ಭಾರತ- ಆಸ್ಟ್ರೇಲಿಯಾ ಸರಣಿ ಅನುಮಾನ?; ಕಾಂಗರೂಗಳ ನಾಡಿಂದಲೇ ಕೇಳಿಬರುತ್ತಿದೆ ಅಪಸ್ವರ

ಸದ್ಯ ಈ ಕದನಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಅಧ್ಯಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಯಾಣ ನಿರ್ಬಂಧ ಹಾಗೂ ನಿಯಮಾನುಸಾರದಲ್ಲಿ ಬದಲಾವಣೆ ಸಂಭವಿಸಲಿದೆ ಎಂಬುದಾಗಿ ಕ್ರಿಕೆಟ್‌ ಆಸ್ಟ್ರೇಲಿಯದ ಸಿಎಒ ಕೆವಿನ್‌ ರಾಬರ್ಟ್ಸ್ ಹೇಳಿದ್ದಾರೆ.

news18-kannada
Updated:May 30, 2020, 9:36 AM IST
ಭಾರತ- ಆಸ್ಟ್ರೇಲಿಯಾ ಸರಣಿ ಅನುಮಾನ?; ಕಾಂಗರೂಗಳ ನಾಡಿಂದಲೇ ಕೇಳಿಬರುತ್ತಿದೆ ಅಪಸ್ವರ
ಆಸ್ಟ್ರೇಲಿಯಾ ನಾಯಕ ಟಿಮ್ ಪೇಯ್ನ್ ಹಾಗೂ ಭಾರತ ನಾಯಕ ವಿರಾಟ್ ಕೊಹ್ಲಿ
  • Share this:
ಇತ್ತೀಚೆಗಷ್ಟೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಈ ವರ್ಷದ ಕೊನೆಯಲ್ಲಿ ಭಾರತ ವಿರುದ್ಧ ಟೆಸ್ಟ್ ಕ್ರಿಕೆಟ್ ಆಡುವುದಾಗಿ ತಿಳಿದಿತ್ತು. ಬಾರ್ಡನ್- ಗವಾಸ್ಕರ್ ಸರಣಿಗಾಗಿ ವರ್ಷಾಂತ್ಯದಲ್ಲಿ ಕಾಂಗರೂಗಳ ನಾಡಿಗೆ ತೆರಳಲಿರುವ ಭಾರತ ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿಯನ್ನು ಆಡಲಿದೆ ಎಂದೇ ಹೇಳಳಾಗಿತ್ತು.

ಅಲ್ಲದೆ ಭಾರತ- ಆಸ್ಟ್ರೇಲಿಯಾ ನಡುವಣ ಟೆಸ್ಟ್​ ಸರಣಿಯ ವೇಳಾಪಟ್ಟಿ ಕೂಡ ಪ್ರಕಟವಾಗಿತ್ತು. ಡಿಸೆಂಬರ್ 3 ರಂದು ಬ್ರಿಸ್ಬೇನ್​ನಲ್ಲಿ ಮೊದಲ ಟೆಸ್ಟ್​ ಆರಂಭವಾದರೆ 2021 ಜನವರಿ 7ಕ್ಕೆ ಆಸ್ಟ್ರೇಲಿಯಾ ಪ್ರವಾಸವನ್ನು ಭಾರತ ಅಂತ್ಯಗೊಳಿಸಲಿದೆ.

4 ಶತಕ, 973 ರನ್: ಕೊನೆಯ 6 ಎಸೆತಗಳಲ್ಲಿ ಕೋಟಿ ಅಭಿಮಾನಿಗಳ ಕನಸು ನುಚ್ಚು ನೂರಾಯಿತು..!

ಡಿ. 3 ರಿಂದ 7ರ ವರೆಗೆ ಬ್ರಿಸ್ಬೇನ್ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್​ ನಡೆದರೆ, ಡಿ. 11 ರಿಂದ 15ರ ತನಕ ಅಡಿಲೇಡ್​ನಲ್ಲಿ ಎರಡನೇ ಪಂದ್ಯ ಆಯೋಜಿಸಲಾಗಿದೆ. ವಿಶೇಷ ಎಂದರೆ ಎರಡನೇ ಟೆಸ್ಟ್ ಡೇ ನೈಟ್​ ಪಂದ್ಯವಾಗಲಿದ್ದು, ಪಿಂಕ್​ ಬಾಲ್​ನಲ್ಲಿ ರೋಚಕ ಕದನ ನಿರೀಕ್ಷಿಸಲಾಗಿದೆ. ಇನ್ನೂ ಡಿಸೆಂಬರ್ 26 ರಿಂದ ಮೆಲ್ಬೋರ್ನ್​ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್​​ ಆರಂಭವಾದರೆ, ಅಂತಿಮ ನಾಲ್ಕನೇ ಟೆಸ್ಟ್​ ಜನವರಿ 3 ರಿಂದ ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ಆಯೋಜಿಸಲಾಗಿತ್ತು.

ಆದರೆ, ಸದ್ಯ ಈ ಕದನಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಅಧ್ಯಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಯಾಣ ನಿರ್ಬಂಧ ಹಾಗೂ ನಿಯಮಾನುಸಾರದಲ್ಲಿ ಬದಲಾವಣೆ ಸಂಭವಿಸಲಿದೆ ಎಂಬುದಾಗಿ ಕ್ರಿಕೆಟ್‌ ಆಸ್ಟ್ರೇಲಿಯದ ಸಿಎಒ ಕೆವಿನ್‌ ರಾಬರ್ಟ್ಸ್ ಹೇಳಿದ್ದಾರೆ.

ಬಿಸಿಸಿಐ ಬಿಗ್ ಪ್ಲ್ಯಾನ್: ಕನ್ನಡಿಗನಿಗೆ ಒಲಿಯಲಿದೆಯಾ ಟೀಮ್ ಇಂಡಿಯಾ ನಾಯಕತ್ವ?

ಸರಣಿಯ ವೇಳಾಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ವೆಸ್ಟರ್ನ್ ಆಸ್ಟ್ರೇಲಿಯ ಕ್ರಿಕೆಟ್‌ ಮಂಡಳಿಯ ಅಧ್ಯಕ್ಷ ಕ್ರಿಸ್ಟಿನ ಮ್ಯಾಥ್ಯೂಸ್‌ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತದೆದುರಿನ ಟೆಸ್ಟ್ ಪಂದ್ಯಕ್ಕೆ ಬಿಸ್ಬೇನ್​ಗಿಂತ ಪರ್ತ್ ಸೂಕ್ತವಾದ ಅಂಗಳವಾಗಿತ್ತು ಎಂಬುದು ಅವರವಾದವಾಗಿದೆ. ಆದರೆ, 2 ವರ್ಷಗಳ ಹಿಂದೆ ಭಾರತ ತಂಡ ಆಸ್ಟ್ರೇಲಿಯ ಪ್ರವಾಸ ಕೈಗೊಂಡಾಗ ಬ್ರಿಸ್ಬೇನ್​ ಟೆಸ್ಟ್ ಆತಿಥ್ಯ ವಹಿಸಿರಲಿಲ್ಲ. ಇದನ್ನು ಸರಿದೂಗಿಸಲು ಈ ಬಾರಿ ಬ್ರಿಸ್ಬೇನ್​ಗೆ ಅವಕಾಶ ನೀಡಲಾಯಿತು ಎಂದು ಕ್ರಿಕೆಟ್ ಆಸ್ಟ್ರೇಲಿಯ ಸ್ಪಷ್ಟಪಡಿಸಿದೆ.
First published: May 30, 2020, 9:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading