ಭಾರತ- ಬಾಂಗ್ಲಾ ಪಂದ್ಯಕ್ಕೆ ಮಹಾ ಭೀತಿ; ಪಂದ್ಯ ನಡೆಯುತ್ತಾ-ಇಲ್ಲಾ?; ಹವಾಮಾನ ಇಲಾಖೆ ಏನನ್ನುತ್ತೆ?

ಮಹಾ ಚಂಡಮಾರುತ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿ ಅಪ್ಪಳಿಸುತ್ತಿರುವ ಚಂಡಮಾರುತವಾಗಿದೆ. ನವೆಂಬರ್ 6ರ ಮಧ್ಯರಾತ್ರಿ ಗುಜರಾತ್​ ಕರಾವಳಿಯತ್ತ ಸಾಗಿ ಬಳಿಕ ದಿಯು ಮತ್ತು ದ್ವಾರಕಗೆ ಪ್ರವೇಶಿಸಲಿದೆ. ನ.7ರಂದು ಕೂಡ ಮಹಾ ಅಬ್ಬರ ಇರಲಿದೆ. ಬಳಿಕ ಮಹಾ ತೀವ್ರತೆ ದುರ್ಬಲಗೊಳ್ಳಲಿದೆ.

Vinay Bhat | news18-kannada
Updated:November 7, 2019, 4:19 PM IST
ಭಾರತ- ಬಾಂಗ್ಲಾ ಪಂದ್ಯಕ್ಕೆ ಮಹಾ ಭೀತಿ; ಪಂದ್ಯ ನಡೆಯುತ್ತಾ-ಇಲ್ಲಾ?; ಹವಾಮಾನ ಇಲಾಖೆ ಏನನ್ನುತ್ತೆ?
ರಾಜ್ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ
Vinay Bhat | news18-kannada
Updated: November 7, 2019, 4:19 PM IST
ಬೆಂಗಳೂರು (ನ. 07): ದೆಹಲಿ ದಟ್ಟ ವಾಯುಮಾಲಿನ್ಯದಿಂದ ಕೂಡಿದ್ದರು ಬಿಸಿಸಿಐ ಭಾರತ- ಬಾಂಗ್ಲಾದೇಶ ನಡುವಣ ಮೊದಲ ಟಿ-20 ಪಂದ್ಯವನ್ನು ಸ್ಥಳಾಂತರ ಮಾಡಿದೆ ಅಲ್ಲೇ ನಡೆಸಿತ್ತು. ಭಾರತ ಸೋಲುಂಡಿತ್ತು. ಸದ್ಯ ಎರಡನೇ ಪಂದ್ಯಕ್ಕೆ ಮಹಾ ಚಂಡಮಾರುತ ಎದುರಾಗಿದ್ದಾನೆ.

ಇಂದು ಸಂಜೆ 7 ಗಂಟೆಗೆ ರಾಜ್ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಪಂದ್ಯ ಆರಂಭವಾಗುವುದು ಅನುಮಾನ ಎನ್ನಲಾಗುತ್ತಿದೆ. ಈಗಾಗಲೇ 'ಮಹಾ' ಚಂಡಮಾರುತ ಗುಜರಾತ್​ಗೆ ಪ್ರವೇಶ ಮಾಡಿದ್ದು, ಪಂದ್ಯಕ್ಕೆ ವರುಣ ಅಡ್ಡಿಪಡಿಸುವ ಸಾಧ್ಯತೆ ದಟ್ಟವಾಗಿದೆ.

 Loading...

ಕಮ್​ಬ್ಯಾಕ್ ಪಂದ್ಯದಲ್ಲಿ ಮಂದಾನ ದಾಖಲೆ; ವಿಂಡೀಸ್ ವಿರುದ್ಧದ ಏಕದಿನ ಸರಣಿ ಭಾರತದ ಪಾಲು

ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಜೋರು ಗಾಳಿ- ಮಳೆಯಾಗಲಿದೆ ಎಂದು ಹೇಳಿರುವ ಹವಾಮಾನ ಇಲಾಖೆ, ಬಳಿಕ ತುಂತು ಮಳೆ ಸುರಿಯಲಿದೆಯಂತೆ. ಸಂಜೆ 7 ಗಂಟೆಗೆ ಹೊತ್ತಿಗೆ ಮಳೆ ನಿಂತರೆ ಪಂದ್ಯ ಆರಂಭವಾಗಬಹುದು.

ಇಂದಿನ ಪಂದ್ಯ ಉಭಯ ತಂಡಗಳಿಗೆ ಮುಖ್ಯವಾಗಿದೆ. ಭಾರತ ಗೆದ್ದರೆ ಸರಣಿ ಸಮಬಲವಾಗಲಿದೆ. ಎಲ್ಲಾದರು ಬಾಂಗ್ಲಾ ಜಯ ಸಾಧಿಸಿದರೆ ಸರಣಿ ವಶಪಡಿಸಿಕೊಳ್ಳಲಿದೆ. ಹೀಗಾಗಿ ರೋಹಿತ್ ಪಡೆ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಿ ಬಲಿಷ್ಠ ತಂಡವನ್ನೇ ಕಣಕ್ಕಿಳಿಸುವ ಅಂದಾಜಿನಲ್ಲಿದೆ.

ಮಹಾ ಚಂಡಮಾರುತ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿ ಅಪ್ಪಳಿಸುತ್ತಿರುವ ಚಂಡಮಾರುತವಾಗಿದೆ. ನವೆಂಬರ್ 6ರ ಮಧ್ಯರಾತ್ರಿ ಗುಜರಾತ್​ ಕರಾವಳಿಯತ್ತ ಸಾಗಿ ಬಳಿಕ ದಿಯು ಮತ್ತು ದ್ವಾರಕಗೆ ಪ್ರವೇಶಿಸಲಿದೆ. ನ.7ರಂದು ಕೂಡ ಮಹಾ ಅಬ್ಬರ ಇರಲಿದೆ. ಬಳಿಕ ಮಹಾ ತೀವ್ರತೆ ದುರ್ಬಲಗೊಳ್ಳಲಿದೆ.

 IND vs BAN: 2ನೇ ಟಿ-20 ಪಂದ್ಯಕ್ಕೆ ಮಹತ್ವದ ಬದಲಾವಣೆ; ಹಿಂಟ್ ಕೊಟ್ಟ ಹಿಟ್​ಮ್ಯಾನ್; ಯಾರಿಗೆ ಚಾನ್ಸ್?

ಗುಜರಾತ್​ ಕರಾವಳಿಯಲ್ಲಿ ನ.6 ಮತ್ತು 7ರಂದು ಗಾಳಿಯು ಗಂಟೆಗೆ 100-120 ಕಿ.ಮೀ ವೇಗದಲ್ಲಿ ಬೀಸಲಿದೆ. ಸೌರಾಷ್ಟ್ರ ಮತ್ತು ಗುಜರಾತ್​ ಕರಾವಳಿ ಪ್ರದೇಶಗಳಲ್ಲಿ ಅಧಿಕ ಮಳೆಯಾಗಲಿದೆ. ಮಧ್ಯಪ್ರದೇಶ ಮತ್ತು ಕೊಂಕಣ ಪ್ರದೇಶಗಳಲ್ಲೂ ಭಾರೀ ಮಳೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

First published:November 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...