David Warner: ಇದು ಶಾರುಖ್ ಖಾನ್ ಅಲ್ಲ, ಡೇವಿಡ್ ವಾರ್ನರ್: ಕಿಂಗ್ ಖಾನ್ ಆಗಿ ಬದಲಾದ ಆಸೀಸ್ ಕ್ರಿಕೆಟಿಗ

ಸದಾ ಒಂದಲ್ಲ ಒಂದು ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಮೊಗದಲ್ಲಿ ನಗು ತರಿಸುವ ವಾರ್ನರ್ ಈ ಬಾರಿ ಶಾರುಖ್ ಖಾನ್ ಆಗಿ ಬದಲಾಗಿದ್ದಾರೆ.

David Warner

David Warner

  • Share this:
    ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರಿಗೆ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಐಪಿಎಲ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡದ ನಾಯಕನಾಗಿ ಒಂದಿಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡರೆ, ಭಾರತೀಯ ಹಾಡುಗಳಿಗೆ ಇವರು ಮಾಡುವ ಡ್ಯಾನ್ಸ್​ ಕಂಡು ಅಭಿಮಾನಿಗಳು ಹುಟ್ಟುಕೊಂಡಿದ್ದಾರೆ. ಭಾರತೀಯ ಸಿನಿಮಾದ ಹಾಡುಗಳಿಗೆ ಡ್ಯಾನ್ಸ್​ ಮಾಡುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದು, ಇನ್​​ಸ್ಟಾಗ್ರಾಂನಲ್ಲಿ 5 ಮಿಲಿಯನ್​ ಹಿಂಬಾಲಕರನ್ನು ಪಡೆದಿದ್ದಾರೆ.

    ಸದಾ ಒಂದಲ್ಲ ಒಂದು ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಮೊಗದಲ್ಲಿ ನಗು ತರಿಸುವ ವಾರ್ನರ್ ಈ ಬಾರಿ ಶಾರುಖ್ ಖಾನ್ ಆಗಿ ಬದಲಾಗಿದ್ದಾರೆ. ಹೌದು, ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶಾರೂಖ್ ಖಾನ್ ಅವರ ‘ಡಾನ್ 2’ಚಿತ್ರದ ಸಾಹಸ ದೃಶ್ಯವನ್ನುವಾರ್ನರ್ ಪೋಸ್ಟ್ ಮಾಡಿದ್ದಾರೆ. ಆದರೆ, ಅದರಲ್ಲಿ ಶಾರೂಖ್ ಮುಖದ ಬದಲಿಗೆ ತಮ್ಮ ಮುಖವನ್ನು ರೀಫೇಸ್ ಮಾಡಿದ್ದಾರೆ.

    IPL 2021: ಐಪಿಎಲ್ ಮೆಗಾ ಹರಾಜು ನಡೆಯುವುದು ಅನುಮಾನ..!






    ವಿಡಿಯೊ ಅತ್ಯಂತ ಕುತೂಹಲಭರಿತವಾಗಿದ್ದು, ವೈರಲ್ ಆಗಿದೆ. ವಿಡಿಯೊ ಜೊತೆಗೆ, ಇದರಲ್ಲಿನ ಹಿಂಸಾಚಾರದ ಬಗ್ಗೆ ಕ್ಷಮಿಸಿ, ಆದರೆ ನಿಮಗೆ ಇದು ಸಿಗುತ್ತದೆ ಎಂದು ನಾನು ಭಾವಿಸಿರಲಿಲ್ಲ ಎಂದು ವಾರ್ನರ್ ಬರೆದುಕೊಂಡಿದ್ದಾರೆ.

    ಇತ್ತೀಚೆಗಷ್ಟೇ ವಾರ್ನರ್ ಅವರು ತಮ್ಮ ಮುಖವನ್ನು ರೀಫೇಸ್ ಮಾಡಿ ಹೃತಿಕ್ ರೋಷನ್​​ ವಿಡಿಯೋ ಮಾಡಿದ್ದರು. ಇನ್​ಸ್ಟಾದಲ್ಲಿ ಈ ವಿಡಿಯೋ 2.3 ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದಿತ್ತು. ಸದ್ಯ ಶಾರುಖ್ ಖಾನ್ ವಿಡಿಯೋ ಪೋಸ್ಟ್​​ ಮಾಡಿದ್ದು ಸಖತ್ ವೈರಲ್ ಆಗುತ್ತಿದೆ.






    ಡೇವಿಡ್‌ ವಾರ್ನರ್‌ ಭಾರತ ವಿರುದ್ಧ ಡಿ.26 ರಿಂದ ಮೆಲ್ಬೋರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಆರಂಭವಾಗಲಿರುವ ಎರಡನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್ ಪಂದ್ಯದಲ್ಲೂ ಕಣಕ್ಕಿಳಿಯುತ್ತಿಲ್ಲ.

    Asha Bhat: ಅಜ್ಜಿ ಮನೆಯಲ್ಲಿ ಆಟವಾಡುತ್ತಾ ಕಾಲ ಕಳೆಯುತ್ತಿರುವ ರಾಬರ್ಟ್​ ಕ್ವೀನ್​ ಆಶಾ ಭಟ್​..!

    ವಾರ್ನರ್‌ ಭಾರತ ವಿರುದ್ಧ ಮೊದಲನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದ ವೇಳೆ ಗಾಯಕ್ಕೆ ತುತ್ತಾಗಿದ್ದರು. ಅಂದಿನಿಂದ ಎಡಗೈ ಬ್ಯಾಟ್ಸ್‌ಮನ್‌ ಇನ್ನುಳಿದ ಎರಡು ಏಕದಿನ ಪಂದ್ಯಗಳು, ಟಿ-20 ಸರಣಿ ಹಾಗೂ ಅಡಿಲೇಡ್‌ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದರು. ಎರಡನೇ ಪಂದ್ಯಕ್ಕೆ ಅವರು ತಂಡಕ್ಕೆ ಮರಳಲಿದ್ದಾರೆಂದು ಭಾವಿಸಲಾಗಿತ್ತು. ಆದರೆ, ಅವರು ಇನ್ನೂ ಸಂಪೂರ್ಣ ಫಿಟ್‌ ಆಗದ ಕಾರಣ ಮತ್ತೆ ವಿಶ್ರಾಂತಿಗೆ ತೆರಳಿದ್ದಾರೆ.
    Published by:Vinay Bhat
    First published: