India vs Australia: ವಾರ್ನರ್-ಫಿಂಚ್ ದಾಖಲೆಯ ಜೊತೆಯಾಟಕ್ಕೆ ಕಂಗಾಲಾದ ಭಾರತ; ಆಸೀಸ್​ಗೆ 10 ವಿಕೆಟ್​ಗಳ ಜಯ!

10 ವಿಕೆಟ್​ಗಳ ಜಯದೊಂದಿಗೆ ಆಸ್ಟ್ರೇಲಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿ ವಶಪಡಿಸಕೊಳ್ಳ ಬೇಕಾದರೆ ಭಾರತ ಮುಂದಿನ ಎರಡೂ ಪಂದ್ಯವನ್ನು ಗೆಲ್ಲಲೇ ಬೇಕಾಗಿದೆ.

Vinay Bhat | news18-kannada
Updated:January 15, 2020, 9:01 AM IST
India vs Australia: ವಾರ್ನರ್-ಫಿಂಚ್ ದಾಖಲೆಯ ಜೊತೆಯಾಟಕ್ಕೆ ಕಂಗಾಲಾದ ಭಾರತ; ಆಸೀಸ್​ಗೆ 10 ವಿಕೆಟ್​ಗಳ ಜಯ!
ಇನ್ನು ಭಾರತ ವಿರುದ್ಧ ಏಕದಿನ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್(796) 6ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಹೀಗಾಗಿ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್(789) ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ.
  • Share this:
ಮುಂಬೈ (. 14): ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್-ಬೌಲಿಂಗ್​ನಲ್ಲಿ ಎಡವಿದ ಭಾರತ ತಂಡ ಸೋಲುಂಡಿದೆ. ಡೇವಿಡ್ ವಾರ್ನರ್ ಹಾಗೂ ಆ್ಯರೋನ್ ಫಿಂಚ್ ಶತಕದ ಅಬ್ಬರದಿಂದ ಆಸ್ಟ್ರೇಲಿಯಾ 10 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಕೊಹ್ಲಿ ಪಡೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಭಾರತ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತು. ಓಪನರ್​ಗಳಾಗಿ ಕಣಕ್ಕಿಳಿದ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಪೈಕಿ, ಹಿಟ್​ಮ್ಯಾನ್ 15 ಎಸೆತಗಳಲ್ಲಿ 10 ರನ್ ಗಳಿಸಿ ಔಟ್ ಆದರು.

 ಆದರೆ, 2ನೇ ವಿಕೆಟ್​ಗೆ ಜೊತೆಯಾದ ಧವನ್ ಹಾಗೂ ಕೆ ಎಲ್ ರಾಹುಲ್ ಉತ್ತಮ ಆಟ ಪ್ರದರ್ಶಿಸಿದರು. ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಇವರಿಬ್ಬರು ತಂಡವನ್ನು ಆರಂಭಿಕ ಆಘಾತದಿಂದ ಪಾರುಮಾಡಿದರು. 121 ರನ್​ಗಳ ಜೊತೆಯಾಟ ಆಡಿದರು.

India vs Australia ಮೊದಲ ಏಕದಿನ ಪಂದ್ಯದಲ್ಲಿ ನಡೆಯಿತು ಅಪರೂಪದ ಘಟನೆ; ಏನದು ಗೊತ್ತಾ?

ಚೆನ್ನಾಗಿಯೆ ಆಡುತ್ತಿದ್ದ ರಾಹುಲ್ 61 ಎಸೆತಗಳಲ್ಲಿ 4 ಬೌಂಡರಿ ಬಾರಿಸಿ ಅರ್ಧಶತಕದ ಹೊಸ್ತಿಲಲ್ಲಿ 47 ರನ್​ಗೆ ಔಟ್ ಆದರು. ಇದರ ಬೆನ್ನಲ್ಲೆ ಧವನ್ ಕೂಡ 91 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಬಾರಿಸಿ 74 ರನ್​ಗೆ ನಿರ್ಗಮಿಸಿದರು.

ನಾಯಕ ವಿರಾಟ್ ಕೊಹ್ಲಿ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದೆ ಕೇವಲ 16 ರನ್​ಗೆ ಬ್ಯಾಟ್ ಕೆಳಗಿಟ್ಟರು. ಶ್ರೇಯಸ್ ಐಯರ್ 4 ರನ್​ಗೆ ಸುಸ್ತಾದರು. ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಜೊತೆಯಾಟ 49 ರನ್​ಗಳನ್ನು ನೀಡಿತು. ಜಡೇಜಾ 32 ಎಸೆತಗಳಲ್ಲಿ 25 ರನ್ ಕಲೆಹಾಕಿದರೆ, ರಿಷಭ್ ಪಂತ್ 28 ರನ್ ಬಾರಿಸಿದರು. ನಂತರ ಬಂದ ಬ್ಯಾಟ್ಸ್​ಮನ್​ಗಳು ಬಂದ ಬೆನ್ನಲ್ಲೆ ಹಿಂತಿರುಗಿದರು.

ಅಂತಿಮವಾಗಿ ಭಾರತ 49.1 ಓವರ್​ನಲ್ಲಿ 255 ರನ್​ಗೆ ಆಲೌಟ್ ಆಗಿದೆ. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್​ 3, ಪ್ಯಾಟ್ ಕಮಿನ್ಸ್​ ಹಾಗೂ ಕೇನ್ ರಿಚರ್ಡಸನ್ 2 ವಿಕೆಟ್ ಕಿತ್ತರೆ, ಆ್ಯಡಂ ಜಂಪಾ ಹಾಗೂ ಆಸ್ಟನ್ ಅಗರ್ ತಲಾ 1 ವಿಕೆಟ್ ಪಡೆದರು.

IND vs AUS: ಪಂತ್ ಬದಲು ವಿಕೆಟ್ ಕೀಪಿಂಗ್ ಮಾಡುತ್ತಿರುವ ಕೆ ಎಲ್ ರಾಹುಲ್; ಯಾಕೆ ಗೊತ್ತಾ?

256 ರನ್​ಗಳ ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭದಿಂದಲೇ ಓಪನರ್​ಗಳಾದ ಡೇವಿಡ್ ವಾರ್ನರ್ ಹಾಗೂ ಆ್ಯರೋನ್ ಫಿಂಚ್ ಬಿರುಸಿನ ಆಟ ಆಡಿದರು. ಭಾರತೀಯ ಬೌಲರ್​ಗಳು ಎಷ್ಟೇ ಪ್ರಯತ್ನ ಪಟ್ಟರು ಆಸೀಸ್​ನ ಒಂದೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.

ಫಿಂಚ್ ಹಾಗೂ ವಾರ್ನರ್ ದಾಖಲೆಯ ಜೊತೆಯಾಟ ಆಡಿ ತಂಡಕ್ಕೆ ಅಮೋಘ ಗೆಲುವು ತಂದಿಟ್ಟರು. 37.4 ಓವರ್​ನಲ್ಲೇ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೆ 258 ರನ್ ಬಾರಿಸಿ ಜಯ ಸಾಧಿಸಿತು. ವಾರ್ನರ್ 112 ಎಸೆತಗಳಲ್ಲಿ 17 ಬೌಂಡರಿ, 3 ಸಿಕ್ಸರ್ ಸಿಡಿಸಿ ಅಜೇಯ 128 ರನ್ ಚಚ್ಚಿದರೆ, ಫಿಂಚ್ 114 ಎಸೆತಗಳಲ್ಲಿ 13 ಬೌಂಡರಿ, 2 ಸಿಕ್ಸರ್​​ನೊಂದಿಗೆ ಅಜೇಯ 110 ರನ್ ಗಳಿಸಿದರು.

ಟೀಂ ಇಂಡಿಯಾಕ್ಕೆ ಸ್ಯಾಮ್ಸನ್​ಗಿಂತ ರಿಷಭ್ ಪಂತ್ ಅಗತ್ಯವೇ ಹೆಚ್ಚು; ಯಾಕೆ?, ಈ ಸ್ಟೋರಿ ಓದಿ!

10 ವಿಕೆಟ್​ಗಳ ಜಯದೊಂದಿಗೆ ಆಸ್ಟ್ರೇಲಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿ ವಶಪಡಿಸಕೊಳ್ಳ ಬೇಕಾದರೆ ಭಾರತ ಮುಂದಿನ ಎರಡೂ ಪಂದ್ಯವನ್ನು ಗೆಲ್ಲಲೇ ಬೇಕಾಗಿದೆ. ಎರಡನೇ ಏಕದಿನ ಜನವರಿ 17 ಶುಕ್ರವಾರದಂದು ರಾಜ್ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿದೆ.

First published:January 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading