. ಭಾರತ ಪರ ಮೊಹಮ್ಮದ್ ಶಮಿ 4 ವಿಕೆಟ್ ಕಿತ್ತು ಮಿಂಚಿದರೆ, ಅಶ್ವಿನ್ 3, ಉಮೇಶ್ ಯಾದವ್ 2 ಮತ್ತು ಇಶಾಂತ್ ಶರ್ಮಾ 1 ವಿಕೆಟ್ ಪಡೆದರು.

 



2ನೇ ಇನ್ನಿಂಗ್ಸ್​ನಲ್ಲಿ ಬಾಂಗ್ಲಾ ಪರ ಇಮ್ರುಲ್ ಕೈಸ್ 6 ರನ್ ಗಳಿಸಿರುವಾಗ ಉಮೇಶ್ ಯಾದವ್ ಬೌಲಿಂಗ್​ನಲ್ಲಿ ಕ್ಲೀನ್ ಬೌಲ್ಡ್​ ಆದರೆ, ಶದ್ಮನ್ ಇಸ್ಲಾಂ(6) ಕೂಡ ಇಶಾಂತ್ ಬೌಲಿಂಗ್​ನಲ್ಲಿ ಬೌಲ್ಡ್​ ಆದರು.

ನಾಯಕ ಮೊಯಿನುಲ್ ಹಖಿ 7 ರನ್​ಗೆ ಸುಸ್ತಾದರು. ಮೊಹಮ್ಮದ್ ಮಿಥುನ್ ಕೂಡ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದೆ 18 ರನ್​ಗೆ ಬ್ಯಾಟ್ ಕೆಳಗಿಟ್ಟರೆ, ಮೊಹಮ್ಮದುಲ್ಲ 15 ರನ್​ಗೆ ಔಟ್ ಆದರು. ನಂತರ ಮುಷ್ಫೀಕರ್ ರಹೀಮ್ ಜೊತೆಗೂಡಿ ಲಿಟನ್ ದಾಸ್ ಒಂದಿಷ್ಟು ರನ್ ಕಲೆಹಾಕಿದರು. ಆದರೆ, ತಂಡಕ್ಕೆ ಆಸರೆಯಾಗುವಲ್ಲಿ ಈ ಜೋಡಿ ವಿಫಲವಾಯಿತು. ದಾಸ್ 35 ರನ್ ಗಳಿಸಿ ಔಟ್ ಆದರು. ಮುಷ್ಫೀಕರ್ ರಹೀಮ್ 150 ಎಸೆತಗಳಲ್ಲಿ 7 ಬೌಂಡರಿ ಬಾರಿಸಿ 64 ರನ್ ಕಲೆಹಾಕಿದರು.

 



ಇನ್ನಿಂಗ್ಸ್​ ಹಾಗೂ 130 ರನ್​ಗಳ ಭರ್ಜರಿ ಜಯದೊಂದಿಗೆ ಮೂರೇ ದಿನದಲ್ಲಿ ಮೊದಲ ಟೆಸ್ಟ್​ ಅನ್ನು ಭಾರತ ಅಂತ್ಯಗೊಳಿಸಿದೆ. ಎರಡು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮಯಾಂಕ್ ಅಗರ್ವಾಲ್ ಪಂದ್ಯಶ್ರೇಷ್ಠ ಬಾಜಿಕೊಂಡರು. 2ನೇ ಟೆಸ್ಟ್​ ನ.22 ರಂದು ಕೋಲ್ಕತ್ತಾದಲ್ಲಿ ನಡೆಯಲಿದ್ದು, ಡೇ ನೈಟ್ ಪಂದ್ಯ ಆಗಲಿದೆ.
First published:November 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading