‘ಸ್ಮಿತ್​ರನ್ನು ಚೀಟರ್ ಎಂದು ಕರೆಯಬೇಡಿ’; ಮೈದಾನದಿಂದಲೇ ಅಭಿಮಾನಿಗಳಿಗೆ ತಿಳಿ ಹೇಳಿದ ಕೊಹ್ಲಿ

India vs Australia: ಚೆಂಡು ವಿರೂಪ ಪ್ರಕರಣದಿಂದ ಒಂದು ವರ್ಷ ನಿಷೇಧ ಅನುಭವಿಸಿ ವಿಶ್ವಕಪ್​ನಲ್ಲಿ ಕಮ್​​ಬ್ಯಾಕ್ ಮಾಡಿರುವ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್​​​ಗೆ ಅಭಿಮಾನಿಗಳು ಬೆಂಬಿಡದೆ ಕಾಡುತ್ತಿದ್ದಾರೆ.

Vinay Bhat | news18
Updated:June 9, 2019, 10:13 PM IST
‘ಸ್ಮಿತ್​ರನ್ನು ಚೀಟರ್ ಎಂದು ಕರೆಯಬೇಡಿ’; ಮೈದಾನದಿಂದಲೇ ಅಭಿಮಾನಿಗಳಿಗೆ ತಿಳಿ ಹೇಳಿದ ಕೊಹ್ಲಿ
ಸ್ಟೀವ್ ಸ್ಮಿತ್ ಹಾಗೂ ವಿರಾಟ್ ಕೊಹ್ಲಿ
  • News18
  • Last Updated: June 9, 2019, 10:13 PM IST
  • Share this:
ಬೆಂಗಳೂರು (ಜೂ. 09): ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾಕ್ಕೆ ಗೆಲ್ಲಲು 353 ರನ್​ಗಳ ಬೃಹತ್ ಟಾರ್ಗೆಟ್ ನೀಡಿದೆ. ಸದ್ಯ ಈ ಗುರಿ ಬೆನ್ನಟ್ಟಿರುವ ಕಾಂಗರೂ ಪಡೆ ಗೆಲುವಿಗಾಗಿ ಕಠಿಣ ಹೋರಾಟ ನಡೆಸುತ್ತಿದೆ.

ಈ ಮಧ್ಯೆ ಚೆಂಡು ವಿರೂಪ ಪ್ರಕರಣದಿಂದ ಒಂದು ವರ್ಷ ನಿಷೇಧ ಅನುಭವಿಸಿ ವಿಶ್ವಕಪ್​ನಲ್ಲಿ ಕಮ್​​ಬ್ಯಾಕ್ ಮಾಡಿರುವ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್​​​ಗೆ ಅಭಿಮಾನಿಗಳು ಬೆಂಬಿಡದೆ ಕಾಡುತ್ತಿದ್ದಾರೆ. ಪ್ರತಿ ಪಂದ್ಯದಲ್ಲಿ ಇವರಿಬ್ಬರು ಕಣಕ್ಕಿಳಿಯುವಾಗ ಇಂಗ್ಲೆಂಡ್​ನಲ್ಲಿ ಅಭಿಮಾನಿಗಳು ಮೊಸಗಾರ ಚೀಟರ್ ಎಂದು ಕರೆದು ಕೆಣಕುತ್ತಿದ್ದಾರೆ.

ಇದೇರೀತಿ ಇಂದಿನ ಭಾರತ ವಿರುದ್ಧದ ಪಂದ್ಯದಲ್ಲೂ ನಡೆದಿದೆ. ಆದರೆ, ಈ ಸಂದರ್ಭ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆರೀತಿ ಕರೆಯಬೇಡಿ, ಚೀಟರ್ ಹೇಳುವುದನ್ನು ನಿಲ್ಲಿಸಿ, ನಮ್ಮನ್ನ(ಭಾರತೀಯರನ್ನು) ಪ್ರೋತ್ಸಾಹಿಸಿ ಎಂದು ಕೈ ಸನ್ನೆ ಮೂಲಕ ಅಭಿಮಾನಿಗಳಿಸಿ ತಿಳಿಸಿದ್ದಾರೆ. ಕೊಹ್ಲಿ ಅವರ ಈ ಕ್ರೀಡಾ ಸ್ಫೂರ್ತಿ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ ಸ್ಟೀವ್ ಸ್ಮಿತ್ ಅವರು ಕೊಹ್ಲಿಗೆ ಹಸ್ತಲಾಘವ ಮಾಡುವ ಮೂಲಕ ಧನ್ಯವಾದ ಅರ್ಪಿಸಿದರು.

Cricket World Cup 2019, IND vs AUS: 353 ಟಾರ್ಗೆಟ್; ಆಸೀಸ್​ನ ಪ್ರಮುಖ ವಿಕೆಟ್ ಕಿತ್ತ ಚಹಾಲ್

  

ಕಳೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲೂ ಸ್ಮಿತ್ ಹಾಗೂ ವಾರ್ನರ್ ಇದೇರೀತಿಯ ಅವಮಾನ ಅನುಭವಿಸಿದ್ದರು. ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಇಬ್ಬರು ಪ್ರೇಕ್ಷಕರು ಉಪ್ಪಿನಕಾಗದ ಮಾದರಿಯ ಬಟ್ಟೆಯನ್ನು ಧರಿಸಿ, ಕ್ರಿಕೆಟ್​ ಚೆಂಡಿನಂತಿರುವುದನ್ನು ಹಿಡಿದು ಅಣಕಿಸಿದ್ದರು.

 2018ರಲ್ಲಿ ಆಸ್ಟೇಲಿಯಾದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆಸಿಸ್​ನ ಮೂವರು ಆಟಗಾರರು ಬಾಲ್​ನ ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ಅದರಲ್ಲಿ ಪ್ರಮುಖವಾಗಿ ಸ್ಮಿತ್​ ಹಾಗೂ ವಾರ್ನರ್​ಗೆ ಒಂದು ವರ್ಷ ನಿಷೇಧ ಹೇರಲಾಗಿತ್ತು. ಈಗ ಈ ಶಿಕ್ಷೆಯನ್ನ ಮುಗಿಸಿ ವಾಪಾಸ್​ ಆಗಿರುವ ಸ್ಮಿತ್​ ಹಾಗೂ ವಾರ್ನರ್​ ಅವರನ್ನೇ ಇಂಗ್ಲೆಂಡ್​ ಅಭಿಮಾನಿಗಳು​ ಚೀಟ್​ ಎಂದು ಕೂಗಿ ಕೆಣಕುತ್ತಿದ್ದಾರೆ.

First published: June 9, 2019, 10:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading