ಕಳಪೆ ಕೀಪರ್​ಗಳ​ ಪಟ್ಟಿಯಲ್ಲಿ ಧೋನಿಗೆ ಮೂರನೇ ಸ್ಥಾನ; ಸ್ಟಂಪ್​ ಹಿಂದೆಯೂ ಸ್ಲೋ ಆಗಿದ್ದಾರಾ ಎಂಎಸ್​ಡಿ?

MS Dhoni | ಈ ಹಿಂದೆ ಅನೇಕ ಬಾರಿ ಧೋನಿ ಡಿಆರ್​ಎಸ್​ ಮನವಿಯನ್ನು ನಿಖರವಾಗಿ ಮಾಡಿದ್ದರೂ, ಈ ಬಾರಿ ವಿಶ್ವಕಪ್​ನಲ್ಲಿ ಮಾಜಿ ನಾಯಕನ ಲೆಕ್ಕಾಚಾರಗಳು ತಲೆಕೆಳಗಾಗುತ್ತಿದೆ. ಇದರ ಬಗ್ಗೆ ಅಭಿಮಾನಿಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Rajesh Duggumane | news18
Updated:July 2, 2019, 1:08 PM IST
ಕಳಪೆ ಕೀಪರ್​ಗಳ​ ಪಟ್ಟಿಯಲ್ಲಿ ಧೋನಿಗೆ ಮೂರನೇ ಸ್ಥಾನ; ಸ್ಟಂಪ್​ ಹಿಂದೆಯೂ ಸ್ಲೋ ಆಗಿದ್ದಾರಾ ಎಂಎಸ್​ಡಿ?
ಎಂಸ್​ ಧೋನಿ
  • News18
  • Last Updated: July 2, 2019, 1:08 PM IST
  • Share this:
ಕೊನೆಯ ಓವರ್​ನಲ್ಲಿ 15-20 ರನ್​ಗಳ ಅವಶ್ಯಕತೆ ಇದ್ದಾಗ ಎಂಸ್​ ಧೋನಿ ಬ್ಯಾಟಿಂಗ್​ ನಿಂತರೆ ಸಾಕು ಜಯ ಖಚಿತ ಎಂದೇ ಭಾವಿಸಲಾಗುತ್ತಿತ್ತು. ಆದರೆ, ಈಗ ಧೋನಿ ಮೊದಲಿನಂತಿಲ್ಲ. ಬ್ಯಾಟ್​ ಬೀಸುವುದರಲ್ಲಿ ಅವರು ಕೊಂಚ ಮಂದವಾಗಿದ್ದಾರೆ. ವಿಶ್ವಕಪ್​ನಲ್ಲಿ ಇಂಗ್ಲೆಂಡ್ ವಿರುದ್ಧದ​ ಪಂದ್ಯದಲ್ಲಿ ಅವರು ನಿಧಾನವಾಗಿ ಆಟವಾಡಿದ್ದಕ್ಕೆ ಅನೇಕರು ಟೀಕೆ ವ್ಯಕ್ತಪಡಿಸಿದ್ದರು. ಇದು ಧೋನಿ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿತ್ತು. ಇದರ ಜೊತೆಗೆ ಧೋನಿಗೆ ಕಳಪೆ ಕೀಪರ್​ ಎನ್ನುವ ಕುಖ್ಯಾತಿಯೂ ಬೆನ್ನಿಗಂಟಿದೆ.

ಬ್ಯಾಟಿಂಗ್​ನಲ್ಲಿ ಮಿಂಚುತ್ತಿದ್ದ ಧೋನಿ ಕೀಪಿಂಗ್​ನಲ್ಲೂ ಚಾಕಚಕ್ಯತೆ ಮೆರೆಯುತ್ತಿದ್ದರು. ಅವರು ಕೀಪಿಂಗ್​ಗೆ ನಿಂತಾಗ ಎದುರಾಳಿ ಬ್ಯಾಟ್ಸ್​​ಮನ್​ಗಳು ಸ್ಕ್ರೀಸ್​ ಬಿಟ್ಟು ಮುಂದೆ ತೆರಳಲು ಭಯ ಬೀಳುತ್ತಿದ್ದರು. ಆದರೆ, ಈಗ ಕೀಪಿಂಗ್​ನಲ್ಲಿ ಧೋನಿ ಚಮತ್ಕಾರ  ಮುಂಚಿನಂತೆ ನಡೆಯುತ್ತಿಲ್ಲ. ಅನೇಕ ಕ್ಯಾಚ್​ಗಳನ್ನು ಕೈ ಬಿಟ್ಟು ಅಭಿಮಾನಿಗಳ ಬೇಸರಕ್ಕೆ ಅವರು ಕಾರಣವಾಗಿದ್ದಾರೆ.

2019ರ ವಿಶ್ವಕಪ್​ನಲ್ಲಿ ಭಾರತ ಆಡಿದ ಆರು ಪಂದ್ಯಗಳಲ್ಲಿ  ತಲಾ 2 ಕ್ಯಾಚ್​​  ಹಾಗೂ 2 ಸ್ಟಂಪಿಂಗ್​ ಮಾಡುವ ಅವಕಾಶವನ್ನು ಧೋನಿ ಕೈಚೆಲ್ಲಿದ್ದಾರೆ. ಪ್ರಯಾಸದ ಕ್ಯಾಚ್​ಗಳನ್ನು ಹಿಡಿಯಲು ಅವರಿಗೆ ಸಾಧ್ಯವಾಗುತ್ತಿಲ್ಲ ಎನ್ನುವ ಮಾತೂ ಇದೆ. ಈ ದತ್ತಾಂಶಗಳನ್ನು ಪರಿಗಣಿಸಿದರೆ ವಿಶ್ವಕಪ್​ನಲ್ಲಿ ಕಳಪೆ ಕೀಪರ್​ ಸ್ಥಾನದಲ್ಲಿ ಧೋನಿಗೆ ಮೂರನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಕೀಪರ್​ ಅಲೆಕ್ಸ್​​ ಕ್ಯಾರಿ ಮೊದಲ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಧೋನಿ ಮಾಡಿದ ಸಣ್ಣದೊಂದು ಎಡವಟ್ಟು ಟೀಂ ಇಂಡಿಯಾದ ಸೋಲಿಗೆ ಕಾರಣವಾಯ್ತು..!

ಒಂದು ಡಿಆರ್​ಎಸ್ ಎಂದರೆ ಧೋನಿ ರಿವ್ಯೂ ಸಿಸ್ಟಂ ಎಂದೇ ಖ್ಯಾತಿ ಪಡೆದಿತ್ತು. ಆದರೆ, ಇತ್ತೀಚೆಗೆ ಧೋನಿ ರಿವ್ಯೂವ್​ ಸಿಸ್ಟಮ್​ ಕೂಡ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಭಾನುವಾರದ ಇಂಗ್ಲೆಂಡ್​ ಎದುರಿನ ಮಹತ್ವದ ಪಂದ್ಯದಲ್ಲಿ ಧೋನಿ ಮಾಡಿದ ತಪ್ಪು ಭಾರತದ ಸೋಲಿಗೆ ಕಾರಣ ಎಂದೂ ಹೇಳಾಗುತ್ತಿದೆ.

11ನೇ ಓವರ್​​ನಲ್ಲೇ ಪೆವಿಲಿಯನ್​ ಸೇರಬೇಕಿದ್ದ ಜೇಸನ್ ರಾಯ್​ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನೀಡಿದ ಜೀವದಾನ ಮುಳುವಾಯಿತು. ಹಾರ್ದಿಕ್ ಪಾಂಡ್ಯ ಎಸೆದ ಚೆಂಡು ಜೇಸನ್ ರಾಯ್ ಗ್ಲೌವ್ಸ್​ ತಗುಲಿ ವಿಕೆಟ್ ಕೀಪರ್​ ಮಹೇಂದ್ರ ಸಿಂಗ್ ಧೋನಿಯ ಕೈ ಸೇರಿತ್ತು. ಬೌಲರ್ ಮನವಿಗೆ ಅಂಪೈರ್ ನಾಟೌಟ್ ಎಂದು ತೀರ್ಪಿಟ್ಟಿದ್ದರು. ಈ ವೇಳೆ ಕೊಹ್ಲಿ ಮತ್ತು ಹಾರ್ದಿಕ್ ಡಿಆರ್‌ಎಸ್‌ ತೆಗೆದುಕೊಳ್ಳಲು ಉತ್ಸುಕರಾಗಿದ್ದರು. ಆದರೆ, ಧೋನಿ ನಿರುತ್ಸಾಹ ತೋರಿದ್ದರು. ಇದೇ ವೇಳೆ ಮಾಜಿ ನಾಯಕ ಡಿಆರ್​ಎಸ್ ಮೊರೆ ಹೋಗದಂತೆ ಭಾರತ ತಂಡದ ನಾಯಕನಿಗೆ ತಿಳಿಸಿದ್ದರು. ಈ ದುಬಾರಿ ತೀರ್ಮಾನ ತಂಡಕ್ಕೆ ಮುಳುವಾಗಿ ಪರಿಣಮಿಸಿತ್ತು.

ಇದನ್ನೂ ಓದಿ: ಇಂದು ಬಾಂಗ್ಲಾಗೆ ಟೀಂ ಇಂಡಿಯಾ ಸವಾಲು; ಕೊಹ್ಲಿ ಪಡೆಯಲ್ಲಿ ಮಹತ್ವದ ಬದಲಾವಣೆ?ಈ ಹಿಂದೆ ಅನೇಕ ಬಾರಿ ಧೋನಿ ಡಿಆರ್​ಎಸ್​ ಮನವಿಯನ್ನು ನಿಖರವಾಗಿ ಮಾಡಿದ್ದರೂ, ಈ ಬಾರಿ ವಿಶ್ವಕಪ್​ನಲ್ಲಿ ಮಾಜಿ ನಾಯಕನ ಲೆಕ್ಕಾಚಾರಗಳು ತಲೆಕೆಳಗಾಗುತ್ತಿದೆ. ಇದರ ಬಗ್ಗೆ ಅಭಿಮಾನಿಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

First published:July 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ