IND vs BAN: ಇಂದು ಬಾಂಗ್ಲಾಗೆ ಟೀಂ ಇಂಡಿಯಾ ಸವಾಲು; ಕೊಹ್ಲಿ ಪಡೆಯಲ್ಲಿ ಮಹತ್ವದ ಬದಲಾವಣೆ?

ಕಳೆದ ಪಂದ್ಯದಲ್ಲಿ ಸ್ಪಿನ್ನರ್​ಗಳು ಕಳಪೆ ಪ್ರದರ್ಶನ ತೋರಿದ್ದರು. ಅಲ್ಲದೆ, ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳು ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಇದು ಭಾರತವನ್ನು ಆತಂಕಕ್ಕೀಡು ಮಾಡಿದೆ. ರೋಹಿತ್​ ಶರ್ಮಾ ಇಂದು ಕೂಡ ಮಿಂಚುವ ಸಾಧ್ಯತೆ ಇದೆ.

Rajesh Duggumane | news18
Updated:July 2, 2019, 8:46 AM IST
IND vs BAN: ಇಂದು ಬಾಂಗ್ಲಾಗೆ ಟೀಂ ಇಂಡಿಯಾ ಸವಾಲು; ಕೊಹ್ಲಿ ಪಡೆಯಲ್ಲಿ ಮಹತ್ವದ ಬದಲಾವಣೆ?
ವಿರಾಟ್​-ಮಶ್ರಾಫೆ
  • News18
  • Last Updated: July 2, 2019, 8:46 AM IST
  • Share this:
ಬರ್ನಿಂಗ್​ಹ್ಯಾಂ (ಜು.2): ವಿಶ್ವಕಪ್​  ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಬಾಂಗ್ಲಾದೇಶವನ್ನು ಬಲಿಷ್ಠ ಟೀಂ ಇಂಡಿಯಾ ಇಂದು ಎದುರಿಸಲಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಸೆಮಿಫೈನಲ್​ಗೆ ಅಧಿಕೃತವಾಗಿ ಲಗ್ಗೆ ಇಡಲು ಸಿದ್ಧವಾಗಿದೆ.

ಭಾನುವಾರ ನಡೆದ ಇಂಗ್ಲೆಂಡ್​ ನಡುವಣ ಪಂದ್ಯದಲ್ಲಿ ಭಾರತ ಸೋತಿತ್ತು. ಇದು ಕೊಹ್ಲಿ ಪಡೆಯನ್ನು ಧೃತಿಗೆಡಿಸಿಲ್ಲ. ಆದರೆ, ಗಾಯದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಶಿಖರ್​ ಧವನ್​ ಈಗಾಗಲೇ ವಿಶ್ವಕಪ್​ನಿಂದ ಹೊರ ಬಿದ್ದಿದ್ದು, ಆಲ್​ರೌಂಡರ್​ ವಿಜಯ್​ ಶಂಕರ್​ ಕೂಡ ಗಾಯಕ್ಕೆ ತುತ್ತಾಗಿದ್ದಾರೆ.

ಕಳೆದ ಪಂದ್ಯದಲ್ಲಿ ಸ್ಪಿನ್ನರ್​ಗಳು ಕಳಪೆ ಪ್ರದರ್ಶನ ತೋರಿದ್ದರು. ಅಲ್ಲದೆ, ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳು ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಇದು ಭಾರತವನ್ನು ಆತಂಕಕ್ಕೀಡು ಮಾಡಿದೆ. ರೋಹಿತ್​ ಶರ್ಮಾ ಇಂದು ಕೂಡ ಮಿಂಚುವ ಸಾಧ್ಯತೆ ಇದೆ.

ಬಾಂಗ್ಲಾ ಸೆಮಿಫೈನಲ್​ಗೆ ಏರುವ ಕನಸು ಜೀವಂತವಾಗಿದೆ. ಒಂದೊಮ್ಮೆ ಮುಂದಿನ ಎರಡೂ ಪಂದ್ಯದಲ್ಲಿ ಗೆದ್ದು, ಆಸ್ಟ್ರೇಲಿಯಾ ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲಿ ಸೋತರೆ ಸೆಮಿಫೈನಲ್​ ತಲುಪಬಹುದಾಗಿದೆ.

ಇದನ್ನೂ ಓದಿ: ವಿಶ್ವಕಪ್​ನಲ್ಲಿ ಹೊಸ ದಾಖಲೆ ಬರೆದ ಟೀಂ ಇಂಡಿಯಾ ನಾಯಕ-ಉಪನಾಯಕ..!

ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ ಆಗಲಿದೆಯೇ ಎನ್ನುವ ಕುತೂಹಲ ಎಲ್ಲರನ್ನು ಕಾಡಿದೆ.  ಕೇದಾರ್​​ ಜಾಧವ್​ ಬದಲು ರವೀಂದ್ರ ಜಡೇಜಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಜಾಧವ್​ ಮೇಲೆ  ವಿರಾಟ್​ ಕೊಹ್ಲಿ ಹೆಚ್ಚು ಭರವಸೆ ಇಟ್ಟಿದ್ದರು. ಆಲ್​ರೌಂಡರ್​ ಆಗಿ ಗುರುತಿಸಿಕೊಂಡಿದ್ದ ಅವರು, ಈ ಬಾರಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್​ನಲ್ಲೂ ಅವರು ಚಮತ್ಕಾರ ಮಾಡಲಿಲ್ಲ. ಹೀಗಾಗಿ ಅವರನ್ನು ಈಗ ತಂಡದಿಂದ ಹೊರಗಿಡುವ ಸಾಧ್ಯತೆ ಇದೆ. ವಿಜಯ್​ ಶಂಕರ್​ ಬದಲಿಗೆ ಕನ್ನಡಿಗೆ ಮಯಾಂಕ್​ ಅಗರ್​ವಾಲ್​ ತಂಡ ಸೇರಿಕೊಂಡಿದ್ದರಾದರೂ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ.

ಪಂದ್ಯ ನಡೆಯುವ ಸ್ಥಳ: ಬರ್ನಿಂಗ್​ಹ್ಯಾಂಆರಂಭ: ಮಧ್ಯಾಹ್ನ 3 ಗಂಟೆ


First published:July 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ