ಟಿ-20 ಸರಣಿಗೆ ಬಾಂಗ್ಲಾ ತಂಡ ಪ್ರಕಟ; ಜೈಲಿನಲ್ಲಿದ್ದ ಆಟಗಾರನಿಗೆ ಟೀಂ ಇಂಡಿಯಾ ವಿರುದ್ಧ ಆಡಲು ಅವಕಾಶ!

ಸದ್ಯ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟೆಸ್ಟ್​ಗೆ ಸಿದ್ಧತೆ ನಡೆಸುತ್ತಿದೆ. ನಾಳೆ ರಾಂಚಿಯಲ್ಲಿ ಮೂರನೇ ಟೆಸ್ಟ್​ ಆರಂಭವಾಗಲಿದೆ. ಇದು ಮುಗಿದ ಬಳಿಕ ಅಕ್ಟೋಬರ್ 24 ರಂದು ಬಾಂಗ್ಲಾ ವಿರುದ್ಧದ ಟಿ-20 ಸರಣಿಗೆ ಭಾರತ ತಂಡ ಪ್ರಕಟವಾಗಲಿದೆ.

Vinay Bhat | news18-kannada
Updated:October 18, 2019, 9:36 AM IST
ಟಿ-20 ಸರಣಿಗೆ ಬಾಂಗ್ಲಾ ತಂಡ ಪ್ರಕಟ; ಜೈಲಿನಲ್ಲಿದ್ದ ಆಟಗಾರನಿಗೆ ಟೀಂ ಇಂಡಿಯಾ ವಿರುದ್ಧ ಆಡಲು ಅವಕಾಶ!
ಭಾರತ vs ಬಾಂಗ್ಲಾದೇಶ
  • Share this:
ಬೆಂಗಳೂರು (ಅ. 18): ನವೆಂಬರ್​ನಲ್ಲಿ ಬಾಂಗ್ಲಾದೇಶ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು ಟೀಂ ಇಂಡಿಯಾ ವಿರುದ್ಧ ಮೂರು ಪಂದ್ಯಗಳ ಟಿ-20 ಹಾಗೂ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಸದ್ಯ ಬಾಂಗ್ಲಾದೇಶ ಕ್ರಿಕೆಟ್ ಟಿ-20 ಸರಣಿಗೆ 15 ಮಂದಿ ಆಟಗಾರರ ತಂಡವನ್ನು ಪ್ರಕಟ ಮಾಡಿದೆ.

ಸತತ ಸೋಲುಗಳಿಂದ ಕಂಗೆಟ್ಟಿರುವ ಬಾಂಗ್ಲಾಕ್ಕೆ ಈ ಸರಣಿ ಮುಖ್ಯವಾಗಿದೆ. ಹೀಗಾಗಿ ಅನುಭವಿ ಆಟಗಾರ ಶಕಿಬ್ ಅಲ್ ಹಸನ್ ಸಾರಥ್ಯದಲ್ಲಿ ಮುನ್ನಡೆಯುತ್ತಿದೆ.

 

RCB: ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲು; ನೂತನ ಬದಲಾವಣೆ ತಂಡ ಆರ್​ಸಿಬಿ ತಂಡ

ಅಲ್ಲದೆ 2017 ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ತನ್ನ ಗೆಳತಿಯೊಂದಿಗೆ ಅಶ್ಲೀಲ ಫೋಟೋ ಹಂಚಿಕೊಂಡಿದ್ದಕ್ಕಾಗಿ ಎರಡು ತಿಂಗಳು ಜೈಲು ಪಾಲಾಗಿದ್ದ ಅರಾಫತ್ ಸನ್ನಿಗೆ ಅವಕಾಶ ನೀಡಿರುವುದು ವಿಶೇಷ. ಎಡಗೈ ಸ್ಪಿನ್ನರ್ ಅರಾಫತ್ 2016ರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅನುಮಾನಸ್ಪದ ಬೌಲಿಂಗ್​ನಿಂದ ನಿಷೇಧಕ್ಕೂ ಒಳಗಾಗಿದ್ದರು.

ನವೆಂಬರ್ 3 ರಂದು ಡೆಲ್ಲಿಯಲ್ಲಿ ಮೊದಲ ಟಿ-20 ಪಂದ್ಯ ನಡೆದರೆ, ಎರಡನೇ ಪಂದ್ಯ ನ .7ಕ್ಕೆ ರಾಜ್ಕೋಟ್​ನಲ್ಲಿ ಹಾಗೂ ನ. 10 ರಂದು ನಾಗ್ಪುರದಲ್ಲಿ ಅಂತಿಮ ಮೂರುನೆ ಟಿ-20 ಆಯೋಜಿಸಲಾಗಿದೆ.

ಬಾಂಗ್ಲಾ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಮಿನ್ಹಾಜುಲ್ ಮಾತನಾಡಿ, ಭಾರತದಂತಹ ಬಲಿಷ್ಠ ತಂಡವನ್ನು ಎದುರಿಸಲು ಅನುಭವಿ ಆಟಗಾರರ ಅವಶ್ಯಕತೆಯಿದೆ. ಹೀಗಾಗಿ ಕೆಲವು ಹಿರಿಯ ಆಟಗಾರರಿಗೆ ಅವಕಾಶ ನೀಡಲಾಗಿದೆ ಎಂದಿದ್ದಾರೆ.

 ವಿಜಯ್ ಹಜಾರೆ ಟ್ರೋಫಿ: ನಾಕೌಟ್ ಹಂತಕ್ಕೆ ಪುದುಚೇರಿ; ಕರ್ನಾಟಕ ಸೇರಿ ಕ್ವಾರ್ಟರ್​ಫೈನಲ್ ಪ್ರವೇಶಿಸಿದ 8 ತಂಡಗಳ ಪಟ್ಟಿ

ಸದ್ಯ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟೆಸ್ಟ್​ಗೆ ಸಿದ್ಧತೆ ನಡೆಸುತ್ತಿದೆ. ನಾಳೆ ರಾಂಚಿಯಲ್ಲಿ ಮೂರನೇ ಟೆಸ್ಟ್​ ಆರಂಭವಾಗಲಿದೆ. ಇದು ಮುಗಿದ ಬಳಿಕ ಅಕ್ಟೋಬರ್ 24 ರಂದು ಬಾಂಗ್ಲಾ ವಿರುದ್ಧದ ಟಿ-20 ಸರಣಿಗೆ ಭಾರತ ತಂಡ ಪ್ರಕಟವಾಗಲಿದೆ.

ಭಾರತ ವಿರುದ್ಧದ ಟಿ-20 ಸರಣಿಗೆ ಬಾಂಗ್ಲಾ ತಂಡ:

ಶಕೀಬ್ ಅಲ್ ಹಸನ್ (ನಾಯಕ), ತಮೀಮ್​ ಇಕ್ಬಾಲ್, ಲಿಟಾನ್ ದಾಸ್, ಸೌಮ್ಯ ಸರ್ಕಾರ್, ನೈಮ್ ಶೇಖ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮದುಲ್ಲಾ ರಿಯಾದ್, ಅಫಿಫ್ ಹೊಸೈನ್, ಮುಸದ್ದೇಕ್ ಹೊಸೈನ್, ಅಮೀನುಲ್ ಇಸ್ಲಾಂ ಬಿಪ್ಲೋಬ್, ಅರಾಫತ್ ಸನ್ನಿ, ಮೊಹಮ್ಮದ್ ಸೈಫುದ್ದೀನ್, ಅಲ್-ಅಮೀನ್ ಹೊಸೈನ್, ಮುಸ್ತಫಿಜುರ್ ರೆಹಮಾನ್, ಶೈಫುಲ್ ಇಸ್ಲಂ.

First published: October 18, 2019, 9:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading