IND vs BAN: ಬಾಂಗ್ಲಾ ಬೌಲರ್​ಗಳ ಬೆಂಡೆತ್ತಿದ ಹಿಟ್​​ಮ್ಯಾನ್​​; ಭಾರತಕ್ಕೆ 8 ವಿಕೆಟ್​ಗಳ ಅಮೋಘ ಜಯ

India vs Bangladesh: ರೋಹಿತ್ ಸ್ಪೋಟಕ ಆಟ ಅಂತ್ಯಕಂಡಿದ್ದು 85 ರನ್​ಗಳಿಗೆ. ಶತಕ ಬಾರಿಸುವಲ್ಲಿ ವಿಫಲವಾದ ಹಿಟ್​ಮ್ಯಾನ್​​ 43 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ಸಿಡಿಸಿ 85 ರನ್ ಚಚ್ಚಿದರು.

Vinay Bhat | news18-kannada
Updated:November 8, 2019, 8:40 AM IST
IND vs BAN: ಬಾಂಗ್ಲಾ ಬೌಲರ್​ಗಳ ಬೆಂಡೆತ್ತಿದ ಹಿಟ್​​ಮ್ಯಾನ್​​; ಭಾರತಕ್ಕೆ 8 ವಿಕೆಟ್​ಗಳ ಅಮೋಘ ಜಯ
ರೋಹಿತ್ ಶರ್ಮಾ ಬ್ಯಾಟಿಂಗ್ ವೈಖರಿ
Vinay Bhat | news18-kannada
Updated: November 8, 2019, 8:40 AM IST
ಬೆಂಗಳೂರು (. 07): ರಾಜ್ಕೋಟ್ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ನಾಯಕ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 8 ವಿಕೆಟ್​ಗಳಿಂದ ಗೆದ್ದು ಬೀಗಿದ್ದು ಸರಣಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಬಾಂಗ್ಲಾದೇಶ ನೀಡಿದ್ದ 154 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಟೀಂ ಇಂಡಿಯಾ ಅಮೋಘ ಆರಂಭ ಪಡೆದುಕೊಂಡಿತು. ಓಪನರ್ ರೋಹಿತ್ ಶರ್ಮಾ ಮೊದಲ ಓವರ್​ನಿಂದಲೇ ಆರ್ಭಟಿಸಲು ಶುರು ಮಾಡಿದರು. ಇವರಿಗೆ ಶಿಖರ್ ಧವನ್ ಉತ್ತಮರೀತಿಯಲ್ಲಿ ಸಾತ್ ನೀಡಿದರು.

ಬಾಂಗ್ಲಾ ಬೌಲರ್​ಗಳ ಬೆಂಡೆತ್ತಿದ ರೋಹಿತ್ ಶರ್ಮಾ ಬೌಂಡರಿ- ಸಿಕ್ಸರ್​ಗಳ ಮಳೆ ಸುರಿಸಿದರು. 10ನೇ ಓವರ್​​ ಮೊಸದ್ದಿಕ್ ಬೌಲಿಂಗ್​ನಲ್ಲಿ ಹ್ಯಾಟ್ರಿಕ್ ಸಿಕ್ಸ್​ ಸಿಡಿಸಿದರು. 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಹಿಟ್​​ಮ್ಯಾನ್​​ ಆಟ ತಡೆಯಲು ಬಾಂಗ್ಲಾ ಬೌಲರ್​ಗಳಿಗೆ ಸಾಧ್ಯವಾಗಲೇ ಇಲ್ಲ. 118 ರನ್​ಗಳ ಅತ್ಯುತ್ತಮ ಜೊತೆಯಾಟ ಆಡಿದ ಈ ಜೋಡಿಯಲ್ಲಿ ಧವನ್ ಗಳಿಸಿದ್ದು 31 ರನ್​ಗಳನ್ನಷ್ಟೆ.

ಪಂತ್ ಮಹಾ ಎಡವಟ್ಟು; ವಿಕೆಟ್ ಮುಂದೆ ಬಾಲ್ ಹಿಡಿದು ಸ್ಟಂಪ್​ಔಟ್​​; ನೋ ಬಾಲ್ ಎಂದ ಅಂಪೈರ್

 



ರೋಹಿತ್ ಸ್ಪೋಟಕ ಆಟ ಅಂತ್ಯಕಂಡಿದ್ದು 85 ರನ್​ಗಳಿಗೆ. ಶತಕ ಬಾರಿಸುವಲ್ಲಿ ವಿಫಲವಾದ ಹಿಟ್​ಮ್ಯಾನ್​​ 43 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ಸಿಡಿಸಿ 85 ರನ್ ಚಚ್ಚಿದರು. ಬಳಿಕ ಕೆ ಎಲ್ ರಾಹುಲ್(8*) ಹಾಗೂ ಶ್ರೇಯಸ್ ಐಯರ್(24*) ಜೊತೆಗೂಡಿ ಭಾರತದ ಗೆಲುವನ್ನ ಮತ್ತಷ್ಟು ಸನಿಹ ಮಾಡಿದರು.

ಅಂತಿಮವಾಗಿ ಭಾರತ ಕೇವಲ 15.4 ಓವರ್​ನಲ್ಲೇ 2 ವಿಕೆಟ್ ಕಳೆದುಕೊಂಡು 154 ರನ್ ಬಾರಿಸುವ ಮೂಲಕ ಗೆಲುವಿನ ನಗೆಬೀರಿತು. 8 ವಿಕೆಟ್​ಗಳ ಜಯದೊಂದಿಗೆ ರೋಹಿತ್ ಪಡೆ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಆರ್ಭಟಿಸಿದ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು. ಮುಂದಿನ ಪಂದ್ಯ ಭಾನುವಾರ ನಾಗ್ಪುರದಲ್ಲಿ ನಡೆಯಲಿದೆ.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಬಾಂಗ್ಲಾದೇಶ ಉತ್ತಮ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಮೊಹಮ್ಮದ್ ನೈಮ್ ಹಾಗೂ ಲಿಟನ್ ದಾಸ್ ಬೌಂಡರಿಗಳ ಮಳೆ ಸುರಿಸಿದರು. ಪವರ್ ಪ್ಲೇ ಓವರ್​ ಅನ್ನು ಉತ್ತಮವಾಗಿ ಉಪಯೋಗಿಸಿಕೊಂಡ ಇವರಿಬ್ಬರು ಸ್ಫೋಟಕ ಬ್ಯಾಟಿಂಗ್ ನಡೆಸಿದರು.

(VIDEO): ಸುದ್ದಿಗೋಷ್ಠಿಯಲ್ಲಿ ರೊಚ್ಚಿಗೆದ್ದ ರೋಹಿತ್ ಶರ್ಮಾ; ಅಷ್ಟಕ್ಕು ಆಗಿದ್ದೇನು ಗೊತ್ತಾ?

ಮೊದಲ ವಿಕೆಟ್​​ಗೆ ಈ ಜೋಡಿ 60 ರನ್​ಗಳ ಕಾಣಿಕೆ ನೀಡಿತು. ಚೆನ್ನಾಗಿಯೆ ಆಡುತ್ತಿದ್ದ ಲಿಟನ್ ದಾಸ್ 30 ರನ್ ಗಳಿಸಿರುವಾಗ ರನೌಟ್​ಗೆ ಬಲಿಯಾಗಬೇಕಾಯಿತು. ಇದರ ಬೆನ್ನಲ್ಲೆ ನೈಮ್(36) ಕೂಡ ನಿರ್ಗಮಿಸಿದರು. ಈ ಸಂದರ್ಭ ಸೌಮ್ಯ ಸರ್ಕಾರ್ ಬಿರುಸಿನ ಆಟ ಪ್ರದರ್ಶಿಸಿದರು.

12 ಓವರ್ ಆಗುವ ಹೊತ್ತಿಗೆನೆ ಬಾಂಗ್ಲಾ ತಂಡದ ಮೊತ್ತ 100ರ ಅಂಚಿಗೆ ಬಂದು ನಿಂತಿತು. ಆದರೆ, ಈ ಸಂದರ್ಭ ಚಹಾಲ್ ಸ್ಪಿನ್ ಮೋಡಿಗೆ ಸರ್ಕಾರ್ 30 ರನ್​​ ಗಳಿಸಿ ಔಟ್ ಆದರೆ, ಕಳೆದ ಪಂದ್ಯದಲ್ಲಿ ಮಿಂಚಿದ್ದ ಮುಷ್ಫೀಕರ್ ರಹೀಮ್ ಕೇವಲ 4 ರನ್​ಗೆ ಸುಸ್ತಾದರು.

ಆದರೆ, ಬಳಿಕ ಬಂದ ಬ್ಯಾಟ್ಸ್​ಮನ್​​ಗಳು ಯಾರು ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಮೊಹಮ್ಮದುಲ್ಲ 30 ರನ್ ಗಳಿಸಿದರಷ್ಟೆ. ಅಂತಿಮವಾಗಿ ಬಾಂಗ್ಲಾದೇಶ 20 ಓವರ್​ಗೆ 6 ವಿಕೆಟ್ ಕಳೆದುಕೊಂಡು 153 ರನ್ ಕಲೆಹಾಕಿತು. ಭಾರತ ಪರ ಯಜುವೇಂದ್ರ ಚಹಾಲ್ 2 ವಿಕೆಟ್ ಕಿತ್ತರೆ, ದೀಪಕ್ ಚಹಾರ್, ಖಲೀಲ್ ಹಾಗೂ ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಪಡೆದರು.

 

First published:November 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...