India vs Bangladesh: ಮಯಾಂಕ್ ಮನಮೋಹಕ; 2ನೇ ದಿನದಾಟದ ಅಂತ್ಯಕ್ಕೆ ಭಾರತ 493/6; ಬೃಹತ್ ಮುನ್ನಡೆ

ದಿನದಾಟ ಅಂತ್ಯವಾಗುವ ಹೊತ್ತಿಗೆ ಅಬ್ಬರಿಸಿದ ಉಮೇಶ್ ಯಾದವ್ ಹಾಗೂ ಜಡೇಜಾ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಜಡೇಜಾ ಒಟ್ಟು 76 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಬಾರಿಸಿ 60 ರನ್ ಗಳಿಸಿದ್ದರೆ, ಉಮೇಶ್ 10 ಎಸೆತಗಳಲ್ಲಿ 3 ಸಿಕ್ಸರ್ ಚಚ್ಚಿ 25 ರನ್ ಬಾರಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಮಯಾಂಕ್ ಅಗರ್ವಾಲ್ ಹಾಗೂ ರವೀಂದ್ರ ಜಡೇಜಾ

ಮಯಾಂಕ್ ಅಗರ್ವಾಲ್ ಹಾಗೂ ರವೀಂದ್ರ ಜಡೇಜಾ

  • Share this:
ಬೆಂಗಳೂರು (ನ. 15): ಇಂದೋರ್​​ನ ಹೋಲ್ಕಾರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸಾಗುತ್ತಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ಭರ್ಜರಿ ಮೊತ್ತ ಕಲೆಹಾಕಿದೆ. ಮಯಾಂಕ್ ಅಗರ್ವಾಲ್ ಅವರ ಅಮೋಘ ದ್ವಿಶತಕದ ನೆರವಿನಿಂದ ಟೀಂ ಇಂಡಿಯಾ 2ನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 493 ರನ್ ಕಲೆಹಾಕಿದೆ. 343 ರನ್​ಗಳ ಮುನ್ನಡೆ ಸಾಧಿಸಿದೆ.

ನಿನ್ನೆ ಬಾಂಗ್ಲಾದೇಶವನ್ನು 150 ರನ್​ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್​ ಆರಂಭಿಸಿದ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 86 ರನ್ ಕಲೆಹಾಕಿತ್ತು. ಪೂಜಾರ 43 ಹಾಗೂ ಅಗರ್ವಾಲ್ 37 ರನ್ ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.

ಅದರಂತೆ ಇಂದು ಬ್ಯಾಟಿಂಗ್ ಮುಂದುವರೆಸಿದ ಇವರಿಬ್ಬರು ಪೈಕಿ ಚೇತೇಶ್ವರ್ ಪೂಜಾರ ಅರ್ಧಶತಕದ ಬಾರಿಸಿದ ಬೆನ್ನಲ್ಲೆ ನಿರ್ಗಮಿಸಿದರು. ಸೈಫ್ ಹಸನ್​ಗೆ ಕ್ಯಾಚಿತ್ತು72 ಎಸೆತಗಳಲ್ಲಿ 54 ರನ್​​ಗೆ ಪೂಜಾರ ತಮ್ಮ ಇನ್ನಿಂಗ್ಸ್​ ಅಂತ್ಯಗೊಳಿಸಿದರು. ನಾಯಕ ವಿರಾಟ್ ಕೊಹ್ಲಿ ಬಂದ ಬೆನ್ನಲ್ಲೆ ಎಲ್​ಬಿ ಬಲೆಗೆ ಸಿಲುಕಿ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರು.

IPL 2020: ಉಳಿಸಿಕೊಂಡ ಹಾಗೂ ಮಾರಾಟ ಮಾಡಿದ ಆಟಗಾರರು ಯಾರೆಲ್ಲಾ?; ಇಲ್ಲಿದೆ ಫುಲ್ ಲಿಸ್ಟ್

 ಈ ಸಂದರ್ಭ ಮಯಾಂಕ್ ಜೊತೆಯಾದ ಉಪ ನಾಯಕ ಅಜಿಂಕ್ಯ ರಹಾನೆ ಎಚ್ಚರಿಕೆಯ ಆಟ ಪ್ರದರ್ಶಿಸಿದರು. ಅತ್ಯುತ್ತಮ ಆಟವಾಡಿದ ಇವರಿಬ್ಬರು ತಂಡದ ರನ್​ಗತಿಯನ್ನು ಏರಿಸಿದರು. 4ನೇ ವಿಕೆಟ್​ಗೆ ಈ ಜೋಡಿ 190 ರನ್​ಗಳ ಕಾಣಿಕೆ ನೀಡಿತು. ಚೆನ್ನಾಗಿಯೆ ಆಡುತ್ತಿದ್ದ ರಹಾನೆ ಶತಕದ ಅಂಚಿನಲ್ಲಿ ಎಡವಿದರು. 172 ಎಸೆತಗಳಲ್ಲಿ 9 ಬೌಂಡರಿ ಬಾರಿಸಿ 86 ರನ್ ಗಳಿಸಿ ರಹಾನೆ ನಿರ್ಗಮಿಸಿದರು.

ಬಳಿಕ ರವೀಂದ್ರ ಜಡೇಜಾ ಹಾಗೂ ಮಯಾಂಕ್ ಮತ್ತೊಂದು ಅತ್ಯುತ್ತಮ ಇನ್ನಿಂಗ್ಸ್​ ಕಟ್ಟಿದರು. ಇಬ್ಬರೂ ಬಿರುಸಿನ ಆಟದ ಮೊರೆಹೋದರು. ಅದರಂತೆ ಮಯಾಂಕ್ ಟೆಸ್ಟ್​ ಕ್ರಿಕೆಟ್​ನಲ್ಲಿ ದ್ವಿತೀಯ ದ್ವಿಶತಕ ಸಿಡಿಸಿ ಮಿಂಚಿದರು. ದ್ವಿಶತಕದ ಬಳಿಕ ಕನ್ನಡಿಗ ಸ್ಫೋಟಕ ಆಟವಾಡಿದರು.

(VIDEO): ಸೆಂಚುರಿ ಸಿಡಿಸಿದಾಗ ಪೆವಿಲಿಯನ್​ನಿಂದ ಕೊಹ್ಲಿ ಕೊಟ್ರು ಸಿಗ್ನಲ್; ಓಕೆ ಎಂದ ಮಯಾಂಕ್

ಅಂತಿಮವಾಗಿ ಮಯಾಂಕ್ 330 ಎಸೆತಗಳಲ್ಲಿ 28 ಬೌಂಡರಿ ಹಾಗೂ 8 ಸಿಕ್ಸರ್ ಸಿಡಿಸಿ 243 ರನ್​ಗೆ ತಮ್ಮ ಇನ್ನಿಂಗ್ಸ್​ ಕೊನೆಗೊಳಿಸಿದರು. ವೃದ್ದಿಮಾನ್ ಸಾಹ ಬಂದ ಬೆನ್ನಲ್ಲೆ 12 ರನ್​ಗೆ ಔಟ್ ಆದರು.

ದಿನದಾಟ ಅಂತ್ಯವಾಗುವ ಹೊತ್ತಿಗೆ ಅಬ್ಬರಿಸಿದ ಉಮೇಶ್ ಯಾದವ್ ಹಾಗೂ ಜಡೇಜಾ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಜಡೇಜಾ ಒಟ್ಟು 76 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಬಾರಿಸಿ 60 ರನ್ ಗಳಿಸಿದ್ದರೆ, ಉಮೇಶ್ 10 ಎಸೆತಗಳಲ್ಲಿ 3 ಸಿಕ್ಸರ್ ಚಚ್ಚಿ 25 ರನ್ ಬಾರಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

 ಭಾರತ ಎರಡನೇ ದಿನದಾಟದ ಅಂತ್ಯಕ್ಕೆ ಒಟ್ಟು 114 ಓವರ್​ನಲ್ಲಿ 6 ವಿಕೆಟ್ ಕಳೆದುಕೊಂಡು 493 ರನ್ ಕಲೆಹಾಕಿದೆ. ಬಾಂಗ್ಲಾಕ್ಕಿಂತ ಕೊಹ್ಲಿ ಪಡೆ 343 ರನ್​​ಗಳ ಮುನ್ನಡೆಯಲ್ಲಿದೆ. ಬಾಂಗ್ಲಾ ಪರ ಅಬು ಜಾಯೆದ್ 4 ವಿಕೆಟ್ ಕಿತ್ತರೆ, ಎಬಡಟ್ ಹೊಸೈನ್ ಹಾಗೂ ಮೆಹ್ದಿ ಹಸನ್ ತಲಾ 1 ವಿಕೆಟ್ ಪಡೆದರು.

ರಹಾನೆ 4 ಸಾವಿರ ರನ್: ಅಜಿಂಕ್ಯಾ ರಹಾನೆ ಟೆಸ್ಟ್ ಕ್ರಿಕೆಟ್‌ನಲ್ಲಿ 4000 ರನ್‌ಗಳ ಮೈಲುಗಲ್ಲು ತಲುಪಿದ್ದಾರೆ. ಈ ಸಾಧನೆ ಮಾಡಿದ ಭಾರತದ 16ನೇ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಇವರು ಪಾತ್ರರಾಗಿದ್ದಾರೆ. ತಮ್ಮ 104ನೇ ಇನ್ನಿಂಗ್ಸ್‌ನಲ್ಲಿ ರಹಾನೆ ಈ ಸ್ಮರಣೀಯ ದಾಖಲೆ ಬರೆದಿದ್ದು, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಣಣ್ ದಾಖಲೆಯನ್ನೂ ಸರಿಗಟ್ಟಿದ್ದಾರೆ.
First published: