IND vs BAN: ಬಾಂಗ್ಲಾದೇಶ ಆಟಗಾರರ ಮುಷ್ಕರ; ಭಾರತ ವಿರುದ್ಧದ ಸರಣಿ ರದ್ದು ಸಾಧ್ಯತೆ?

ಬಾಂಗ್ಲಾದೇಶ ತಂಡ ನವಂಬರ್‌ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದೆ. ಇದಕ್ಕೂ ಮುನ್ನ ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ ಆಟಗಾರರ ಸಮಸ್ಯೆ ಬಗೆಹರಿಸದೆ ಇದ್ದಲ್ಲಿ ಭಾರತ-ಬಾಂಗ್ಲಾ ಟೂರ್ನಿ ನಡೆಯವುದು ಅನುಮಾನ.

Vinay Bhat | news18-kannada
Updated:October 22, 2019, 10:14 AM IST
IND vs BAN: ಬಾಂಗ್ಲಾದೇಶ ಆಟಗಾರರ ಮುಷ್ಕರ; ಭಾರತ ವಿರುದ್ಧದ ಸರಣಿ ರದ್ದು ಸಾಧ್ಯತೆ?
ಶಕಿಬ್ ಅಲ್ ಹಸನ್ ಹಾಗೂ ವಿರಾಟ್ ಕೊಹ್ಲಿ
Vinay Bhat | news18-kannada
Updated: October 22, 2019, 10:14 AM IST
ಬೆಂಗಳೂರು (ಅ. 22): ಮುಂದಿನ ತಿಂಗಳು ಭಾರತ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ಮೂರು ಪಂದ್ಯಗಳ ಟಿ-20 ಹಾಗೂ ಎರಡು ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ನವಂಬರ್ 3 ರಂದು ಮೊದಲ ಟಿ-20 ಪಂದ್ಯ ಆಯೋಜಿಸಲಾಗಿದೆ. ಆದರೆ, ಬಾಂಗ್ಲಾದೇಶ ಕ್ರಿಕೆಟ್ ತಂಡ ಭಾರತ ಪ್ರವಾಸ ಕೈಗೊಳ್ಳುವುದು ಅನುಮಾನ ಎಂದು ಹೇಳಲಾಗುತ್ತಿದೆ.

ಇದಕ್ಕೆ ಕಾರಣ ಬಾಂಗ್ಲಾ ಆಟಗಾರರು ತಮ್ಮ ಬೇಡಿಕೆ ಈಡೇರಿಸುವ ಮುನ್ನ ಯಾವುದೇ ಕ್ರಿಕೆಟ್ ಸರಣಿ ಆಡಲು ಮೈದಾನಕ್ಕಿಳಿಯುವುದಿಲ್ಲ ಎಂದಿರುವುದು. ಶಕಿಬ್ ಅಲ್ ಹಸನ್ ಪಡೆಯಿಂದ ಮುಷ್ಕರ ಶುರುವಾಗಿದೆ.

ದಿಢೀರ್ ಸುದ್ದಿಗೋಷ್ಠಿ ನಡೆಸಿದ ಬಾಂಗ್ಲಾದೇಶದ ಆಟಗಾರರು ನಮ್ಮ 11 ಅಂಶಗಳ ಬೇಡಿಕೆ ಈಡೇರುವ ತನಕ ಕ್ರಿಕೆಟ್ ಆಡುವುದಿಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (ಬಿಸಿಬಿ) ವಿರುದ್ಧ ಅಸಮಧಾನ ಹೊರಹಾಕಿದ್ದಾರೆ. ವೇತನ ನೀಡುವ ಪದ್ಧತಿಯಲ್ಲಿ ಬದಲಾವಣೆ ಆಗಬೇಕು ಎಂಬ ವಿಚಾರವನ್ನು ಮುಂದಿಟ್ಟು ಮುಷ್ಕರಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

IND vs SA: ದೀಪಾವಳಿಗೆ ಗೆಲುವಿನ ಉಡುಗೊರೆ; ಸರಣಿ ಕ್ಲೀನ್​ಸ್ವೀಪ್ ಮಾಡಿದ ಟೀಂ ಇಂಡಿಯಾ

ಬಾಂಗ್ಲಾದೇಶ ತಂಡ ನವಂಬರ್‌ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದೆ. 3 ಪಂದ್ಯಗಳ ಟಿ-20 ಸರಣಿ ಮತ್ತು 2 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲಿದೆ. ಹೀಗಾಗಿ ಇದಕ್ಕೂ ಮುನ್ನ ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ ಆಟಗಾರರ ಸಮಸ್ಯೆ ಬಗೆಹರಿಸದೆ ಇದ್ದಲ್ಲಿ ಭಾರತ-ಬಾಂಗ್ಲಾ ಟೂರ್ನಿ ನಡೆಯವುದು ಅನುಮಾನ.

ಕೊಹ್ಲಿ-ರೋಹಿತ್ ನಡುವೆ ಎಲ್ಲವು ಸರಿಯಿಲ್ಲ ಎಂಬವರು ಒಮ್ಮೆ ಈ ವಿಡಿಯೋ ನೋಡಿ!

ಗಂಗೂಲಿ ಬರವಸೆ:
Loading...

ಈ ನಡುವೆ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಚುನಾಯಿತರಾಗಿರುವ ಸೌರವ್ ಗಂಗೂಲಿ ಬಾಂಗ್ಲಾದೇಶ ಆಟಗಾರರು ಭಾರತಕ್ಕೆ ಬಂದು ಕ್ರಿಕೆಟ್ ಆಡುತ್ತಾರೆ ಎಂದು ವಿಶ್ವಾದ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾ ಈ ಎಲ್ಲ ಸಮಸ್ಯೆಯನ್ನು ಬಗೆಹರಿಸಿಕೊಂಡು ಭಾರತಕ್ಕೆ ಬರುತ್ತಾರೆ. ಕ್ರಿಕೆಟಿಗರ ಬೇಡಿಕೆ, ಅವರ ವಿಚಾರ ನನ್ನ ಅಡಿಯಲ್ಲಿ ಬರುವುದಿಲ್ಲ. ಈ ಬಗ್ಗೆ ನಾನು ಬಾಂಗ್ಲಾ ಕ್ರಿಕೆಟ್​ ಬೋರ್ಡ್​ ಜೊತೆ ಮಾತನಾಡುತ್ತೇನೆ ಎಂದು ಗಂಗೂಲಿ ತಿಳಿಸಿದ್ದಾರೆ.

First published:October 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...