ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಟೀಂ ಇಂಡಿಯಾ ತ್ರಿಶತಕ; ಅಗ್ರಸ್ಥಾನ ಭದ್ರ

ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಒಟ್ಟು 300 ಅಂಕಗಳನ್ನು ಕಲೆಹಾಕಿದ ಮೊದಲ ತಂಡ ಎಂಬ ಖ್ಯಾತಿಗೆ ಭಾರತ ಪಾತ್ರವಾಗಿದೆ. ಅಲ್ಲದೆ ಅಗ್ರಸ್ಥಾನ ಮತ್ತಷ್ಟು ಭದ್ರ ಪಡಿಸಿಕೊಂಡಿದೆ.

ಟೀಂ ಇಂಡಿಯಾ

ಟೀಂ ಇಂಡಿಯಾ

  • Share this:
ಬೆಂಗಳೂರು (ನ. 17): ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ಇನ್ನಿಂಗ್ಸ್​ ಹಾಗೂ 130 ರನ್ ಅಂತರದಿಂದ ಗೆದ್ದು ಬೀಗಿರುವ ಟೀಂ ಇಂಡಿಯಾ ಟೆಸ್ಟ್​ ಕ್ರಿಕೆಟ್​ನಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿದೆ. ಈ ಮೂಲಕ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲೂ ಕೊಹ್ಲಿ ಪಡೆಯ ಅಂಕ ಆಗಸದೆತ್ತರಕ್ಕೆ ಜಿಗಿದಿದೆ.

ಮೊದಲ ಟೆಸ್ಟ್​ನಲ್ಲಿ ಮಯಾಂಕ್ ಅಗರ್ವಾಲ್ ಅವರ ಅಮೋಘ 243 ರನ್, ಅಜಿಂಕ್ಯಾ ರಹಾನೆ 86, ರವೀಂದ್ರ ಜಡೇಜಾ ಅಜೇಯ 60 ಹಾಗೂ ಚೇತೇಶ್ವರ್ ಪೂಜಾರ ಅವರ 54 ರನ್​ಗಳ ನೆರವಿನಿಂದ ಭಾರತ 493 ರನ್​ಗೆ ಡಿಕ್ಲೇರ್ ಘೋಷಿಸಿತ್ತು. 343 ರನ್​ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿದ ಬಾಂಗ್ಲಾ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿ 213 ರನ್​ಗೆ ಸರ್ವಪತನ ಕಂಡಿತು.

(VIDEO): ಚೆಂಡನ್ನು ಸಿಕ್ಸ್​ಗೆ ಅಟ್ಟು; ಪೆವಿಲಿಯನ್​ನಿಂದಲೇ ಮಯಾಂಕ್​ಗೆ ಹಿಟ್​ಮ್ಯಾನ್ ಸಿಗ್ನಲ್!

ಈ ಗೆಲುವಿನೊಂದಿಗೆ ಭಾರತ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ 60 ಅಂಕ ತನ್ನ ಖಾತೆಗೆ ಸೇರಿಸಿಕೊಂಡಿದೆ. ಕಳೆದ ವೆಸ್ಟ್​ ಇಂಡೀಸ್ ಹಾಗೂ ದ. ಆಫ್ರಿಕಾ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ದೊಡ್ಡ ಮೊತ್ತದ ಗೆಲುವು ಸಾಧಿಸಿದ ಭಾರತ, ಟೆಸ್ಟ್​ ಚಾಂಪಿಯನ್​ಶಿಪ್​ ಅಂಕಪಟ್ಟಿಯಲ್ಲಿ 240 ಪಾಯಿಂಟ್​ನೊಂದಿಗೆ ಮೊದಲ ಸ್ಥಾನಕ್ಕೇರಿತ್ತು.

ಸದ್ಯ ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್​ ಜಯಿಸಿ 60 ಪಾಯಿಂಟ್ ಸಂಪಾದಿಸಿದೆ. ಇದರೊಂದಿಗೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಒಟ್ಟು 300 ಅಂಕಗಳನ್ನು ಕಲೆಹಾಕಿದ ಮೊದಲ ತಂಡ ಎಂಬ ಖ್ಯಾತಿಗೆ ಭಾರತ ಪಾತ್ರವಾಗಿದೆ. ಅಲ್ಲದೆ ಅಗ್ರಸ್ಥಾನ ಮತ್ತಷ್ಟು ಭದ್ರ ಪಡಿಸಿಕೊಂಡಿದೆ.

 71 ಆಟಗಾರರನ್ನು ರಿಲೀಸ್ ಮಾಡಿದ 8 ಫ್ರಾಂಚೈಸಿ; ಯಾವ ತಂಡದ ಬಳಿ ಎಷ್ಟು ಹಣವಿದೆ?; ಇಲ್ಲಿದೆ ಫುಲ್ ಲಿಸ್ಟ್​!

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಅಂಕಪಟ್ಟಿಯ 2ನೇ ಸ್ಥಾನದಲ್ಲಿ 60 ಅಂಕಹೊಂದಿ ನ್ಯೂಜಿಲೆಂಡ್ ತಂಡವಿದ್ದರೆ, ಶ್ರೀಲಂಕಾ ಕೂಡ 60 ಪಾಯಿಂಟ್​ನಿಂದ 3ನೇ ಸ್ಥಾನದಲ್ಲಿದೆ. 4ನೇ ಸ್ಥಾನ 56 ಪಾಯಿಂಟ್​ನೊಂದಿಗೆ ಆಸ್ಟ್ರೇಲಿಯಾ ತಂಡ ಹೊಂದಿದೆ.

ವಿಶೇಷ ಎಂದರೆ 2012ರ ಬಳಿಕ ಭಾರತ ತಂಡ ತವರಿನಲ್ಲಿ ಒಂದೇ ಒಂದು ಟೆಸ್ಟ್​ ಸರಣಿ ಸೋತಿಲ್ಲ. ಭಾರತ ಕೊನೆಯದಾಗಿ ಟೆಸ್ಟ್​ ಸರಣಿ ಸೋತಿದ್ದು 2012ರ ಡಿಸೆಂಬರ್​ನಲ್ಲಿ ಇಂಗ್ಲೆಂಡ್ ವಿರುದ್ಧ. ಈ ಮೂಲಕ ತವರಿನಲ್ಲಿ ಭಾರತವನ್ನು ಬಗ್ಗು ಬಡಿಯಲು ಯಾವ ತಂಡವೂ ಯಶಸ್ವಿಯಾಗಿಲ್ಲ.

ಮೂರನೇ ದಿನಕ್ಕೆ ಮೊದಲ ಟೆಸ್ಟ್​ ಅನ್ನು ಅಂತ್ಯಗೊಳಿಸಿರುವ ಭಾರತ ಸದ್ಯ ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಕೋಲ್ಕತ್ತಾದಲ್ಲಿ ನವೆಂಬರ್ 22 ರಿಂದ ದ್ವಿತೀಯ ಟೆಸ್ಟ್​ ಆರಂಭವಾಗಲಿದ್ದು, ಡೇ ನೈಟ್ ಪಂದ್ಯ ಇದಾಗಲಿದೆ.

First published: