IND vs BAN: ಮೂರನೇ ದಿನಕ್ಕೆ ಅಂತ್ಯಕಂಡ ಡೇ ನೈಟ್ ಟೆಸ್ಟ್​; ಐತಿಹಾಸಿಕ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ

ತನ್ನ 2ನೇ ಇನ್ನಿಂಗ್ಸ್​ನಲ್ಲಿ ಬಾಂಗ್ಲಾದೇಶ ಆರಂಭದಲ್ಲೇ ಆಘಾತ ಅನುಭವಿಸಿತು. ಇಶಾಂತ್ ಶರ್ಮಾ ಸ್ವಿಂಗ್ ಮೋಡಿಗೆ ಶದ್ಮಾನ್ ಇಸ್ಲಾಂ ಹಾಗೂ ನಾಯಕ ಮೊಯಿನುಲ್ ಹಖಿ ಸೊನ್ನೆ ಸುತ್ತಿದರೆ, ಇಮ್ರುಲ್ ಕೇಯಿಸ್ 4 ಹಾಗೂ ಮೊಹಮ್ಮದ್ ಮಿಥುನ್ 6 ರನ್ ಗಳಿಸಿ ಔಟ್ ಆದರು.

ಟೀಂ ಇಂಡಿಯಾ ಆಟಗಾರರು

ಟೀಂ ಇಂಡಿಯಾ ಆಟಗಾರರು

  • Share this:
ಕೋಲ್ಕತ್ತಾ (ನ. 24): ಇಲ್ಲಿನ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಐತಿಹಾಸಿಕ ಎರಡನೇ ಡೇ ನೈಟ್ ಟೆಸ್ಟ್​ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್​ ಹಾಗೂ 46 ರನ್​ಗಳ ಗೆಲುವು ತನ್ನದಾಗಿಸಿದೆ. ಈ ಮೂಲಕ ಟೀಂ ಇಂಡಿಯಾ ಸತತ ನಾಲ್ಕನೇ ಟೆಸ್ಟ್‌ ಪಂದ್ಯವನ್ನು ಇನಿಂಗ್ಸ್‌ ಅಂತರದಲ್ಲಿ ಗೆದ್ದು ಹೊಸ ವಿಶ್ವ ದಾಖಲೆ ನಿರ್ಮಿಸಿದೆ.

ನಿನ್ನೆ ಎರಡನೇ ದಿನದಾಟದ ಅಂತ್ಯಕ್ಕೆ ಬಾಂಗ್ಲಾ 2ನೇ ಇನ್ನಿಂಗ್ಸ್​ನಲ್ಲಿ 6 ವಿಕೆಟ್ ಕಳೆದುಕೊಂಡು 152 ರನ್ ಕಲೆಹಾಕಿತ್ತು. ಮುಷ್ಫೀಕರ್ ರಹೀಮ್ ಅರ್ಧಶತಕ ಬಾರಿಸಿ ಆಸರೆಯಾಗಿ ನಿಂತಿದ್ದರು. ಅದರಂತೆ ಮೂರನೇ ದಿನದಾಟ ಆರಂಭಿಸಿರುವ ಬಾಂಗ್ಲಾ ಕೇವಲ 43 ರನ್​ಗಳಿಸುವಷ್ಟರಲ್ಲಿ ಉಳಿದ 4 ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಯಿತು.

 



(VIDEO): ಈ ರೀತಿಯೂ ಸಿಕ್ಸ್ ಬಾರಿಸಬಹುದಾ?; ಬಾಂಗ್ಲಾ ಬ್ಯಾಟ್ಸ್​ಮನ್​ ಸಿಕ್ಸ್​ ನೋಡಿ ಕೊಹ್ಲಿ ಶಾಕ್!

ಇದಕ್ಕೂ ಮೊದಲು ಮೊದಲ ಇನ್ನಿಂಗ್ಸ್​ನಲ್ಲಿ ಬಾಂಗ್ಲಾದೇಶವನ್ನು 106 ರನ್​ಗೆ ಆಲೌಟ್ ಮಾಡಿ ಬ್ಯಾಟಿಂಗ್ ಮಾಡಿದ ಭಾರತ, ವಿರಾಟ್ ಕೊಹ್ಲಿ ಅಮೋಘ ಶತಕ, ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯಾ ರಹಾನೆ ಅರ್ಧಶತಕ ನೆರವಿನಿಂದ 347 ರನ್​ಗೆ ಡಿಕ್ಲೇರ್ ಘೋಷಿಸಿತ್ತು. 241 ರನ್​ಗಳ ಉತ್ತಮ ಮುನ್ನಡೆ ಸಾಧಿಸಿತ್ತು.

ಬಳಿಕ ತನ್ನ 2ನೇ ಇನ್ನಿಂಗ್ಸ್​ನಲ್ಲಿ ಬಾಂಗ್ಲಾದೇಶ ಆರಂಭದಲ್ಲೇ ಆಘಾತ ಅನುಭವಿಸಿತು. ಇಶಾಂತ್ ಶರ್ಮಾ ಸ್ವಿಂಗ್ ಮೋಡಿಗೆ ಶದ್ಮಾನ್ ಇಸ್ಲಾಂ ಹಾಗೂ ನಾಯಕ ಮೊಯಿನುಲ್ ಹಖಿ ಸೊನ್ನೆ ಸುತ್ತಿದರೆ, ಇಮ್ರುಲ್ ಕೇಯಿಸ್ 4 ಹಾಗೂ ಮೊಹಮ್ಮದ್ ಮಿಥುನ್ 6 ರನ್ ಗಳಿಸಿ ಔಟ್ ಆದರು.

ಈ ಸಂದರ್ಭ ಮುಷ್ಫೀಕರ್ ರಹೀಮ್ ಜೊತೆಗೂಡಿ ಚೆನ್ನಾಗಿಯೆ ಆಡುತ್ತಿದ್ದ ಮೊಹಮ್ಮದುಲ್ಲ(39*) ಇಂಜುರಿಗೆ ತುತ್ತಾದ ಪರಿಣಾಮ ಪೆವಿಲಿಯನ್​ಗೆ ಸೇರಿದರು. ನಂತರ ಬಂದ ಮೆಹ್ದಿ ಹಸನ್ 15 ರನ್​ಗೆ ನಿರ್ಗಮಿಸಿದರೆ, ತೈಜುಲ್ ಇಸ್ಲಾಂ ಆಟ 11 ರನ್​ಗೆ ಅಂತ್ಯವಾಯಿತು.

ಮುಷ್ಫೀಕರ್ ರಹೀಮ್ 96 ಎಸೆತಗಳಲ್ಲಿ 74 ರನ್ ಗಳಿಸಿ ಔಟ್ ಆದರೆ, ಅಲ್-ಅಮಿನ್ ಹೊಸೈನ್ 21 ರನ್ ಗಳಿಸಿದರು. ಅಂತಿಮವಾಗಿ ಬಾಂಗ್ಲಾ ತನ್ನ 2ನೇ ಇನ್ನಿಂಗ್ಸ್​ನಲ್ಲಿ 41.1 ಓವರ್​ಗೆ 195 ರನ್ ಗಳಿಸಿ ಆಲೌಟ್ ಆಯಿತು.

IND vs BAN: 2ನೇ ಟೆಸ್ಟ್​ನ ಎರಡನೇ ದಿನದಾಟದ ಕೆಲ ರೋಚಕ ಕ್ಷಣಗಳು!

ಭಾರತ ಪರ 2ನೇ ಇನ್ನಿಂಗ್ಸ್​ನಲ್ಲಿ ಉಮೇಶ್ ಯಾದವ್ 5 ವಿಕೆಟ್ ಕಿತ್ತರೆ, ಇಶಾಂತ್ ಶರ್ಮಾ 4 ವಿಕೆಟ್ ಪಡೆದರು. ಇನ್ನಿಂಗ್ಸ್​ ಹಾಗೂ 46 ರನ್​​ಗಳ ಜಯದೊಂದಿಗೆ ಭಾರತ ಐತಿಹಾಸಿಕ ಪಿಂಕ್ ಬಾಲ್ ಡೇ ನೈಟ್ ಟೆಸ್ಟ್​ ಅನ್ನು ಗೆದ್ದು ಬೀಗಿದೆ. ಅಲ್ಲದೆ ಎರಡು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಎರಡನ್ನೂ ಜಯಿಸಿ ಸರಣಿ ಕ್ಲೀನ್​ಸ್ವಿಪ್ ಮಾಡಿದೆ. ಎರಡೂ ಪಂದ್ಯಗಳಲ್ಲಿ ಮಿಂಚಿದ ಇಶಾಂತ್ ಶರ್ಮಾ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ತಮ್ಮದಾಗಿಸಿದರು.

 

First published: