ಪ್ರತಿಭಟನೆ ಹಿನ್ನಲೆ; ಬಾಂಗ್ಲಾದೇಶ ಬದಲು ಟೀಂ ಇಂಡಿಯಾ ಪ್ರವಾಸ ಕೈಗೊಳ್ಳಲಿದೆ ಈ ತಂಡ?

ಬಾಂಗ್ಲಾದೇಶ ತಂಡ ಭಾರತ ಪ್ರವಾಸ ಕೈಗೊಳ್ಳುವುದಿಲ್ಲ ಎಂದಾದರೆ ಈ ಎರಡು ತಂಡಗಳ ಪೈಕಿ ಒಂದು ಟೀಂ ಟೀಂ ಇಂಡಿಯಾ ವಿರುದ್ಧ ಆಡುವ ಅಂದಾಜಿದೆ.

Vinay Bhat | news18-kannada
Updated:October 23, 2019, 10:24 AM IST
ಪ್ರತಿಭಟನೆ ಹಿನ್ನಲೆ; ಬಾಂಗ್ಲಾದೇಶ ಬದಲು ಟೀಂ ಇಂಡಿಯಾ ಪ್ರವಾಸ ಕೈಗೊಳ್ಳಲಿದೆ ಈ ತಂಡ?
ಶಕಿಬ್ ಅಲ್ ಹಸನ್ ಹಾಗೂ ವಿರಾಟ್ ಕೊಹ್ಲಿ
  • Share this:
ಬೆಂಗಳೂರು (ಅ. 23): ಮುಂದಿನ ತಿಂಗಳು ಭಾರತ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ಮೂರು ಪಂದ್ಯಗಳ ಟಿ-20 ಹಾಗೂ ಎರಡು ಪಂದ್ಯಗಳ ಟೆಸ್ಟ್​ ಸರಣಿ ಆಡಬೇಕಿದೆ. ನವಂಬರ್ 3 ರಂದು ಮೊದಲ ಟಿ-20 ಪಂದ್ಯ ಆಯೋಜಿಸಲಾಗಿದೆ. ಆದರೆ, ಬಾಂಗ್ಲಾದೇಶ ಕ್ರಿಕೆಟ್ ತಂಡ ಭಾರತಕ್ಕೆ ಪ್ರವಾಸ ಬೆಳೆಸುವುದು ಅನುಮಾನ.

ಬಾಂಗ್ಲಾ ಆಟಗಾರರು ತಮ್ಮ ಬೇಡಿಕೆ ಈಡೇರಿಸುವ ಮುನ್ನ ಯಾವುದೇ ಕ್ರಿಕೆಟ್ ಸರಣಿ ಆಡಲು ಮೈದಾನಕ್ಕಿಳಿಯುವುದಿಲ್ಲ ಎಂದು ಹೇಳಿದ್ದಾರೆ. ಶಕಿಬ್ ಅಲ್ ಹಸನ್ ನೇತೃತ್ವದಲ್ಲಿ ಎಲ್ಲ ಆಟಗಾರರು ಬಾಂಗ್ಲಾ ಕ್ರಿಕೆಟ್ ಬೋರ್ಡ್​ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ನಮ್ಮ 11 ಅಂಶಗಳ ಬೇಡಿಕೆ ಈಡೇರುವ ತನಕ ಕ್ರಿಕೆಟ್ ಆಡುವುದಿಲ್ಲ ಎಂದು ಆಟಗಾರರು ಅಸಮಧಾನ ಹೊರಹಾಕಿದ್ದಾರೆ. ಈ ನಡುವೆ ಬಾಂಗ್ಲಾದೇಶ ತಂಡ ಭಾರತ ಪ್ರವಾಸ ಕೈಗೊಳ್ಳುವುದಿಲ್ಲ ಎಂದಾದರೆ ಈ ಎರಡು ತಂಡಗಳ ಪೈಕಿ ಒಂದು ಟೀಂ ಟೀಂ ಇಂಡಿಯಾ ವಿರುದ್ಧ ಆಡುವ ಅಂದಾಜಿದೆ.

ಧೋನಿಯೇ ನಿವೃತ್ತಿ ನೀಡಿಲ್ಲ, ನನ್ನ ಗಂಡ ಯಾಕೆ ಕೊಡಬೇಕು?; ಪಾಕ್ ಆಟಗಾರನ ಪತ್ನಿ

ಐರ್ಲೆಂಡ್ ಕ್ರಿಕೆಟ್ ತಂಡ ಸದ್ಯ ಐಸಿಸಿ ವಿಶ್ವಕಪ್ ಕ್ವಾಲಿಫೈಯರ್ಸ್​ನಲ್ಲಿ ಭಾಗವಹಿಸುತ್ತಿದೆ. ನ. 2 ಕ್ಕೆ ಈ ಟೂರ್ನಿ ಅಂತ್ಯಗೊಳ್ಳಲಿದೆ. ಜನವರಿ 2020 ರಲ್ಲಿ ಐರ್ಲೆಂಡ್ ವೆಸ್ಟ್​ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು ಏಕದಿನ, ಟಿ-20 ಸರಣಿ ಆಡಲಿದೆ.

ಈ ನಡುವೆ ಐರ್ಲೆಂಡ್ ತಂಡಕ್ಕೆ ಯಾವುದೇ ದೊಡ್ಡ ಟೂರ್ನಮೆಂಟ್ ಇಲ್ಲ. ಹೀಗಾಗಿ ಬಿಸಿಸಿಐ ಐರ್ಲೆಂಡ್ ತಂಡವನ್ನು ಭಾರತಕ್ಕೆ ಬರುವಂತೆ ಮನಿ ಮಾಡುವ ಅಂದಾಜಿದೆ.

ಈ ಹಿಂದೆ ಭಾರತ 2020ರ ಜನವರಿಯಲ್ಲಿ ಜಿಂಬಾಬ್ವೆ ವಿರುದ್ಧ ಭಾರತ ಟಿ-20 ಸರಣಿ ಆಡಬೇಕಿತ್ತು. ಆದರೆ, ಜಿಂಬಾಬ್ವೆ ತಂಡವನ್ನು ಐಸಿಸಿ ಅಮಾನತುಗೊಳಿಸಿದ ಹಿನ್ನಲೆಯಲ್ಲಿ ಬಿಸಿಸಿಐ ಶ್ರೀಲಂಕಾ ತಂಡಕ್ಕೆ ಆಹ್ವಾನ ನೀಡಿದೆ.Vijay Hazare Trophy: ಇಂದು ಕರ್ನಾಟಕ- ಛತ್ತೀಸ್‌ಗಢ ನಡುವೆ ಸೆಮೀಸ್ ಫೈಟ್; ರಾಜ್ಯಕ್ಕೆ ಮಯಾಂಕ್ ಬಲ

ಸದ್ಯ ಐಸಿಸಿ ಜಿಂಬಾಬ್ವೆ ತಂಡದ ಅಮಾನತನ್ನು ಹಿಂತೆಗೆದುಕೊಂಡಿದೆ. ಅಕ್ಟೋಬರ್ 3ಕ್ಕೆ ತ್ರಿಕೋನ ಸರಣಿ ಮುಗಿದ ಬಳಿಕ ಜಿಂಬಾಬ್ವೆ ತಂಡ ಯಾವುದೇ ಅಂತರಾಷ್ಟ್ರೀಯ ಟೂರ್ನಿಯಲ್ಲಿ ಭಾಗವಹಿಸಿಲ್ಲ. ಹೀಗಾಗಿ ಬಿಸಿಸಿಐ ಆಹ್ವಾನ ನೀಡಿದರೆ ಖಂಡಿತವಾಗಿ ಜಿಂಬಾಬ್ವೆ ಭಾರತ ಪ್ರವಾಸ ಬರಲಿದೆ.

First published:October 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ