• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • ಭಾರತ vs ಬಾಂಗ್ಲಾ ಮೊದಲ ಟಿ-20 ಎಷ್ಟು ಗಂಟೆಗೆ ಆರಂಭ?, ಯಾವುದರಲ್ಲಿ ನೇರ ಪ್ರಸಾರ?; ಇಲ್ಲಿದೆ ಸಂಪೂರ್ಣ ವಿವರ

ಭಾರತ vs ಬಾಂಗ್ಲಾ ಮೊದಲ ಟಿ-20 ಎಷ್ಟು ಗಂಟೆಗೆ ಆರಂಭ?, ಯಾವುದರಲ್ಲಿ ನೇರ ಪ್ರಸಾರ?; ಇಲ್ಲಿದೆ ಸಂಪೂರ್ಣ ವಿವರ

ಭಾರತ vs ಬಾಂಗ್ಲಾದೇಶ

ಭಾರತ vs ಬಾಂಗ್ಲಾದೇಶ

4 ವರ್ಷದ ಬಳಿಕ ಟೀಂ ಇಂಡಿಯಾಕ್ಕೆ ಮತ್ತೆ ಸೇರಿರುವ ಸಂಜು ಸ್ಯಾಮ್ಸನ್​ ಮಿಂಚಿದ್ದೆ ಆದಲ್ಲಿ ರಿಷಭ್ ಪಂತ್​ಗೆ ಗೇಟ್​ಪಾಸ್ ಖಂಡಿತ. ಹೀಗೆ ಭಾರತ- ಬಾಂಗ್ಲಾ ಟಿ-20 ಸರಣಿ ಹಲವು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

 • Share this:

  ಬೆಂಗಳೂರು (ನ. 02): ಭಾರತ ಹಾಗೂ ಬಾಂಗ್ಲಾದೇಶ ಸರಣಿ ಆರಂಭಕ್ಕೆ ಕೇವಲ ಒಂದು ದಿನವಷ್ಟೆ ಬಾಕಿ ಉಳಿದಿದೆ. ಮೂರು ಪಂದ್ಯಗಳ ಟಿ-20 ಸರಣಿ ಪೈಕಿ ನಾಳೆ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯಲಿದೆ. ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದುಕೊಂಡಿರುವ ಹಿನ್ನಲೆ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸುತ್ತಿದ್ದಾರೆ.

  ಸಂಜು ಸ್ಯಾಮ್ಸನ್, ಮನೀಶ್ ಪಾಂಡೆ, ರಿಷಭ್ ಪಂತ್, ಶಿವಂ ದುಬೆ, ಶ್ರೇಯಸ್ ಐಯರ್, ಶಾರ್ದೂಲ್ ಠಾಕೂರ್ ಹೀಗೆ ಯುವ ಆಟಗಾರರೇ ಭಾರತ ತಂಡದಲ್ಲಿದ್ದು, ಹಿರಿಯ ಆಟಗಾರರಾದ ಮೊಹಮ್ಮದ್ ಶಮಿ, ಕೊಹ್ಲಿ, ಜಡೇಜಾಗೆ ವಿಶ್ರಾಂತಿ ನೀಡಲಾಗಿದೆ.

  India vs Bangladesh Delhi T20I Live Streaming: When and where to watch live telecast on TV and online
  ಭಾರತ vs ಬಾಂಗ್ಲಾದೇಶ


  4 ವರ್ಷದ ಬಳಿಕ ಟೀಂ ಇಂಡಿಯಾಕ್ಕೆ ಮತ್ತೆ ಸೇರಿರುವ ಸಂಜು ಸ್ಯಾಮ್ಸನ್​ ಮಿಂಚಿದ್ದೆ ಆದಲ್ಲಿ ರಿಷಭ್ ಪಂತ್​ಗೆ ಗೇಟ್​ಪಾಸ್ ಖಂಡಿತ. ಹೀಗೆ ಭಾರತ- ಬಾಂಗ್ಲಾ ಟಿ-20 ಸರಣಿ ಹಲವು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

  ಪಂದ್ಯ ಎಲ್ಲಿ?: ನವೆಂಬರ್ 3 ರಂದು ಭಾರತ- ಬಾಂಗ್ಲಾದೇಶ ನಡುವೆ ಮೊದಲ ಟಿ-20 ಪಂದ್ಯ ನವ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ

  ಸಮಯ: ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ. 6: 30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ

  ಲೈವ್ ಪಂದ್ಯ ವೀಕ್ಷಿಸುವುದು ಹೇಗೆ?: ಭಾರತ- ಬಾಂಗ್ಲಾದೇಶ ಮೊದಲ ಟಿ-20 ಪಂದ್ಯವನ್ನು ಲೈವ್ ಆಗಿ ಸ್ಟಾರ್ ಸ್ಫೋರ್ಟ್ಸ್​ 1 ಹಾಗೂ ಸ್ಟಾರ್ ಸ್ಫೋರ್ಟ್ಸ್​ 1 HD ಯಲ್ಲಿ ವೀಕ್ಷಿಸಬಹುದು. ಇನ್ನು ಆನ್​ಲೈನ್​ ಮೂಲಕ ಹಾಟ್​ಸ್ಟಾರ್​​ನಲ್ಲಿ ಲೈವ್ ವೀಕ್ಷಿಸಬಹುದಾಗಿದೆ.

  ಭಾರತ- ಬಾಂಗ್ಲಾ ನಡುವೆ 2ನೇ ಟಿ-20 ಪಂದ್ಯ ನ. 7 ರಂದು ರಾಜ್ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್​ನಲ್ಲಿ ಆಯೋಜಿಸಲಾಗಿದೆ. ಅಂತಿಮ ಪಂದ್ಯ ನ. 10 ಕ್ಕೆ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್​ನಲ್ಲಿ ನಡೆಯಲಿದೆ.

   


  ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಕೆ ಎಲ್ ರಾಹುಲ್, ಸಂಜು ಸ್ಯಾಮ್ಸನ್, ಶ್ರೇಯಸ್ ಐಯರ್, ಮನೀಶ್ ಪಾಂಡೆ, ರಿಷಭ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಕ್ರುನಾಲ್ ಪಾಂಡ್ಯ, ಯಜುವೇಂದ್ರ ಚಹಾಲ್, ರಾಹುಲ್ ಚಹಾರ್, ದೀಪಕ್ ಚಹಾರ್, ಖಲೀಲ್ ಅಹ್ಮದ್, ಶಿವಂ ದುಬೆ, ಶಾರ್ದೂಲ್ ಠಾಕೂರ್.

  ಬಾಂಗ್ಲಾದೇಶ ತಂಡ: ಲಿಟನ್ ದಾಸ್, ಸೌಮ್ಯ ಸರ್ಕಾರ್, ಮೊಹಮ್ಮದ್ ನೈಮ್, ಮೊಹಮ್ಮದುಲ್ಲ (ನಾಯಕ), ಮುಷ್ಫೀಕರ್ ರಹೀಮ್ (ವಿಕೆಟ್ ಕೀಪರ್), ಅಫಿಫ್ ಹೊಸೈನ್, ಅಮಿನುಲ್ ಇಸ್ಲಾಂ, ಮೊಹಮ್ಮದ್ ಮಿಥುನ್, ಮೊಸಡ್ಡೆಕ್ ಹೊಸೈನ್, ಅಬು ಹೈದರ್ ರೋನಿ, ಮುಸ್ತಫಿಜುರ್ ರೆಹ್ಮಾನ್, ಶಫಿಲ್ ಇಸ್ಲಾಂ, ಅರಾಫತ್ ಸನ್ನಿ, ಅಲ್- ಅಮಿನ್ ಹೊಸೈನ್, ತೈಜುಲ್ ಇಸ್ಲಾಂ.

  First published: