India vs Bangladesh: 2ನೇ ದಿನದಾಟದ ಅಂತ್ಯಕ್ಕೆ ಬಾಂಗ್ಲಾ 152-6; 89 ರನ್​​​ಗಳ ಮುನ್ನಡೆ

ರವೀಂದ್ರ ಜಡೇಜಾ ಜೊತೆಗೂಡಿ ಕೊಹ್ಲಿ ಅತ್ಯುತ್ತಮ ರನ್ ಕಲೆಹಾಕಿದರು. ಈ ನಡುವೆ ಕೊಹ್ಲಿ ಅಮೋಘ ಶತಕ ಬಾರಿಸಿ ಮಿಂಚಿದರು. 159 ಎಸೆತಗಳಲ್ಲಿ 12 ಬೌಂಡರಿಯೊಂದಿಗೆ ಕೊಹ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ 27ನೇ ಶತಕ ಪೂರೈಸಿದರು.

Vinay Bhat | news18-kannada
Updated:November 23, 2019, 9:00 PM IST
India vs Bangladesh: 2ನೇ ದಿನದಾಟದ ಅಂತ್ಯಕ್ಕೆ ಬಾಂಗ್ಲಾ 152-6; 89 ರನ್​​​ಗಳ ಮುನ್ನಡೆ
ಮೊದಲ ವಿಕೆಟ್​ಗೆ ನಿಧಾನಗತಿಯಲ್ಲಿ 163 ರನ್​ಗಳನ್ನು ಕಲೆ ಹಾಕಿದ ಈ ಜೋಡಿಯನ್ನು ವೇಗಿ ಉಮೇಶ್ ಯಾದವ್​ ಪೆವಿಲಿಯನ್​ನತ್ತ ಕಳುಹಿಸಿದ್ದರು.
  • Share this:
ಕೋಲ್ಕತ್ತಾ (ನ. 23): ಇಲ್ಲಿನ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ಸಾಗುತ್ತಿರುವ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಗೆಲುವಿನತ್ತ ದಾಪುಗಾಲಿಡುತ್ತಿದೆ.

ಭಾರತ ತನ್ನ ಮೊದಲ ಮೊದಲ ಇನ್ನಿಂಗ್ಸ್​ನಲ್ಲಿ 347 ರನ್​ ಗಳಿಸಿರುವಾಗ ಡಿಕ್ಲೇರ್ ಘೋಷಿಸಿತು. ಬಳಿಕ ತನ್ನ 2ನೇ ಇನ್ನಿಂಗ್ಸ್​ ಆರಂಭಿಸಿದ ಬಾಂಗ್ಲಾ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ೨ನೇ ದಿನದಾಟದ ಅಂತ್ಯಕ್ಕೆ ಬಾಂಗ್ಲಾದೇಶ 152 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿದೆ. ಬಾಂಗ್ಲಾ 89 ಹಿನ್ನಡೆಯಲ್ಲಿದೆ.


ಭಾರತದ ಪರ ವಿರಾಟ್ ಕೊಹ್ಲಿ ಅಮೋಘ ಶತಕ, ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯಾ ರಹಾನೆ ಅರ್ಧಶತಕ ನೆರವಿನಿಂದ ಭಾರತ 241 ರನ್​ಗಳ ಉತ್ತಮ ಮುನ್ನಡೆ ಸಾಧಿಸಿತ್ತು.

ತನ್ನ 2ನೇ ಇನ್ನಿಂಗ್ಸ್​ನಲ್ಲಿ ಬಾಂಗ್ಲಾದೇಶ ಆರಂಭದಲ್ಲೇ ಆಘಾತ ಅನುಭವಿಸಿತು. ಇಶಾಂತ್ ಶರ್ಮಾ ಸ್ವಿಂಗ್ ಮೋಡಿಗೆ ಶದ್ಮಾನ್ ಇಸ್ಲಾಂ ಹಾಗೂ ನಾಯಕ ಮೊಯಿನುಲ್ ಹಖಿ ಸೊನ್ನೆ ಸುತ್ತಿದರೆ, ಇಮ್ರುಲ್ ಕೇಯಿಸ್ 4 ಹಾಗೂ ಮೊಹಮ್ಮದ್ ಮಿಥುನ 6 ರನ್ ಗಳಿಸಿ ಔಟ್ ಆದರು.

ಸದ್ಯ 4 ವಿಕೆಟ್ ಕಳೆದುಕೊಂಡಿರುವ ಬಾಂಗ್ಲಾಕ್ಕೆ ಮುಷ್ಫೀಕರ್ ಹಾಗೂ ಮೆಹ್ದಿ ಹಸನ್  ಆಸರೆಯಾಗಿ ನಿಂತಿದ್ದಾರೆ. ಈ ನಡುವೆ ಚೆನ್ನಾಗಿಯೆ ಆಡುತ್ತಿದ್ದ ಮೊಹಮ್ಮದುಲ್ಲ(39*) ಇಂಜುರಿಗೆ ತುತ್ತಾದ ಪರಿಣಾಮ ಪೆವಿಲಿಯನ್​ಗೆ ಸರಿದರು.

ಇದಕ್ಕೂ ಮೊದಲು ಬಾಂಗ್ಲಾದೇಶವನ್ನು ಕೇವಲ 106 ರನ್​ಗೆ ಆಲೌಟ್ ಮಾಡಿ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ್ದ ಭಾರತ, ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 174 ರನ್ ಕಲೆಹಾಕಿತ್ತು. ನಾಯಕ ವಿರಾಟ್ ಕೊಹ್ಲಿ 59 ರನ್ ಬಾರಿಸಿ ಹಾಗೂ ಅಜಿಂಕ್ಯಾ ರಹಾನೆ 23 ರನ್ ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. 68 ರನ್​ಗಳ ಮುನ್ನಡೆ ಸಾಧಿಸಿತ್ತು.ಅದರಂತೆ ಇಂದು ಬ್ಯಾಟಿಂಗ್ ಆರಂಭಿಸಿದ ಭಾರತ ದೊಡ್ಡ ಮೊತ್ತ ಕಲೆಹಾಕುವತ್ತ ಚಿತ್ತ ನೆಟ್ಟಿತ್ತು. ಆದರೆ, ಅರ್ಧಶತಕ ಬಾರಿಸಿ ರಹಾನೆ ನಿರ್ಗಮಿಸಿದ್ದು ಭಾರತಕ್ಕೆ ಕೊಂಚ ಹಿನ್ನಡೆಯಾಯಿತು. 69 ಎಸೆತಗಳಲ್ಲಿ 51 ರನ್ ಬಾರಿಸಿ ರಹಾನೆ ಔಟ್ ಆದರು.

IND vs BAN: 2ನೇ ಟೆಸ್ಟ್ ನಡುವೆ ಪಂತ್ ಭಾರತ ತಂಡದಿಂದಲೇ ಔಟ್; ಕಾರಣವೇನು ಗೊತ್ತಾ?

ಬಳಿಕ ರವೀಂದ್ರ ಜಡೇಜಾ ಜೊತೆಗೂಡಿ ಕೊಹ್ಲಿ ಅತ್ಯುತ್ತಮ ರನ್ ಕಲೆಹಾಕಿದರು. ಈ ನಡುವೆ ಕೊಹ್ಲಿ ಅಮೋಘ ಶತಕ ಬಾರಿಸಿ ಮಿಂಚಿದರು. 159 ಎಸೆತಗಳಲ್ಲಿ 12 ಬೌಂಡರಿಯೊಂದಿಗೆ ಕೊಹ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ 27ನೇ ಶತಕ ಪೂರೈಸಿದರು.

 



ಊಟದ ವಿರಾಮದ ಬಳಿಕ ಬ್ಯಾಟಿಂಗ್​ಗೆ ಇಳಿದ ಈ ಜೋಡಿ ಪೈಕಿ 12 ರನ್ ಗಳಿಸಿ ಜಡೇಜಾ ಬೌಲ್ಡ್​ ಆದರು. ಬಳಿಕ ಒಂದಿಷ್ಟು ರನ್ ಕಲೆಹಾಕಿದ ಕೊಹ್ಲಿ ಕೂಡ 136 ರನ್​ಗೆ ತಮ್ಮ ಇನ್ನಿಂಗ್ಸ್​ ಕೊನೆಗೊಳಿಸಿದರು. 194 ಎಸೆತಗಳಲ್ಲಿ 18 ಬೌಂಡರಿ ಬಾರಿಸಿ 136 ರನ್ ಗಳಿಸಿ ಕೊಹ್ಲಿ ಅವರು ತೈಜುಲ್ ಇಸ್ಮಾಂ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು.

ತನ್ನ ಬಾಲ್​ಗೆ ಕೊಹ್ಲಿ ಬೌಂಡರಿ ಬಾರಿಸಿದಾಗ ಬಾಂಗ್ಲಾ ಬೌಲರ್ ಮಾಡಿದ್ದೇನು ಗೊತ್ತಾ..?

ಬಳಿಕ ಬಂದ ಬ್ಯಾಟ್ಸ್​ಮನ್​ಗಳು ಬಂದ ಬೆನ್ನಲ್ಲೆ ಹಿಂತಿರುಗಿದರು. ಆರ್ ಅಶ್ವಿನ್ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದೆ 9 ರನ್ ಗಳಿಸಿರುವಾಗ ಎಲ್​ಬಿಗೆ ಬಲಿಯಾದರೆ, ಉಮೇಶ್ ಯಾದವ್ ಹಾಗೂ ಇಶಾಂತ್ ಶರ್ಮಾ ಸೊನ್ನೆ ಸುತ್ತಿದರು.

ಬಳಿಕ ಕೊಂಚಹೊತ್ತು ಮೊಹಮ್ಮದ್ ಶಮಿ(10*) ವೃದ್ದಿಮನ್ ಸಾಹ(17*) ಬ್ಯಾಟ್ ಬೀಸಿದರು. ಅಂತಿಮವಾಗಿ ಭಾರತ 89.4 ಓವರ್​ನಲ್ಲಿ 347 ರನ್​ಗೆ 9 ವಿಕೆಟ್ ಕಳೆದುಕೊಂಡಿರುವಾಗ ಡಿಕ್ಲೇರ್ ಮಾಡಿಕೊಂಡಿತು. ಕೊಹ್ಲಿ ಪಡೆ 241 ರನ್​ಗಳ ಮುನ್ನಡೆ ಸಾಧಿಸಿದೆ.
First published:November 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading