IND vs AUS: ಅಂಪೈರ್ ಔಟ್ ಕೊಡದೆ ಇದ್ದರೂ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ ಪಂತ್; ಶಾಕ್ ಆದ ಅಭಿಮಾನಿಗಳು

Rishabh Pant: ಅಂಪೈರ್ ಗೊಂದಲದಲ್ಲಿರಾವಗಲೆ ಪಂತ್ ಕ್ರೀಸ್ ಬಿಟ್ಟು ಪೆವಿಲಿಯನ್ ಕಡೆ ಹೆಜ್ಜೆಹಾಕಿದರು. ಇದನ್ನ ಕಂಡ ಅಭಿಮಾನಿಗಳು ಒಮ್ಮೆ ಶಾಕ್ ಆದರು. ಅಂಪೈರ್ ಔಟ್ ಕೊಡದಿದ್ದರು ಪಂತ್ ಯಾಕೆ ಔಟ್ ಎಂದು ನಿರ್ಗಮಿಸುತ್ತಿದ್ದಾರೆಂದು ಅಂದುಕೊಂಡರು.

Vinay Bhat | news18-kannada
Updated:January 15, 2020, 10:40 AM IST
IND vs AUS: ಅಂಪೈರ್ ಔಟ್ ಕೊಡದೆ ಇದ್ದರೂ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ ಪಂತ್; ಶಾಕ್ ಆದ ಅಭಿಮಾನಿಗಳು
ರಿಷಭ್ ಪಂತ್ ಔಟ್ ಆದ ಕ್ಷಣ
  • Share this:
ಮುಂಬೈ (ಜ. 15): ನಿನ್ನೆ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಹೀನಾಯ ಸೋಲುಕಂಡಿತು. ಒಂದೇ ಒಂದು ವಿಕೆಟ್ ಕಳೆದುಕೊಳ್ಳದೆ ಆಸ್ಟ್ರೇಲಿಯಾ ದಾಖಲೆಯ ಜಯ ಸಾಧಿಸಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಮೊದಲು ಬ್ಯಾಟ್ ಮಾಡಿದ ಭಾರತ ಆರಂಭದಲ್ಲೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತಾದರೂ, ಶಿಖರ್ ಧವನ್ ಹಾಗೂ ಕೆ ಎಲ್ ರಾಹುಲ್ ಶತಕದ ಜೊತೆಯಾಟ ತಂಡಕ್ಕೆ ನೆರವಾಯಿತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಮತ್ತೆ ವೈಫಲ್ಯ ಅನುಭವಿಸಿದ ಕೊಹ್ಲಿ ಪಡೆ 255 ರನ್​ಗೆ ಆಲೌಟ್ ಆಯಿತು.

Rishabh Pant Loses His Wicket In The Most Unluckiest Manner In The 1st ODI
ರಿಷಭ್ ಪಂತ್ ಔಟ್ ಆಗಿ ಪೆವಿಲಿಯನ್ ಕಡೆ ನಡೆಯುತ್ತಿರುವುದು.


Hardik Pandya: ಫಿಟ್​ನೆಸ್​​ ಟೆಸ್ಟ್​ನಲ್ಲಿ ಫೇಲ್; ಭಾವಿ ಹೆಂಡತಿ ಜೊತೆ ಬೀಚ್​ನಲ್ಲಿ ಹಾರ್ದಿಕ್ ಹಾಟ್ ಪೋಸ್

ಭಾರತದ ಮೊತ್ತ 250ರ ಗಡಿ ದಾಟಲು ಪ್ರಮುಖ ಕಾರಣ ಧವನ್ – ರಾಹುಲ್ ಒಂದು ಕಡೆಯಾದರೆ, ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಅವರ 49 ರನ್​ಗಳ ಕಾಣಿಕೆ ಕೂಡ ಮುಖ್ಯವಾಯಿತು. ಜಡೇಜಾ ನಿರ್ಗಮನದ ಬಳಿಕ ಪಂದ್ಯ ಮುಗಿಸುವ ಜವಾಬ್ದಾರಿ ಹೊತ್ತಿದ್ದು ರಿಷಭ್ ಪಂತ್.

ಆದರೆ, ಪಂತ್ 33 ಎಸೆತಗಳಲ್ಲಿ 28 ರನ್ ಬಾರಿಸಿ ಔಟ್ ಆದರು. ಈ ನಡುವೆ ಪಂತ್ ಔಟ್ ಆದ ವಿಡಿಯೋ ಒಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. 44ನೇ ಓವರ್​ನ ಪ್ಯಾಟ್ ಕಮಿನ್ಸ್​ ಅವರ ಬೌನ್ಸರ್ ಬಾಲ್​​ಗೆ ಪಂತ್ ಹೊಡೆಯಲು ಪ್ರಯತ್ನಿಸಿದರು.

ಚೆಂಡು ಪಂತ್ ಅವರ ಹೆಲ್ಮೆಟ್​ಗೆ ತಾಗಿ ಫೀಲ್ಡರ್ ಆಸ್ಟನ್ ಟರ್ನರ್ ಕೈ ಸೇರಿತು. ಆಸೀಸ್ ಆಟಗಾರರು ಔಟ್ ಎಂದು ಸಂಭ್ರಮಿಸಿದರು. ಆದರೆ, ಅಂಪೈರ್ ಶಂಸುದ್ದಿನ್ ಅವರು ಇದು ಔಟ್ ಅಲ್ಲ ಎಂಬಂತೆ ಇದ್ದರು. ಯಾವುದೇ ತೀರ್ಪನ್ನು ನೀಡಲಿಲ್ಲ.

ಇತ್ತ ಅಂಪೈರ್ ಗೊಂದಲದಲ್ಲಿರಾವಗಲೆ ಪಂತ್ ಕ್ರೀಸ್ ಬಿಟ್ಟು ಪೆವಿಲಿಯನ್ ಕಡೆ ಹೆಜ್ಜೆಹಾಕಿದರು. ಇದನ್ನ ಕಂಡ ಅಭಿಮಾನಿಗಳು ಒಮ್ಮೆ ಶಾಕ್ ಆದರು. ಅಂಪೈರ್ ಔಟ್ ಕೊಡದಿದ್ದರು ಪಂತ್ ಯಾಕೆ ಔಟ್ ಎಂದು ನಿರ್ಗಮಿಸುತ್ತಿದ್ದಾರೆಂದು ಅಂದುಕೊಂಡರು.

ಅಸಲಿ ಸಂಗತಿ ಏನಾಗಿತ್ತೆಂದರೆ, ಚೆಂಡು ಪಂತ್ ಅವರ ಹೆಲ್ಮೆಟ್​ಗೆ ತಾಗುವ ಮೂದಲು ಬ್ಯಾಟ್​ನ ತುದಿಗೆ ಟಚ್ ಆಗಿತ್ತು. ಇದನ್ನು ಅಂಪೈರ್ ಸರಿಯಾಗಿ ಗಮನಿಸಿರಲಿಲ್ಲ. ಆದರೆ, ಪಂತ್​ಗೆ ಈ ಸಂಗತಿ ತಿಳಿದಿದ್ದ ಕಾರಣ ತಾನು ಔಟ್ ಎಂದು ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಸದ್ಯ ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

India vs Australia: ಕಳೆದ 15 ವರ್ಷಗಳಲ್ಲೇ ಅತ್ಯಂತ ಹೀನಾಯ ಪಂದ್ಯ..!

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 49.1 ಓವರ್​ನಲ್ಲಿ 255 ರನ್​ಗೆ ಸರ್ವಪತನ ಕಂಡಿತು. ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ಓಪನರ್​ಗಳಾದ ಡೇವಿಡ್ ವಾರ್ನರ್(128*) ಹಾಗೂ ಆ್ಯರೋನ್ ಫಿಂಚ್(110*) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ 37.4 ಓವರ್​ನಲ್ಲೇ ಗುರಿ ಮುಟ್ಟಿ 10 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು.







Published by: Vinay Bhat
First published: January 15, 2020, 10:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading