ಬೆಂಗಳೂರು (ನ. 02): ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ವೈಟ್ವಾಶ್ ಮಾಡಿದ ಬಳಿಕ ಟೀಂ ಇಂಡಿಯಾ ಸದ್ಯ ಟಿ-20 ಸರಣಿಗೆ ಸಜ್ಜಾಗಿದೆ. ನಾಳೆ (ನ. 03) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯಲಿದ್ದು, ರೋಹಿತ್ ಪಡೆ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ.
ಮೊದಲ ಟಿ-20 ಕದನದಲ್ಲಿ ಭಾರತವೇ ಗೆಲ್ಲಲಿದೆ ಎಂಬುದಕ್ಕೆ ಅನೇಕ ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳನ್ನು ನೋಡುವುದಾದರೆ…
![India vs Bangladesh: Rohit Sharma speaks to Sourav Ganguly, says team ready to play first T20I]()
2018 ಏಷ್ಯಾಕಪ್ನಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಟ್ರೋಫಿ ಗೆದ್ದಾಗ ಸಂಭ್ರಮಿಸುತ್ತಿರುವ ಆಟಗಾರರು
ಈವರೆಗೆ ಬಾಂಗ್ಲಾದೇಶ ವಿರುದ್ಧದ ಟಿ-20 ಪಂದ್ಯದಲ್ಲಿ
ಭಾರತ ಒಂದೇ ಒಂದು ಸೋಲನ್ನು ಕಂಡಿಲ್ಲ. ಉಭಯ ತಂಡಗಳು ಒಟ್ಟು 8 ಟಿ-20 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಎಂಟೂ ಪಂದ್ಯಗಳಲ್ಲಿ ಗೆದ್ದು ಬೀಗಿದ್ದು ಭಾರತ.
(VIDEO): ಪುರುಷರಿಂದಲೂ ಅಸಾಧ್ಯ ಬೌಂಡರಿ ಲೈನ್ ಪಕ್ಕ ಹರ್ಮನ್ಪ್ರೀತ್ ಹಿಡಿದ ಈ ಮ್ಯಾಜಿಕ್ ಕ್ಯಾಚ್
ಭಾರತ ಪರ ಟಿ-20 ಪಂದ್ಯಗಳಲ್ಲಿ ನಾಯಕನಾಗಿ ರೋಹಿತ್ ಶರ್ಮಾ ಅದ್ಭುತ ದಾಖಲೆ ಹೊಂದಿದ್ದಾರೆ. ಅಲ್ಲದೆ ಅರುಣ್ ಜೇಟ್ಲಿ ಕ್ರೀಡಾಂಗಣ ಹಿಟ್ಮ್ಯಾನ್ಗೆ ಲಕ್ಕಿ ಗ್ರೌಂಡ್ ಎಂದೇ ಹೇಳಬಹುದು. ಈ ಸ್ಟೇಡಿಯಂನಲ್ಲಿ ರೋಹಿತ್ ಒಂದು ಪಂದ್ಯವನ್ನಾಡಿದ್ದು ನ್ಯೂಜಿಲೆಂಡ್ ವಿರುದ್ಧ 55 ಎಸೆತಗಳಲ್ಲಿ 80 ರನ್ ಬಾರಿಸಿದ್ದರು. ಅಲ್ಲದೆ ಐಪಿಎಲ್ನಲ್ಲಿ ಎರಡು ಅರ್ಧಶತಕ ಕೂಡ ಇದೇ ಮೈದಾನದಲ್ಲಿ ಸಿಡಿಸಿದ್ದಾರೆ.
ಶಿಖರ್ ಧವನ್ಗೆ ಇದು ಹೋಮ್ ಗ್ರೌಂಡ್ ಆಗಿರುವುದರಿಂದ ಅಬ್ಬರಿಸುವುದು ಖಚಿತ. ಜೊತೆಗೆ ಧವನ್ ಕೂಡ ಈ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ಮತ್ತು ಐಪಿಎಲ್ ಸೇರಿ ಒಟ್ಟು 4 ಅರ್ಧಶತಕ ಗಳಿಸಿದ್ದಾರೆ. ಶ್ರೇಯಸ್ ಐಯರ್ ಐಪಿಎಲ್ನಲ್ಲಿ ಡೆಲ್ಲಿ ತಂಡದ ನಾಯಕ. ಹೀಗಾಗಿ ಈ ಗ್ರೌಂಡ್ನ ಬಗ್ಗೆ ಚೆನ್ನಾಗಿಯೆ ಅರಿತುಕೊಂಡಿದ್ದಾರೆ.
ಶಾರ್ದೂಲ್ ಠಾಕೂರ್, ದೀಪಕ್ ಚಹಾರ್ ಹಾಗೂ ಖಲೀಲ್ ಅಹ್ಮದ್ಗೆ ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ಇದೊಂದು ಅತ್ಯುತ್ತಮ ವೇದಿಕೆ. ಇನ್ನು ಸ್ಪಿನ್ನರ್ ಯಜುವೇಂದ್ರ ಚಹಾಲ್ ಕೂಡ ಹಿಂದಿನ ನ್ಯೂಜಿಲೆಂಡ್ ವಿರುದ್ಧ 4 ಓವರ್ಗೆ 26 ರನ್ ನೀಡಿ 2 ವಿಕೆಟ್ ಪಡೆದು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು.
IND vs BAN: 2015ರಲ್ಲಿ ಕೊನೆ ಪಂದ್ಯ: 4 ವರ್ಷದ ಬಳಿಕ ಟೀಂ ಇಂಡಿಯಾ ಪರ ಕಣಕ್ಕಿಳಿಯಲಿದ್ದಾರೆ ಈ ಆಟಗಾರ?
ಇತ್ತ ಬಾಂಗ್ಲಾದೇಶ ಈ ಮೈದಾನದಲ್ಲಿ ಆಡುತ್ತಿರುವುದು ಇದೇ ಮೊದಲು. ಕೆಲ ಬಾಂಗ್ಲಾ ಆಟಗಾರರಿಗಷ್ಟೆ ಭಾರತದ ಮೈದಾನದಲ್ಲಿ ಆಡಿದ ಅನುಭವವಿದೆ. ಇದು ಬಾಂಗ್ಲಾ ಹುಲಿಗಳಿಗೆ ಹಿನ್ನಡೆಯಾಗುವುದು ಖಚಿತ. ಜೊತೆಗೆ ಶಕಿಬ್ ಅಲ್ ಹಸನ್ ಎರಡು ವರ್ಷ ಕ್ರಿಕೆಟ್ನಿಂದ ಬ್ಯಾನ್ ಆಗಿರುವ ಶಾಕ್ನಿಂದ ಬಾಂಗ್ಲಾ ಆಟಗಾರರು ಇನ್ನೂ ಹೊರಬಂದಿಲ್ಲ.
ಅಂಕಿಅಂಶದ ಜೊತೆ ಬಾಂಗ್ಲಾ ಆಟಗಾರರಿಗೆ ಅನುಭವದ ಕೊರತೆ ಇರುವ ಕಾರಣ ಮೊದಲ ಟಿ-20 ಪಂದ್ಯದಲ್ಲಿ ಭಾರತ ಗೆಲುವು ಸಾಧಿಸುವುದು ನಿಶ್ಚಿತ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಪಂದ್ಯ ನಾಳೆ ಸಂಜೆ 7 ಗಂಟೆಗೆ ಆರಂಭವಾಗಲಿದೆ.