IND vs BAN: ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ ಡೇ ನೈಟ್ ಟೆಸ್ಟ್​; ಪಿಂಕ್ ಬಾಲ್​ ಬಗ್ಗೆ ನಿಮಗೆಷ್ಟು ಗೊತ್ತು?

ಐತಿಹಾಸಿಕ ಡೇ ನೈಟ್ ಟೆಸ್ಟ್ ಪಂದ್ಯಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ದೊರಕಿದ್ದು, ಮೊದಲ ನಾಲ್ಕು ದಿನಗಳ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿದೆ. ಅಲ್ಲದೆ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕಾಗಿ ಇಡೀ ಕೋಲ್ಕತಾ ನಗರ ಗುಲಾಬಿ ಬಣ್ಣದಿಂದ ಕಂಗೊಳಿಸುತ್ತಿದೆ.

ಈಡನ್ ಗಾರ್ಡನ್ಸ್​ ಮೈದಾನ ಹಾಗೂ ಪಿಂಕ್ ಬಾಲ್

ಈಡನ್ ಗಾರ್ಡನ್ಸ್​ ಮೈದಾನ ಹಾಗೂ ಪಿಂಕ್ ಬಾಲ್

  • Share this:
ನಾಳೆಯಿಂದ ಭಾರತ ಹಾಗೂ ಬಾಂಗ್ಲಾದೇಶ ನಡುವೆ ಎರಡನೇ ಟೆಸ್ಟ್​ ಪಂದ್ಯ ಆರಂಭವಾಗಲಿದೆ. ಕೋಲ್ಕತ್ತಾದಲ್ಲಿ ಈಡನ್ ಗಾರ್ಡನ್ಸ್​​ ಮೈದಾನದಲ್ಲಿ ಹಗಲು ರಾತ್ರಿ ಪಂದ್ಯ ನಡೆಯಲಿದ್ದು, ಈ ಐತಿಹಾಸಿಕ ಘಳಿಗೆಗೆ ಕ್ಷಣಗಣನೆ ಶುರುವಾಗಿದೆ.

ಭಾರತ ತಂಡಕ್ಕಿದು 540ನೇ ಟೆಸ್ಟ್ ಪಂದ್ಯವಾಗಿದ್ದು ಹೊಸ ಮೈಲಿಗಲ್ಲು ನೆಡಲು ಮುಂದಾಗಿದೆ. ಡೇ-ನೈಟ್, ಪಿಂಕ್ ಬಾಲ್ ಟೆಸ್ಟ್ ಎಂದೂ ಗುರುತಿಸಲಾಗುವ ಹಗಲು ರಾತ್ರಿ ಟೆಸ್ಟ್ ಪಂದ್ಯವನ್ನು ಕ್ರಿಕೆಟ್ ವಲಯಕ್ಕೆ ಐಸಿಸಿ 2012ರ ಅಕ್ಟೋಬರ್​ನಲ್ಲಿ ಅಧಿಕೃತಗೊಳಿಸಿತ್ತು. ಕ್ರಿಕೆಟ್ ಇತಿಹಾಸದಲ್ಲಿ ಇದೂವರೆಗೂ 11 ಬಾರಿ ಡೇ ನೈಟ್ ಟೆಸ್ಟ್ ಪಂದ್ಯಗಳು ನಡೆದಿವೆ. ಭಾರತ ಮತ್ತು ಬಾಂಗ್ಲಾದೇಶಕ್ಕೆ ಇದು ಪ್ರಥಮ ಹಾಗೂ ಒಟ್ಟಾರೆ 12ನೇ ಪಂದ್ಯವಾಗಿದೆ.

 ಐತಿಹಾಸಿಕ ಈ ಡೇ ನೈಟ್‌ ಟೆಸ್ಟ್‌ ಪಂದ್ಯಕ್ಕೆ ಸಾಂಪ್ರದಾಯಿಕ ಕೆಂಪು ಚೆಂಡಿನ ಬದಲಾಗಿ ಗುಲಾಬಿ ಬಣ್ಣದ ಪಿಂಕ್‌ ಬಾಲ್‌ ಬಳಕೆ ಮಾಡಲಾಗುತ್ತಿದೆ. ಹೊನಲು ಬೆಳಕಿನಲ್ಲಿ ರೆಡ್​ ಬಾಲ್ ಅನ್ನು ವೀಕ್ಷಿಸುವುದು ಆಟಗಾರರಿಗೆ ಕಷ್ಟವಾಗುವುದರಿಂದ ಪಿಂಕ್ ಬಾಲ್​ ಅನ್ನು ಪರಿಚಯಿಸಲಾಗಿದೆ.

ಆರ್​ಆರ್​ ತಂಡ ಸೇರಿಕೊಂಡ ಪಾಕಿಸ್ತಾನದ ಸ್ಟಾರ್ ಆಲ್ರೌಂಡರ್ ಆಟಗಾರ!

ಕೆಂಪು, ಬಿಳಿ ಹಾಗೂ ಗುಲಾಬಿ ಬಣ್ಣದ ಚೆಂಡು ಸಿದ್ಧ ಪಡಿಸುವ ವಿಧಾನ ಒಂದೇ ರೀತಿಯದ್ದಾದರೂ, ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಕೆಲವು ಕ್ರಮದಲ್ಲಿ ಭಿನ್ನತೆ ಹೊಂದಿವೆ. ಬಿಳಿ ಬಣ್ಣದ ಚೆಂಡುಗಳಿಗಿಂತ ಪಿಂಕ್​ಬಾಲ್​ಗಳು ನಿಧಾನಗತಿಯದ್ದು. ಆದರೆ, ರಾತ್ರಿಯ ವೇಳೆ ಕೆಂಪು ಚೆಂಡಿಗಿಂತ ಹೆಚ್ಚಿನ ಸ್ಪಷ್ಟತೆ ಹೊಂದಿವೆ. ಆ ಕಾರಣಕ್ಕಾಗಿಯೇ ಡೇ-ನೈಟ್ ಟೆಸ್ಟ್​ಗೆ ಸಾಂಪ್ರದಾಯಿಕ ಕೆಂಪು ಚೆಂಡಿನ ಬದಲು ಪಿಂಕ್​ಬಾಲ್​ಅನ್ನು ಬಳಸಲಾಗುತ್ತಿದೆ.

ಸಾಮಾನ್ಯವಾಗಿ ವಾಟರ್​ಫ್ರೂಫ್ ಆಗಿರಬೇಕು ಎನ್ನುವ ಕಾರಣಕ್ಕೆ ಕೆಂಪು ಚೆಂಡುಗಳ ಮೇಲೆ ಹೊಳಪು ಬರುವಂಥ ಗ್ರೀಸ್​ನ ಪದರವನ್ನು ಹಾಕಲಾಗುತ್ತದೆ. ಆದರೆ, ಪಿಂಕ್ ಬಾಲ್​ಗೆ ಇಂಥ ಯಾವುದೇ ಗ್ರೀಸ್​ಗಳನ್ನು ಬಳಸಲಾಗುವುದಿಲ್ಲ. ಯಾಕೆಂದರೆ ಪಿಂಕ್ ಬಾಲ್ ಹೊಳಪು ಕಳೆದುಕೊಂಡರೆ ಬಳಿಕ ಸ್ಪಷ್ಟವಾಗಿ ಕಾಣುವುದಿಲ್ಲ.

 ಮೂರು ಬಗೆಯ ಚೆಂಡು:

ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕುಕಬೂರಾ, ಎಸ್​ಜಿ ಹಾಗೂ ಡ್ಯೂಕ್ ಹೀಗೆ ಮೂರು ಕಂಪನಿಗಳ ಚೆಂಡುಗಳನ್ನು ಬಳಸಲಾಗುತ್ತಿದೆ. ಭಾರತದಲ್ಲಿ ಟೆಸ್ಟ್ ಕ್ರಿಕೆಟ್​ಗೆ ಎಸ್​ಜಿ ಕಂಪನಿಯ ಚೆಂಡುಗಳನ್ನು ಉಪಯೋಗಿಸುತ್ತದೆ. ಪಿಂಕ್ ಬಾಲ್ ಆರಂಭದಲ್ಲಿ ಕೆಂಪು ಚೆಂಡಿಗಿಂತ ಹೆಚ್ಚು ಸ್ವಿಂಗ್ ಆಗುತ್ತವೆ.

ಆದರೆ, ಕೆಂಪು ಚೆಂಡಿಗಿಂತ ಬೇಗ ಪಿಂಕ್ ಬಾಲ್ ಸ್ವಿಂಗ್​ಅನ್ನು ಕಳೆದುಕೊಳ್ಳುತ್ತದೆ. ಪಿಂಕ್ ಚೆಂಡಿನ ಸೀಮ್ ಅದ್ಭುತವಾಗಿ ಇದ್ದರೂ, ಚೆಂಡು ಮೃದುವಾದ ಬಳಿಕ ಸ್ವಿಂಗ್ ಕೂಡ ಮಾಯವಾಗುತ್ತದೆ. ಇನ್ನು ಈವರೆಗೆ ನಡೆದ ಪಿಂಕ್​ಬಾಲ್ ಟೆಸ್ಟ್​ನಲ್ಲಿ ಬೌಲರ್​ಗಳು ಹೆಚ್ಚು ಯಶಸ್ಸು ಸಾಧಿಸಿದ್ದು ಸಂಧ್ಯಾಕಾಲದ ಹೊತ್ತಿಗೆ. ಇದಕ್ಕಾಗಿ ಟೀಂ ಇಂಡಿಯಾ ಬ್ಯಾಟ್ಸ್​​ಮನ್​ಗಳು ಪಿಂಕ್​ಬಾಲ್​ನಲ್ಲಿ ಈ ಹೊತ್ತಿಗೆ ಹೆಚ್ಚು ಅಭ್ಯಾಸ ನಡೆಸುತ್ತಿದ್ದಾರೆ.

 ಈವರೆಗಿನ ಡೇ ನೈಟ್ ಟೆಸ್ಟ್:

ಮೊದಲ ಡೇ ನೈಟ್ ಟೆಸ್ಟ್ ಪಂದ್ಯ ನಡೆದದ್ದು 2015ರಂದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಮಧ್ಯೆ. ಇಲ್ಲಿಯವರೆಗೂ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಶ್ರೀಲಂಕಾ ಹೀಗೆ ಏಳು ದೇಶಗಳು ಹೊನಲು ಬೆಳಕಿನ ಟೆಸ್ಟ್ ಪಂದ್ಯಗಳನ್ನು ಆಡಿವೆ. ಈ ಸಾಲಿಗೆ ಈಗ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಸೇರ್ಪಡೆಯಾಗುತ್ತಿವೆ.

MS Dhoni: ವಿಂಡೀಸ್ ಸರಣಿಯಲ್ಲಿ ಧೋನಿ ಕಣಕ್ಕೆ?; ಕುತೂಹಲ ಮೂಡಿಸಿದೆ ಕಿಂಗ್ ಕೊಹ್ಲಿಯ ಈ ಟ್ವೀಟ್!

ಕಂಗೊಳಿಸುತ್ತಿರುವ ಕೋಲ್ಕತ್ತಾ:

ಐತಿಹಾಸಿಕ ಡೇ ನೈಟ್ ಟೆಸ್ಟ್ ಪಂದ್ಯಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ದೊರಕಿದ್ದು, ಮೊದಲ ನಾಲ್ಕು ದಿನಗಳ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿದೆ. ಅಲ್ಲದೆ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕಾಗಿ ಇಡೀ ಕೋಲ್ಕತಾ ನಗರ ಗುಲಾಬಿ ಬಣ್ಣದಿಂದ ಕಂಗೊಳಿಸುತ್ತಿದೆ. ಸ್ಟೇಡಿಯಂಗಳು ಬಣ್ಣಬಣ್ಣದ ಎಲ್‌ಇಡಿ ಲೈಟಿಂಗ್ಸ್‌ಗಳಿಂದ ತುಂಬಿ ತುಳುಕುತ್ತಿದೆ

 

 ಅಮಿತ್ ಶಾ ಉಪಸ್ಥಿತಿ:

ಈ ಅದ್ಭುತ ಘಳಿಗೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಜರಿರಲಿದ್ದಾರೆ. ಶಾ ಜೊತೆ ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಉಪಸ್ಥಿತರಿರಲಿದ್ದಾರೆ.

ಇನ್ನು ಈ ದಿನ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು, ಒಲಿಂಪಿಕ್ ದಿಗ್ಗಜರಾದ ಶೂಟಿಂಗ್ ಸ್ಟಾರ್ ಅಭಿನವ್ ಬಿಂದ್ರಾ, ಮಹಿಳಾ ಬಾಕ್ಸರ್ ಮೇರಿ ಕೋಮ್, ಬ್ಯಾಡ್ಮಿಂಟನ್ ಸ್ಟಾರ್ ಪಿ.ವಿ. ಸಿಂಧು ಸೇರಿ ಮೊದಲಾದವರನ್ನು ಸನ್ಮಾನಿಸಲು ಬಿಸಿಸಿಐ ಉದ್ದೇಶಿಸಿದೆ. ಜೊತೆಗೆ ಸಚಿನ್ ತೆಂಡೂಲ್ಕರ್ ಅವರಿಂದ ಭಾಷಣ ಏರ್ಪಡಿಸಲಾಗಿದೆ.

ಸಮಯ:

ಸಾಮಾನ್ಯವಾಗಿ ಡೇ ನೈಟ್ ಟೆಸ್ಟ್​ ಪಂದ್ಯ ಮಧ್ಯಾಹ್ನ 2:30ಕ್ಕೆ ಆರಂಭವಾಗುತ್ತದೆ. ಆದರೆ, ಭಾರತ- ಬಾಂಗ್ಲಾ 2ನೇ ಟೆಸ್ಟ್​ ಸ್ವಲ್ಪ ಬೇಗ ಮಧ್ಯಾಹ್ನ 1 ಗಂಟೆಗೆ ಶುರುವಾಗಲಿದೆ. ರಾತ್ರಿ ಸುಮಾರು 8 ಗಂಟೆ ಹೊತ್ತಿಗೆ ದಿನದ ಆಟ ಅಂತ್ಯಗೊಳ್ಳಲಿದೆ. ಪಂದ್ಯ ವೀಕ್ಷಣೆಗೆ ಬರುವ ಅಭಿಮಾನಿಗಳಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಬಿಸಿಸಿಐ ಈ ತೀರ್ಮಾನಕ್ಕೆ ಬಂದಿದೆ.

ಇನ್ನು ಮೊದಲ ಸೆಷನ್​ 3 ಗಂಟೆಗೆ ಮುಗಿಯಲಿದ್ದು, ಈ ವೇಳೆ 40 ನಿಷಗಳ ಬ್ರೇಕ್​ ನಿಗದಿಪಡಿಸಿಲಾಗಿದೆಯಂತೆ. ಎರಡನೇ ಸೆಷನ್​ 3:40ಕ್ಕೆ ಆರಂಭವಾಗಿ 5:40ಕ್ಕೆ ಅಂತ್ಯವಾಗಲಿದೆ. ಮತ್ತೆ 20 ನಿಮಿಷ ಬ್ರೇಕ್​ ನೀಡಲಾಗಿದೆ. ಆಂತಿಮ ಸೆಷನ್​ 6 ಗಂಟೆಗೆ ಆರಂಭವಾಗಿ 8 ಗಂಟೆಗೆ ಮುಕ್ತಾಯವಾಗಲಿದೆ.

 
India vs Bangladesh: Eden Gardens and Kolkata turn pink ahead of historic Day-night Test
ಕೋಲ್ಕತ್ತಾದ ಈಡನ್ ಗಾರ್ಡನ್ಸ್​ ಮೈದಾನ
First published: