IND vs BAN: ಧೋನಿ-ಕೊಹ್ಲಿ ಅಲ್ಲ; ಬಾಂಗ್ಲಾ ಸರಣಿಗೆ ಇದೇ ಮೊದಲ ಬಾರಿ ಆಯ್ಕೆಯಾಗಿಲ್ಲ ಈ ಆಟಗಾರ

ಬಾಂಗ್ಲಾ ವಿರುದ್ಧ ಟೀಂ ಇಂಡಿಯಾ ಈವರೆಗೆ ಒಟ್ಟು 8 ಟಿ-20 ಪಂದ್ಯಗಳನ್ನು ಆಡಿದೆ. ಈ ಎಲ್ಲಾ ಪಂದ್ಯಗಳಲ್ಲಿ ರೈನಾ ಆಡಿದ್ದರು. ಆದರೆ, ಇದೇ ಮೊದಲ ಬಾರಿ ಇವರ ಅನುಪಸ್ಥಿತಿಯಲ್ಲಿ ಭಾರತ ಟಿ-20 ಪಂದ್ಯ ಆಡುತ್ತಿದೆ.

Vinay Bhat | news18-kannada
Updated:October 25, 2019, 11:25 AM IST
IND vs BAN: ಧೋನಿ-ಕೊಹ್ಲಿ ಅಲ್ಲ; ಬಾಂಗ್ಲಾ ಸರಣಿಗೆ ಇದೇ ಮೊದಲ ಬಾರಿ ಆಯ್ಕೆಯಾಗಿಲ್ಲ ಈ ಆಟಗಾರ
ಅಂಪೈರ್ ಮ್ಯಾಚ್ ಕಾಲ್ ಆಫ್ ಮಾಡುವ ಮುನ್ನವೇ ಆಟಗಾರರು ಸ್ಟೇಡಿಯಮ್ನಿಂದ ಹೊರನಡೆದಿರುವುದು, ಅಸ್ಸಾಂ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದೆ.
  • Share this:
ಬೆಂಗಳೂರು (ಅ. 25): ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ-20 ಹಾಗೂ ಎರಡು ಪಂದ್ಯಗಳ ಟೆಸ್ಟ್​ ಸರಣಿಗೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ಅಂದುಕೊಂಡಂತೆ ಟಿ-20 ಪಂದ್ಯಕ್ಕೆ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು ರೋಹಿತ್ ಶರ್ಮಾ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದಾರೆ.

ಕೊಹ್ಲಿ ಜೊತೆ ಮಾಜಿ ನಾಯಕ ಎಂಎಸ್ ಧೋನಿ ಕೂಡ ಆಯ್ಕೆಯಾಗಲಿಲ್ಲ. ಆದರೆ, ಈವರೆಗೆ ಬಾಂಗ್ಲಾದೇಶ ವಿರುದ್ಧದ ಎಲ್ಲಾ ಟಿ-20 ಸರಣಿಗೆ ಆಯ್ಕೆಯಾಗಿದ್ದ ಒಬ್ಬ ಆಟಗಾರ ಈ ಬಾರಿ ಮಾತ್ರ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ.

India vs Bangladesh 2019: For First Time Team India Going to Play T20I vs Bangladesh without Suresh Raina
ಸುರೇಶ್ ರೈನಾ, ಟೀಂ ಇಂಡಿಯಾ ಆಟಗಾರ


IND vs BAN: ಟಿ-20 ಸರಣಿಯಲ್ಲಿ ಸಂಜು ಪಾತ್ರವೇನು?; ಸ್ಪಷ್ಟನೆ ನೀಡಿದ ಆಯ್ಕೆ ಸಮಿತಿ ಅಧ್ಯಕ್ಷ

ಒಂದು ಕಾಲದಲ್ಲಿ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಆಧಾರ ಸ್ತಂಭವಾಗಿದ್ದ ಸುರೇಶ್ ರೈನಾ ಸದ್ಯ ಮೈದಾನಕ್ಕಿಳಿಯದೆ ಸುಮಾರು ಆರು ತಿಂಗಳುಗಳೇ ಕಳೆದಿವೆ. 2019ರ ಐಪಿಎಲ್​ನಲ್ಲಿ ನೀರಸ ಪ್ರದರ್ಶನ ತೋರಿದ ಇವರು ಬಳಿಕ ಮೊಣಕಾಲು ಸರ್ಜರಿಗೆ ತುತ್ತಾದರು. ಕಳಪೆ ಫಾರ್ಮ್​ನಿಂದಾಗಿ ದೇಶೀಯ ಕ್ರಿಕೆಟ್​ನಿಂದಲು ಹೊರ ನಡೆಯಬೇಕಾಯಿತು.

ಸದ್ಯ ಟೀಂ ಇಂಡಿಯಾಕ್ಕೆ ಕಮ್​ಬ್ಯಾಕ್ ಮಾಡಲು ಹರಸಾಹಸ ಪಡುತ್ತಿರುವ ರೈನಾಗೆ ಅವಕಾಶ ಒದಗಿಬರುತ್ತಿಲ್ಲ. ಬ್ಯಾಡ್ ಫಾರ್ಮ್​ನಿಂದಾಗಿ ಇದೇ ಮೊದಲ ಬಾರಿಗೆ ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಯಿಂದ ರೈನಾ ಹೊರಗುಳಿದಿದ್ದಾರೆ.

ಬಾಂಗ್ಲಾ ವಿರುದ್ಧ ಟೀಂ ಇಂಡಿಯಾ ಈವರೆಗೆ ಒಟ್ಟು 8 ಟಿ-20 ಪಂದ್ಯಗಳನ್ನು ಆಡಿದೆ. ಈ ಎಲ್ಲಾ ಪಂದ್ಯಗಳಲ್ಲಿ ರೈನಾ ಆಡಿದ್ದರು. ಆದರೆ, ಇದೇ ಮೊದಲ ಬಾರಿ ಇವರ ಅನುಪಸ್ಥಿತಿಯಲ್ಲಿ ಭಾರತ ಟಿ-20 ಪಂದ್ಯ ಆಡುತ್ತಿದೆ.ಬಾಂಗ್ಲಾ ವಿರುದ್ಧ ಸರಣಿಗೆ ಟೀಂ ಇಂಡಿಯಾ ಪ್ರಕಟ: ಕೊಹ್ಲಿ ಔಟ್, ಕನ್ನಡಿಗರಿಬ್ಬರು ಇನ್

ಇನ್ನು ಗಾಯಗೊಂಡು ವಿಶ್ರಾಂತಿಯಲ್ಲಿರುವ ಹಾರ್ದಿಕ್​ ಪಾಂಡ್ಯ ಸ್ಥಾನಕ್ಕೆ ಶಿವಂ​ ದುಬೆ ಆಯ್ಕೆಯಾಗಿದ್ದಾರೆ. ಸಂಜು ಸ್ಯಾಮ್ಸನ್ ಕೊಹ್ಲಿ ಸ್ಥಾನ ತುಂಬಿದರೆ, ವಿಕೆಟ್ ಕೀಪರ್​ ಆಗಿ ರಿಷಬ್ ಪಂತ್​​ ಅವರನ್ನೇ ತಂಡದಲ್ಲಿ ಮುಂದುವರೆಸಲಾಗಿದೆ.

ಭಾರತ ಟಿ-20​ ತಂಡ:

ರೋಹಿತ್ ಶರ್ಮ(ನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಕ್ರುನಾಲ್ ಪಾಂಡ್ಯ, ಯುಜುವೇಂದ್ರ ಚಹಲ್, ರಾಹುಲ್ ಚಹಾರ್, ದೀಪಕ್ ಚಹಾರ್, ಖಲೀಲ್ ಅಹ್ಮದ್, ಶಿವಂ ದುಬೆ, ಶಾರ್ದುಲ್ ಠಾಕೂರ್.

First published: October 25, 2019, 11:25 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading