India vs Bangladesh, Live: 154 ಟಾರ್ಗೆಟ್; ರೋಹಿತ್​​ರಿಂದ ಸಿಕ್ಸ್​ಗಳ ಸುರಿಮಳೆ; ಗೆಲುವಿನತ್ತ ಭಾರತ

India vs Bangladesh, Live Cricket Score, 2nd T20I Match at Rajkot: ಈ ಪಂದ್ಯ ಉಭಯ ತಂಡಗಳಿಗೆ ಮುಖ್ಯವಾಗಿದೆ. ಭಾರತ ಗೆದ್ದರೆ ಸರಣಿ ಸಮಬಲವಾಗಲಿದೆ. ಎಲ್ಲಾದರು ಬಾಂಗ್ಲಾ ಜಯ ಸಾಧಿಸಿದರೆ ಸರಣಿ ವಶಪಡಿಸಿಕೊಳ್ಳಲಿದೆ. ಹೀಗಾಗಿ ರೋಹಿತ್ ಪಡೆಗೆ ಇದು ಮಾಡುಇಲ್ಲವೇ ಮಡಿ ಪಂದ್ಯದಂತಾಗಿದೆ.

Vinay Bhat | news18-kannada
Updated:November 7, 2019, 9:54 PM IST
India vs Bangladesh, Live: 154 ಟಾರ್ಗೆಟ್; ರೋಹಿತ್​​ರಿಂದ ಸಿಕ್ಸ್​ಗಳ ಸುರಿಮಳೆ; ಗೆಲುವಿನತ್ತ ಭಾರತ
ರೋಹಿತ್ ಶರ್ಮಾ
  • Share this:
ಬೆಂಗಳೂರು (ನ. 07): ರಾಜ್ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭಾರತ ಗೆಲುವಿನತ್ತ ದಾಪುಗಾಲಿಡುತ್ತಿದೆ.


154 ರನ್​ಗಳ ಟಾರ್ಗೆಟ್ ಬೆನ್ನಟ್ಟಿರುವ ಟೀಂ ಇಂಡಿಯಾ ಪರ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಅರ್ಧಶತಕ ಸಿಡಿಸಿ ಅಬ್ಬರಿಸುತ್ತಿರುವ ರೋಹಿತ್ ಸಿಕ್ಸರ್​​ಗಳ ಮಳೆ ಸುರಿಸುತ್ತಿದ್ದಾರೆ.

ಈಗಾಗಲೇ ರೋಹಿತ್ ಬ್ಯಾಟ್​​ನಿಂದ 6 ಸಿಕ್ಸರ್​​​ಗಳ ಸಿಡಿದಿದೆ. ಶಿಖರ್ ಧವನ್ ಉತ್ತಮ ಸಾತ್ ನೀಡುತ್ತಿದ್ದಾರೆ. ಈ ಜೋಡಿ ಶತಕದ ಜೊತೆಯಾಟ ಆಡಿ ಮುನ್ನುಗ್ಗುತ್ತಿದೆ.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಬಾಂಗ್ಲಾದೇಶ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಮೊಹಮ್ಮದ್ ನೈಮ್ ಹಾಗೂ ಲಿಟನ್ ದಾಸ್ ಬೌಂಡರಿಗಳ ಮಳೆ ಸುರಿಸಿದರು. ಪವರ್ ಪ್ಲೇ ಓವರ್​ ಅನ್ನು ಉತ್ತಮವಾಗಿ ಉಪಯೋಗಿಸಿಕೊಂಡ ಇವರಿಬ್ಬರು ಸ್ಫೋಟಕ ಬ್ಯಾಟಿಂಗ್ ನಡೆಸಿದರು.

ಮೊದಲ ವಿಕೆಟ್​​ಗೆ ಈ ಜೋಡಿ 60 ರನ್​ಗಳ ಕಾಣಿಕೆ ನೀಡಿತು. ಚೆನ್ನಾಗಿಯೆ ಆಡುತ್ತಿದ್ದ ಲಿಟನ್ ದಾಸ್ 30 ರನ್ ಗಳಿಸಿರುವಾಗ ರನೌಟ್​ಗೆ ಬಲಿಯಾಗಬೇಕಾಯಿತು. ಇದರ ಬೆನ್ನಲ್ಲೆ ನೈಮ್(36) ಕೂಡ ನಿರ್ಗಮಿಸಿದರು. ಈ ಸಂದರ್ಭ ಸೌಮ್ಯ ಸರ್ಕಾರ್ ಬಿರುಸಿನ ಆಟ ಪ್ರದರ್ಶಿಸಿದರು.

12 ಓವರ್ ಆಗುವ ಹೊತ್ತಿಗೆನೆ ಬಾಂಗ್ಲಾ ತಂಡದ ಮೊತ್ತ 100ರ ಅಂಚಿಗೆ ಬಂದು ನಿಂತಿತು. ಆದರೆ, ಈ ಸಂದರ್ಭ ಚಹಾಲ್ ಸ್ಪಿನ್ ಮೋಡಿಗೆ ಸರ್ಕಾರ್ 30 ರನ್​​ ಗಳಿಸಿ ಔಟ್ ಆದರೆ, ಕಳೆದ ಪಂದ್ಯದಲ್ಲಿ ಮಿಂಚಿದ್ದ ಮುಷ್ಫೀಕರ್ ರಹೀಮ್ ಕೇವಲ 4 ರನ್​ಗೆ ಸುಸ್ತಾದರು.ಆದರೆ, ಬಳಿಕ ಬಂದ ಬ್ಯಾಟ್ಸ್​ಮನ್​​ಗಳು ಯಾರು ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಮೊಹಮ್ಮದುಲ್ಲ 30 ರನ್ ಗಳಿಸಿದರಷ್ಟೆ. ಅಂತಿಮವಾಗಿ ಬಾಂಗ್ಲಾದೇಶ 20 ಓವರ್​ಗೆ 6 ವಿಕೆಟ್ ಕಳೆದುಕೊಂಡು 153 ರನ್ ಕಲೆಹಾಕಿತು. ಭಾರತ ಪರ ಯಜುವೇಂದ್ರ ಚಹಾಲ್ 2 ವಿಕೆಟ್ ಕಿತ್ತರೆ, ದೀಪಕ್ ಚಹಾರ್, ಖಲೀಲ್ ಹಾಗೂ ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಪಡೆದರು.

ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಮಾಡದೆ ಕಳೆದ ಪಂದ್ಯದಲ್ಲಿ ಆಡಿದ ಆಟಗಾರರೇ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಇತ್ತ ಬಾಂಗ್ಲಾದೇಶ ಯಾವುದೇ ಬದಲಾವಣೆ ಮಾಡದೆ ಕಳೆದ ಗೆದ್ದ ತಂಡವನ್ನೇ ಕಣಕ್ಕಿಳಿಸುತ್ತಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಕೆ ಎಲ್ ರಾಹುಲ್, ಶ್ರೇಯಸ್ ಐಯರ್, ರಿಷಭ್ ಪಂತ್ (ವಿಕೆಟ್- ಕೀಪರ್), ಕ್ರುನಾಲ್ ಪಾಂಡ್ಯ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಾಲ್, ಖಲೀಲ್ ಅಹ್ಮದ್, ದೀಪಕ್ ಚಹಾರ್.

ಬಾಂಗ್ಲಾದೇಶ ತಂಡ: ಲಿಟನ್ ದಾಸ್, ಸೌಮ್ಯ ಸರ್ಕಾರ್, ಮೊಹಮ್ಮದ್ ನೈಮ್, ಮುಷ್ಫೀಕರ್ ರಹೀಮ್ (ವಿಕೆಟ್- ಕೀಪರ್), ಮೊಹಮ್ಮದುಲ್ಲ (ನಾಯಕ), ಅಫಿಫ್ ಹೊಸೈನ್, ಮೊಸದ್ದೆಕ್ ಹೊಸೈನ್, ಅಮಿನುಲ್ ಇಸ್ಲಾಂ, ಶಾಫಿಲ್ ಇಸ್ಲಾಂ, ಮುಸ್ತಫಿಜುರ್ ರೆಹ್ಮಾನ್, ಅಲ- ಅಮಿನ್ ಹೊಸೈನ್.

ಕಮ್​ಬ್ಯಾಕ್ ಪಂದ್ಯದಲ್ಲಿ ಮಂದಾನ ದಾಖಲೆ; ವಿಂಡೀಸ್ ವಿರುದ್ಧದ ಏಕದಿನ ಸರಣಿ ಭಾರತದ ಪಾಲು

 ಈ ಪಂದ್ಯ ಉಭಯ ತಂಡಗಳಿಗೆ ಮುಖ್ಯವಾಗಿದೆ. ಭಾರತ ಗೆದ್ದರೆ ಸರಣಿ ಸಮಬಲವಾಗಲಿದೆ. ಎಲ್ಲಾದರು ಬಾಂಗ್ಲಾ ಜಯ ಸಾಧಿಸಿದರೆ ಸರಣಿ ವಶಪಡಿಸಿಕೊಳ್ಳಲಿದೆ. ಹೀಗಾಗಿ ರೋಹಿತ್ ಪಡೆಗೆ ಇದು ಮಾಡುಇಲ್ಲವೇ ಮಡಿ ಪಂದ್ಯದಂತಾಗಿದೆ.
First published:November 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading