ಟೀಂ ಇಂಡಿಯಾದಿಂದ ಆಸ್ಟ್ರೇಲಿಯಾ ವಿಶ್ವ ದಾಖಲೆ ಉಡೀಸ್ ; ಈ ವಿಚಾರದಲ್ಲಿ ಭಾರತವೇ ನಂಬರ್ ಒನ್!

ಬಾಂಗ್ಲಾ ಬೌಲರ್​ಗಳ ಬೆಂಡೆತ್ತಿದ ರೋಹಿತ್ ಶರ್ಮಾ ಬೌಂಡರಿ- ಸಿಕ್ಸರ್​ಗಳ ಮಳೆ ಸುರಿಸಿದರು. ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಹಿಟ್​​ಮ್ಯಾನ್​​ ಆಟ ತಡೆಯಲು ಬಾಂಗ್ಲಾ ಬೌಲರ್​ಗಳಿಗೆ ಸಾಧ್ಯವಾಗಲೇ ಇಲ್ಲ.

Vinay Bhat | news18-kannada
Updated:November 8, 2019, 11:39 AM IST
ಟೀಂ ಇಂಡಿಯಾದಿಂದ ಆಸ್ಟ್ರೇಲಿಯಾ ವಿಶ್ವ ದಾಖಲೆ ಉಡೀಸ್ ; ಈ ವಿಚಾರದಲ್ಲಿ ಭಾರತವೇ ನಂಬರ್ ಒನ್!
ಟೀಂ ಇಂಡಿಯಾ ಆಟಗಾರರು
Vinay Bhat | news18-kannada
Updated: November 8, 2019, 11:39 AM IST
ಬೆಂಗಳೂರು (ನ. 08): ರಾಜ್ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್​ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭಾರತ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಸರಣಿ ಸೋಲಿನಿಂದ ತಪ್ಪಿಸಿಕೊಂಡ ರೋಹಿತ್ ಪಡೆ 1-1ರ ಸಮಬಲ ಸಾಧಿಸಿದೆ.

ಈ ಗೆಲುವಿನೊಂದಿಗೆ ಟೀಂ ಇಂಡಿಯಾ ವಿಶ್ವದಾಖಲೆ ನಿರ್ಮಿಸಿದೆ. ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ಚೇಸಿಂಗ್ ವೇಳೆ ಭಾರತ ದಾಖಲಿಸಿದ 41ನೇ ಜಯ ಇದಾಗಿದೆ. ಇದಕ್ಕೂ ಮುನ್ನ ಚೇಸಿಂಗ್​ನಲ್ಲಿ ಗರಿಷ್ಠ ಪಂದ್ಯ ಗೆದ್ದ ಸಾಲಿನಲ್ಲಿ 40 ಗೆಲುವಿನೊಂದಿಗೆ ಮೊದಲ ಸ್ಥಾನದಲ್ಲಿತ್ತು. ಸದ್ಯ ಈ ಸ್ಥಾನ ಟೀಂ ಇಂಡಿಯಾ ವಶಪಡಿಸಿಕೊಂಡಿದೆ.

IND vs BAN: ಬಾಂಗ್ಲಾಕ್ಕೆ ಮಹಾ ಚಂಡಮಾರುತವಾದ ರೋಹಿತ್; ಇಲ್ಲಿವೆ 2ನೇ ಟಿ-20 ಪಂದ್ಯದ ರೋಚಕ ಕ್ಷಣ!

ಭಾರತ ಟಿ-20 ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಈವರೆಗೆ 61 ಬಾರಿ ಚೇಸಿಂಗ್ ಮಾಡಿದೆ. ಇದರಲ್ಲಿ 41 ಪಂದ್ಯ ಗೆದ್ದಿದೆ. ಇತ್ತ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ 69 ಬಾರಿ ಚೇಸಿಂಗ್ ಮಾಡಿದ್ದು, ಇದರಲ್ಲಿ 40 ಪಂದ್ಯ ಗೆದ್ದಿದೆ. ಮೂರನೇ ಸ್ಥಾನದಲ್ಲಿ ಪಾಕಿಸ್ತಾನ ತಂಡವಿದ್ದು 67 ಬಾರಿ ಚೇಸಿಂಗ್ ಮಾಡಿ 36 ಗೆಲುವು ತನ್ನದಾಗಿಸಿದೆ.

ಎರಡನೇ ಟಿ-20 ಪಂದ್ಯ ಭಾರತಕ್ಕೆ ಮಾಡು ಇಲ್ಲವೇ ಮಡಿ ಎಂಬಂತಾಗಿತ್ತು. ಬಾಂಗ್ಲಾ ನೀಡಿದ್ದ 154 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ ಪರ ನಾಯಕ ರೋಹಿತ್ ಶರ್ಮಾ ಅಮೋಘ ಆಟ ಪ್ರದರ್ಶಿಸಿದರು. ಮೊದಲ ಓವರ್​ನಿಂದಲೇ ಆರ್ಭಟಿಸಲು ಶುರು ಮಾಡಿದರು. ಇವರಿಗೆ ಶಿಖರ್ ಧವನ್ ಉತ್ತಮರೀತಿಯಲ್ಲಿ ಸಾತ್ ನೀಡಿದರು.

 IPL: ಐಪಿಎಲ್‌ ಪಂದ್ಯ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಮೊಳಗಲಿ; ಪಂಜಾಬ್ ಫ್ರಾಂಚೈಸಿ ಮನವಿ

ಬಾಂಗ್ಲಾ ಬೌಲರ್​ಗಳ ಬೆಂಡೆತ್ತಿದ ರೋಹಿತ್ ಶರ್ಮಾ ಬೌಂಡರಿ- ಸಿಕ್ಸರ್​ಗಳ ಮಳೆ ಸುರಿಸಿದರು. ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಹಿಟ್​​ಮ್ಯಾನ್​​ ಆಟ ತಡೆಯಲು ಬಾಂಗ್ಲಾ ಬೌಲರ್​ಗಳಿಗೆ ಸಾಧ್ಯವಾಗಲೇ ಇಲ್ಲ.

ರೋಹಿತ್ ಸ್ಪೋಟಕ ಆಟ ಅಂತ್ಯಕಂಡಿದ್ದು 85 ರನ್​ಗಳಿಗೆ. ಶತಕ ಬಾರಿಸುವಲ್ಲಿ ವಿಫಲವಾದ ಹಿಟ್​ಮ್ಯಾನ್​​ 43 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ಸಿಡಿಸಿ 85 ರನ್ ಚಚ್ಚಿದರು. ಭಾರತ ಕೇವಲ 15.4 ಓವರ್​ನಲ್ಲೇ 2 ವಿಕೆಟ್ ಕಳೆದುಕೊಂಡು 154 ರನ್ ಬಾರಿಸುವ ಮೂಲಕ ಗೆಲುವಿನ ನಗೆಬೀರಿತು.

 First published:November 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...