IND vs BAN: 2ನೇ ಟಿ-20 ಪಂದ್ಯದಲ್ಲಿ ಸೃಷ್ಟಿಯಾಗಲಿದೆ ಒಂದಲ್ಲಾ ಎರಡಲ್ಲಾ ಬರೋಬ್ಬರಿ 9 ದಾಖಲೆಗಳು!

ರೋಹಿತ್ ಶರ್ಮಾ 72 ರನ್ ಗಳಿಸಿದ್ದೇ ಆದಲ್ಲಿ ಟಿ-20 ಕ್ರಿಕೆಟ್​ನಲ್ಲಿ ಗರಿಷ್ಠ ರನ್ ಪೂರೈಸಿದ ಭಾರತದ ಎರಡನೇ ಆಟಗಾರ ಆಗಲಿದ್ದಾರೆ. ಸದ್ಯ ಕೊಹ್ಲಿ 8556 ರನ್ ಬಾರಿಸಿ ಮೊದಲ ಸ್ಥಾನದಲ್ಲಿದ್ದರೆ, ಸುರೇಶ್ ರೈನಾ 8392 ರನ್ ಕಲೆಹಾಕಿ ಎರಡನೇ ಸ್ಥಾನದಲ್ಲಿದ್ದಾರೆ.

Vinay Bhat | news18-kannada
Updated:November 6, 2019, 12:59 PM IST
IND vs BAN: 2ನೇ ಟಿ-20 ಪಂದ್ಯದಲ್ಲಿ ಸೃಷ್ಟಿಯಾಗಲಿದೆ ಒಂದಲ್ಲಾ ಎರಡಲ್ಲಾ ಬರೋಬ್ಬರಿ 9 ದಾಖಲೆಗಳು!
ಭಾರತ vs ಬಾಂಗ್ಲಾದೇಶ
  • Share this:
ಬೆಂಗಳೂರು (ನ. 06): ಬಾಂಗ್ಲಾದೇಶ ವಿರುದ್ಧ ಮೊದಲ ಟಿ-20 ಸೋತ ಬೆನ್ನಲ್ಲೆ ಬಹಳಷ್ಟು ಟೇಕೆಗಳಿಗೆ ಗುರಿಯಾಗಿರುವ ಟೀಂ ಇಂಡಿಯಾ ಸದ್ಯ ಕಮ್​ಬ್ಯಾಕ್ ಮಾಡಬೇಕಾದ ಒತ್ತಡದಲ್ಲಿದೆ. ಅಲ್ಲದೆ ಎಲ್ಲಾದರು ಎರಡನೇ ಟಿ-20 ಪಂದ್ಯ ಸೋತರೆ ಸರಣಿಯಲ್ಲಿ ಕೈಚೆಲ್ಲಲಿದೆ. ಹೀಗಾಗಿ ರೋಹಿತ್ ಪಡೆಗೆ ಇದು ಮುಖ್ಯ ಪಂದ್ಯ.

ವಿಶೇಷ ಎಂದರೆ ಎರಡನೇ ಟಿ-20 ಪಂದ್ಯ ಅನೇಕ ದಾಖಲೆಗಳಿಗೆ ಸಾಕ್ಷಿಯಾಗಲಿದೆ. ಅಂದುಕೊಂಡಂತೆ ನಡೆದರೆ ರಾಜ್ಕೋಟ್ ಪಂದ್ಯದಲ್ಲಿ ಒಂದಲ್ಲಾ ಎರಡಲ್ಲಾ 9 ದಾಖಲೆಗಳು ಸೃಷ್ಟಿಯಾಗಲಿದೆ. ಅವುಗಳು ಯಾವುದೆಲ್ಲ ಎಂಬುವುದನ್ನು ನೋಡುವುದಾದರೆ…

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ನಾಳಿನ ಪಂದ್ಯದಲ್ಲಿ ಕಣಕ್ಕಿಳಿದರೆ 100ನೇ ಅಂತರಾಷ್ಟ್ರೀಯ ಟಿ-20 ಪಂದ್ಯ ಆಡಿದ್ದಂತಾಗುತ್ತದೆ. ಅಲ್ಲದೆ ಶೋಯೆಬ್ ಮಲಿಕ್ ಬಳಿಕ ಗರಿಷ್ಠ ಅಂತರಾಷ್ಟ್ರೀಯ ಟಿ-20 ಪಂದ್ಯವನ್ನಾಡಿದ ವಿಶ್ವದ ಎರಡನೇ ಆಟಗಾರ ಹಿಟ್​ಮ್ಯಾನ್ ಆಗಲಿದ್ದಾರೆ.

IND vs BAN: ನಾಳೆ ಎರಡನೇ ಟಿ-20; ಟೀಂ ಇಂಡಿಯಾದಲ್ಲಿ ಮೂರು ಪ್ರಮುಖ ಬದಲಾವಣೆ..?

ಶ್ರೇಯಸ್ ಐಯರ್ ಕೇವಲ 10 ರನ್ ಕಲೆಹಾಕಿದರೆ 2019ರ ಒಟ್ಟು ಟಿ-20 ಪಂದ್ಯದಲ್ಲಿ 1 ಸಾವಿರ ರನ್ ಕಲೆಹಾಕಿದ ಭಾರತದ ಪ್ರಥಮ ಬ್ಯಾಟ್ಸ್​​ಮನ್​ ಆಗಲಿದ್ದಾರೆ

ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ ಒಂದು ಕ್ಯಾಚ್ ಪಡೆದರೆ ಟಿ-20 ಕ್ರಿಕೆಟ್​ನಲ್ಲಿ 50 ಕ್ಯಾಚ್ ಪೂರೈಸಲಿದ್ದಾರೆ

ವಾಷಿಂಗ್ಟನ್ ಸುಂದರ್ 2ನೇ ಟಿ-20 ಪಂದ್ಯದಲ್ಲಿ ಆಡಿದ್ದೇ ಆದಲ್ಲಿ ಇದು ಅವರ 50ನೇ ಟಿ-20 ಪಂದ್ಯ ಆಗಲಿದೆಬಾಂಗ್ಲಾದೇಶ ತಂಡದ ಮೊಸದ್ದೆಕ್ ಹೊಸೈನ್ 53 ರನ್ ಗಳಿಸಿದರೆ 1 ಸಾವಿರ ಟಿ-20 ರನ್ ದಾಖಲಸಲಿದ್ದಾರೆ

ಬಾಂಗ್ಲಾ ತಂಡದ ಮೊಹಮ್ಮದುಲ್ಲ ಇನ್ನು 2 ಸಿಕ್ಸರ್ ಸಿಡಿಸಿದರೆ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ 50 ಸಿಕ್ಸ್ ದಾಖಲಿಸದಂತಾಗುತ್ತಿದೆ. ಅಲ್ಲದೆ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ 50 ಸಿಕ್ಸರ್ ಸಿಡಿಸಿದ ಏಕೈಕ ಬಾಂಗ್ಲಾದೇಶ ಆಟಗಾರ ಮೊಹಮ್ಮದುಲ್ಲ ಆಗಲಿದ್ದಾರೆ.

IND vs BAN: ರಾಜ್ಕೋಟ್​ಗೆ ಬಂದಿಳಿದ ಬಾಂಗ್ಲಾ ಆಟಗಾರರು; ರೋಹಿತ್ ಪಡೆಯಿಂದ ಭರ್ಜರಿ ಅಭ್ಯಾಸ

ರೋಹಿತ್ ಶರ್ಮಾ 72 ರನ್ ಗಳಿಸಿದ್ದೇ ಆದಲ್ಲಿ ಟಿ-20 ಕ್ರಿಕೆಟ್​ನಲ್ಲಿ ಗರಿಷ್ಠ ರನ್ ಪೂರೈಸಿದ ಭಾರತದ ಎರಡನೇ ಆಟಗಾರ ಆಗಲಿದ್ದಾರೆ. ಸದ್ಯ ಕೊಹ್ಲಿ 8556 ರನ್ ಬಾರಿಸಿ ಮೊದಲ ಸ್ಥಾನದಲ್ಲಿದ್ದರೆ, ಸುರೇಶ್ ರೈನಾ 8392 ರನ್ ಕಲೆಹಾಕಿ ಎರಡನೇ ಸ್ಥಾನದಲ್ಲಿದ್ದಾರೆ.

ಟೀಂ ಇಂಡಿಯಾ ಪ್ರಮುಖ ಸ್ಪಿನ್ನರ್ ಯಜುವೇಂದ್ರ ಚಹಾಲ್ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​​ನಲ್ಲಿ ಇನ್ನು 4 ವಿಕೆಟ್ ಕಿತ್ತರೆ 50 ವಿಕೆಟ್ ಪಡೆದ ಭಾರತದ ಮೂರನೇ ಆಟಗಾರ ಆಗಲಿದ್ದಾರೆ. ಮೊದಲನೆಯವರಾಗಿ ಆರ್ ಅಶ್ವಿನ್ ಇದ್ದರೆ, 2ನೇ ಸ್ಥಾನದಲ್ಲಿ ಜಸ್​ಪ್ರೀತ್ ಬುಮ್ರಾ ಈ ಸಾಧನೆ ಮಾಡಿದ್ದಾರೆ.

ಕೆ ಎಲ್ ರಾಹುಲ್ 86 ರನ್ ಗಳಿಸಿದರೆ ಟಿ-20 ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 1 ಸಾವಿರ ರನ್ ಪೂರೈಸಲಿದ್ದಾರೆ. ಈ ಸಾಧನೆ ಮಾಡಿದ ಭಾರತದ 7ನೇ ಆಟಗಾರ ರಾಹುಲ್ ಆಗಲಿದ್ದಾರೆ.

First published:November 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading