IND vs BAN Test: ಭಾರತ- ಬಾಂಗ್ಲಾ ಚೊಚ್ಚಲ ಡೇ ನೈಟ್ ಟೆಸ್ಟ್​ ಪಂದ್ಯಕ್ಕೆ ಟೈಮಿಂಗ್ಸ್​ ಫಿಕ್ಸ್​

ಸಾಮಾನ್ಯವಾಗಿ ಡೇ ನೈಟ್ ಟೆಸ್ಟ್​ ಪಂದ್ಯ ಮಧ್ಯಾಹ್ನ 2:30ಕ್ಕೆ ಆರಂಭವಾಗುತ್ತದೆ. ಆದರೆ, ಭಾರತ- ಬಾಂಗ್ಲಾ 2ನೇ ಟೆಸ್ಟ್​ ಸ್ವಲ್ಪ ಬೇಗೆ ಮಧ್ಯಾಹ್ನ 1 ಗಂಟೆಗೆ ಶುರುವಾಗಲಿದೆ. ರಾತ್ರಿ ಸುಮಾರು 8 ಗಂಟೆ ಹೊತ್ತಿಗೆ ದಿನದ ಆಟ ಅಂತ್ಯಗೊಳ್ಳಲಿದೆ.

ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣ

ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣ

  • Share this:
ಬೆಂಗಳೂರು (. 13): ಭಾರತ- ಬಾಂಗ್ಲಾದೇಶ ನಡುವಣ ಕ್ರಿಕೆಟ್ ಸರಣಿಯ ಕೊನೆಯ ಟೆಸ್ಟ್ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ಮೈದಾನದಲ್ಲಿ ನಡೆಯಲಿದ್ದು ಡೇ ನೈಟ್ ಮ್ಯಾಚ್ ಆಗಿರಲಿದೆ. ಬಾಂಗ್ಲಾ ವಿರುದ್ಧದ ಹೊನಲು ಬೆಳಕಿನ ಟೆಸ್ಟ್ಕ್ರಿಕೆಟ್ ಪಂದ್ಯಕ್ಕೆ ಬಿಸಿಸಿಐ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಭಾರತಕ್ಕಿದು ಐತಿಹಾಸಿಕ ಟೆಸ್ಟ್​ ಪಂದ್ಯ. ಈಡನ್ ಗಾರ್ಡನ್ಸ್​ನಲ್ಲಿ 68 ಸಾವಿರ ಜನರು ಕುಳಿತುಕೊಳ್ಳುವ ಆಸನದ ವ್ಯವಸ್ಥೆ ಇದ್ದು, ಐದು ದಿನವೂ ಸ್ಟೇಡಿಯಂ ಹೌಸ್​ಫುಲ್​ ಆಗಬೇಕೆಂದು ಬಿಸಿಸಿಐ ಚಿಂತನೆ ನಡೆಸಿದೆ. ಒಂದು ದಿನದ ಟಿಕೆಟ್ ದರ ಕೇವಲ 50 ರೂಪಾಯಿಗೆ ನೀಡಲು ಮುಂದಾಗಿದೆ.

Rohit Sharma: 33 ಫೋರ್, 9 ಸಿಕ್ಸ್​, 264 ರನ್ಸ್​; ರೋಹಿತ್ ಶರ್ಮಾ ವಿಶ್ವದಾಖಲೆಗೆ 5 ವರ್ಷ!

ಸಾಮಾನ್ಯವಾಗಿ ಡೇ ನೈಟ್ ಟೆಸ್ಟ್​ ಪಂದ್ಯ ಮಧ್ಯಾಹ್ನ 2:30ಕ್ಕೆ ಆರಂಭವಾಗುತ್ತದೆ. ಆದರೆ, ಭಾರತ- ಬಾಂಗ್ಲಾ 2ನೇ ಟೆಸ್ಟ್​ ಸ್ವಲ್ಪ ಬೇಗೆ ಮಧ್ಯಾಹ್ನ 1 ಗಂಟೆಗೆ ಶುರುವಾಗಲಿದೆ. ರಾತ್ರಿ ಸುಮಾರು 8 ಗಂಟೆ ಹೊತ್ತಿಗೆ ದಿನದ ಆಟ ಅಂತ್ಯಗೊಳ್ಳಲಿದೆ. ಪಂದ್ಯ ವೀಕ್ಷಣೆಗೆ ಬರುವ ಅಭಿಮಾನಿಗಳಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಬಿಸಿಸಿಐ ಈ ತೀರ್ಮಾನಕ್ಕೆ ಬಂದಿದೆ.

ಇನ್ನು ಮೊದಲ ಸೆಷನ್​ 3 ಗಂಟೆಗೆ ಮುಗಿಯಲಿದ್ದು, ಈ ವೇಳೆ 40 ನಿಷಗಳ ಬ್ರೇಕ್​ ನಿಗದಿಪಡಿಸಿಲಾಗಿದೆಯಂತೆ. ಎರಡನೇ ಸೆಷನ್​ 3:40ಕ್ಕೆ ಆರಂಭವಾಗಿ 5:40ಕ್ಕೆ ಅಂತ್ಯವಾಗಲಿದೆ. ಮತ್ತೆ 20 ನಿಮಿಷ ಬ್ರೇಕ್​ ನೀಡಲಾಗಿದೆ. ಆಂತಿಮ ಸೆಷನ್​ 6 ಗಂಟೆಗೆ ಆರಂಭವಾಗಿ 8 ಗಂಟೆಗೆ ಮುಕ್ತಾಯವಾಗಲಿದೆ.

IND vs BAN: ಮೊದಲ ಟೆಸ್ಟ್​ಗೆ ಟೀಂ ಇಂಡಿಯಾದಲ್ಲಿ ಯಾರಿಗೆಲ್ಲ ಅವಕಾಶ?; ಇಲ್ಲಿದೆ ಸಂಭಾವ್ಯ ಪಟ್ಟಿ

ಈ ಪಂದ್ಯಕ್ಕೆ ಜಿಲ್ಲೆಯ ಶಾಲಾ ಮಕ್ಕಳಳನ್ನು ಆಹ್ವಾನಿಸಲಾಗಿದೆಯಂತೆ. ಟಿಕೆಟ್ ದರ ಒಂದು ದಿನಕ್ಕೆ 50 ರೂಪಾಯಿಂದ ಆರಂಭವಾಗಲಿದೆ. ಜೊತೆಗೆ 100 ಮತ್ತು 150 ರೂ. ಗಳ ಟಿಕೆಟ್ ಕೂಡ ಲಭ್ಯವಿದೆ. ಮೂಲಗಳ ಪ್ರಕಾರ ಈಗಾಗಲೇ ಮೊದಲ ಮೂರು ದಿನದ ಟಿಕೆಟ್ ಸೋಲ್ಡ್​ಔಟ್​ ಆಗಿದೆಯಂತೆ.

ಡೇ ನೈಟ್​ ಐತಿಹಾಸಿಕ ಟೆಸ್ಟ್​ ಪಂದ್ಯಕ್ಕೆ ವಿವಿಧ ಕ್ರೀಡೆಗಳ ಸೂಪರ್​ಸ್ಟಾರ್​ಗಳು ಸಾಕ್ಷಿಯಾಗಲಿದ್ದಾರೆ. ಒಲಿಂಪಿಕ್ ದಿಗ್ಗಜರಾದ ಶೂಟಿಂಗ್ ಸ್ಟಾರ್ ಅಭಿನವ್ ಬಿಂದ್ರಾ, ಮಹಿಳಾ ಬಾಕ್ಸರ್ ಮೇರಿ ಕೋಮ್, ಬ್ಯಾಡ್ಮಿಂಟನ್ ಸ್ಟಾರ್ ಪಿ.ವಿ. ಸಿಂಧು ಮೊದಲಾದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲು ಬಿಸಿಸಿಐ ಉದ್ದೇಶಿಸಿದೆ.

First published: