India vs Australia: ಹೀಗೂ ರನೌಟ್ ಮಾಡಬಹುದು: ವೃದ್ದಿಮಾನ್ ಸಾಹ ಹೊಸ ಪ್ರಯೋಗದ ರೋಚಕ ವಿಡಿಯೋ ನೋಡಿ

ವೇಡ್ 33 ಎಸೆತಗಳಲ್ಲಿ 53 ರನ್ ಬಾರಿಸಿದರು. ವೃದ್ದಿಮಾನ್ ಸಾಹ ಅವರ ಚುರುಕಿನ ಫೀಲ್ಡಿಂಗ್ ಬಗ್ಗೆ ಸಾಕಷ್ಟು ಪ್ರಶಂಸೆಗಳು ಕೇಳಿಬರುತ್ತಿವೆ. ಥೇಟ್ ಎಂ ಎಸ್ ಧೋನಿ ಮಾದರಿಯಲ್ಲಿ ಮಾಡಿದ ರನೌಟ್ ವಿಡಿಯೋ ವೈರಲ್ ಆಗುತ್ತಿದೆ.

Wriddhiman Saha Run Out

Wriddhiman Saha Run Out

 • Share this:
  ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲುಕಂಡ ಭಾರತ ಸಾಕಷ್ಟು ಟ್ರೋಲ್​ಗೆ ಗುರಿಯಾಗಿದೆ. ಅದರಲ್ಲೂ ಕೇವಲ 36 ರನ್​​ಗೆ ಸರ್ವಪತನ ಕಂಡು ಹಿಂದೆಂದೂ ನೀಡದ ಕಳಪೆ ಆಟ ಪ್ರದರ್ಶಿಸಿತು. ಆಸ್ಟ್ರೇಲಿಯಾಕ್ಕೆ ಗೆಲ್ಲಲು ಕೇವಲ 90 ರನ್​ಗಳ ಟಾರ್ಗೆಟ್ ನೀಡಿದ ಭಾರತ ಬೌಲಿಂಗ್​ನಲ್ಲೂ ಕಮಾಲ್ ಮಾಡಲಿಲ್ಲ. ಆದರೆ, ಆಸೀಸ್ ಗೆಲುವಿನ ಅಂತಿಮ ಹಂತದಲ್ಲಿ ವಿಕೆಟ್ ಕೀಪರ್ ವೃದ್ದಿಮಾನ್ ಸಾಹ ತಮ್ಮ ಜವಾಬ್ದಾರಿಯನ್ನು ಅದ್ಭುತವಾಗಿ ನಿರ್ವಹಿಸಿ ಎದುರಾಳಿ ಬ್ಯಾಟ್ಸ್​ಮನ್ ಅನ್ನು ರೋಚಕವಾಗಿ ರನೌಟ್ ಮಾಡಿದರು.

  ಭಾರತ ನೀಡಿದ್ದ 90 ರನ್​ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 2 ವಿಕೆಟ್ ಕಳೆದುಕೊಂಡು ಗೆಲುವಿ ನಗೆಬೀರಿತು. ಇದರಲ್ಲಿ ಒಂದು ವಿಕೆಟ್ ಉರುಳಲು ಕಾರಣ ವೃದ್ದಿಮಾನ್ ಸಾಹ. ಹೌದು, ಒಂದೇ ಒಂದು ವಿಕೆಟ್ ಕಳೆದುಕೊಳ್ಳದೆ ಗೆಲುವಿನ ಲೆಕ್ಕಾಚಾರ ಹಾಕಿದ್ದ ಕಾಂಗರೂ ಪಡೆಗೆ ಶಾಕ್ ನೀಡಿದ್ದು ಸಾಹ. ಅರ್ಧಶತಕ ಸಿಡಿಸಿ ಮಿಂಚಿದ್ದ ಮ್ಯಾಥ್ಯೂ ವೇಡ್​ರನ್ನು ರನೌಟ್ ಮಾಡುವ ಮೂಲಕ ವೃದ್ದಿಮಾನ್ ಪೆವಿಲಿಯನ್​ಗೆ ಕಳುಹಿಸಿದರು.

  IND vs AUS: ಹೀನಾಯ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾಕ್ಕೆ ಊಹಿಸಲಾಗದ ಮತ್ತೊಂದು ದೊಡ್ಡ ಆಘಾತ!

  ವೇಡ್ 33 ಎಸೆತಗಳಲ್ಲಿ 53 ರನ್ ಬಾರಿಸಿದರು. ಸಾಹ ಅವರ ಚುರುಕಿನ ಫೀಲ್ಡಿಂಗ್ ಬಗ್ಗೆ ಸಾಕಷ್ಟು ಪ್ರಶಂಸೆಗಳು ಕೇಳಿಬರುತ್ತಿವೆ. ಥೇಟ್ ಎಂ ಎಸ್ ಧೋನಿ ಮಾದರಿಯಲ್ಲಿ ಮಾಡಿದ ರನೌಟ್ ವಿಡಿಯೋ ವೈರಲ್ ಆಗುತ್ತಿದೆ.

  ಆದರೆ, ಸಾಹ ಬ್ಯಾಟಿಂಗ್​ನಲ್ಲಿ ಭಾರತಕ್ಕೆ ನೆರವಾಗಲಿಲ್ಲ. ಮೊದಲ ಇನ್ನಿಂಗ್ಸ್​ನಲ್ಲಿ 9 ಹಾಗೂ ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 4 ರನ್ ಗಳಿಸಿದರಷ್ಟೆ. ಹೀಗಾಗಿ ಮುಂದಿನ ಎರಡನೇ ಟೆಸ್ಟ್​ನಲ್ಲಿ ಸಾಹ ಅವರಿಗೆ ಅವಕಾಶ ಸಿಗುವುದು ಅನುಮಾನ. ಬೆಂಚ್ ಕಾಯುತ್ತಿರುವ ರಿಷಭ್ ಪಂತ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

  ಅಲ್ಲದೆ ಬಾಕ್ಸಿಂಗ್ ಡೇ ಟೆಸ್ಟ್​ಗೆ ಭಾರತ ತಂಡದಲ್ಲಿ ಅನೇಕ ಬದಲಾವಣೆ ನಿರೀಕ್ಷಿಸಲಾಗಿದೆ. ಅಭ್ಯಾಸ ಪಂದ್ಯದಿಂದಲೇ ಸತತ ವೈಫಲ್ಯ ಅನುಭವಿಸುತ್ತಿರುವ ಪೃಥ್ವಿ ಶಾ ಕೈಬಿಟ್ಟು ಶುಭ್ಮನ್ ಗಿಲ್​ಗೆ ಅವಕಾಶ ನೀಡಬಹುದು. ಜೊತೆಗೆ ವಿರಾಟ್ ಕೊಹ್ಲಿ ಪಿತೃತ್ವ ರಜೆ ಕಾರಣ ಭಾರತಕ್ಕೆ ಮರಳಿದ್ದು ಇವರ ಜಾಗದಲ್ಲಿ ಕೆ. ಎಲ್ ರಾಹುಲ್ ಆಡಬಹುದು.

  India vs Australia 1st Test: ಆಸ್ಟ್ರೇಲಿಯಾ ಬೌಲಿಂಗ್ ದಾಳಿಗೆ ನಡುಗಿದ ಭಾರತ: ಮೊದಲ ಟೆಸ್ಟ್​ನಲ್ಲಿ ಕಾಂಗರೂ ಪಡೆಗೆ ಜಯ

  ಇನ್ನೂ ಮೊಹಮ್ಮದ್ ಶಮಿ ಇಂಜುರಿಯಿಂದಾಗಿ ಟೆಸ್ಟ್​ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಭಾರತ ಬ್ಯಾಟಿಂಗ್​ನ ಎರಡನೇ ಇನ್ನಿಂಗ್ಸ್‌ನಲ್ಲಿ ಆಸೀಸ್ ವೇಗಿ ಪ್ಯಾಟ್ ಕಮ್ಮಿನ್ಸ್ ಎಸೆದ ಶಾರ್ಟ್ ಬಾಲ್​ ಶಮಿ ಅವರ ಮೊಣಕೈಗೆ ತಗುಲಿದ ಪರಿಣಾಮ ತೀವ್ರ ನೋವಿನಿಂದ ಮೈದಾನದಲ್ಲೇ ಕುಳಿತರು. ಅಲ್ಲೆ ಭಾರತದ ಫಿಸಿಯೋ ಬಂದರಾದರು ನೋವು ವಿಪರೀತವಾಗಿದ್ದ ಕಾರಣ ರಿಟೈರ್ಡ್ ಹರ್ಟ್ ಪಡೆದು ಮೈದಾನದಿಂದ ಹೊರ ನಡೆದರು.

  ತೀವ್ರವಾದ ನೋವಿನಿಂದ ಶಮಿ ಬಳಲುತ್ತಿರುವ ಕಾರಣ ಅವರು ಮುಂದಿನ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇವರ ಬದಲು ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಮೊಹಮ್ಮದ್ ಸಿರಾಜ್ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
  Published by:Vinay Bhat
  First published: