HOME » NEWS » Sports » CRICKET INDIA VS AUSTRALIA TEST DAY 2 HOT SPOT SHOWS MARK ON VIRAT KOHLI GLOVE TIM PAINE MISS A TRICK BY NOT TAKING DRS VB

India vs Australia: 16 ರನ್ ಗಳಿಸಿದ್ದಾಗಲೇ ಔಟ್ ಆಗಿದ್ದ ವಿರಾಟ್ ಕೊಹ್ಲಿ: ಇಲ್ಲಿದೆ ನೀವು ಗಮನಿಸದ ವಿಡಿಯೋ

ಸ್ಪಿನ್ನರ್ ನೇಥನ್ ಲ್ಯಾನ್ ಬೌಲಿಂಗ್​ನಲ್ಲಿ ಚೆಂಡು ಟರ್ನ್ ಆಗಿ ಲೆಗ್ ಸ್ಟಂಪ್ ಬಂದಿದ್ದನ್ನು ವಿರಾಟ್ ಕೊಹ್ಲಿ ಲೆಗ್ ಸೈಡ್​ಗೆ ಅಟ್ಟಲು ಯತ್ನಿಸಿದರು. ಆದರೆ, ವಿಫಲವಾಗಿ ಚೆಂಡು ಕೀಪರ್ ಟಿಮ್ ಪೈನ್ ಕೈ ಸೇರಿತು.

news18-kannada
Updated:December 18, 2020, 12:50 PM IST
India vs Australia: 16 ರನ್ ಗಳಿಸಿದ್ದಾಗಲೇ ಔಟ್ ಆಗಿದ್ದ ವಿರಾಟ್ ಕೊಹ್ಲಿ: ಇಲ್ಲಿದೆ ನೀವು ಗಮನಿಸದ ವಿಡಿಯೋ
Virat Kohli
  • Share this:
ಅಡಿಲೇಡ್​ ಓವಲ್ ಮೈದಾನದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಮೊದಲ ಡೇ- ನೈಟ್ ಟೆಸ್ಟ್​ ಪಂದ್ಯ ಸಾಗುತ್ತಿದೆ. ಮೊದಲು ಬ್ಯಾಟ್ ಮಾಡಿರುವ ಟೀಂ ಇಂಡಿಯಾ 244 ರನ್​ಗೆ ಆಲೌಟ್ ಆಗುವ ಮೂಲಕ ತನ್ನ ಮೊದಲ ಇನ್ನಿಂಗ್ಸ್​ ಮುಗಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ಆರಂಭದಲ್ಲೇ ಆಘಾತ ಅನುಭವಿಸಿದ್ದ ಭಾರತಕ್ಕೆ ಆಸರೆಯಾಗಿದ್ದು ನಾಯಕ ವಿರಾಟ್ ಕೊಹ್ಲಿ. ಚೇತೇಶ್ವರ್ ಪೂಜಾರ ಜೊತೆಗೂಡಿ 68 ರನ್​ಗಳ ಜೊತೆಯಾಟ ಆಡಿದರೆ, ನಂತರ ಉಪ ನಾಯಕ ಅಜಿಂಕ್ಯಾ ರಹಾನೆ ಜೊತೆ 88 ರನ್​ಗಳ ಕಾಣಿಕೆ ನೀಡಿದರು. ಈ ಮೂಲಕ ತಂಡವನ್ನು ಅಪಾಯದಿಂದ ಪಾರುಮಾಡಿದರು.

ಅಲ್ಲದೆ ಕೊಹ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ 22ನೇ ಅರ್ಧಶತಕ ಬಾರಿಸಿ ತಂಡದ ಮೊತ್ತ 200ರ ಗಡಿ ದಾಟಲು ಪ್ರಮುಖ ಕಾರಣರಾದರು. ಆದರೆ, ಶತಕ ಗಳಿಸುವ ಅಂದಾಜಿನಲ್ಲಿದ್ದ ಕೊಹ್ಲಿ ಅನಿರೀಕ್ಷಿತ ರನೌಟ್​ಗೆ ಬಲಿಯಾಗಬೇಕಾಯಿತು. 180 ಎಸೆತಗಳಲ್ಲಿ 8 ಬೌಂಡರಿಯೊಂದಿಗೆ 74 ರನ್ ಗಳಿಸಿ ಕೊಹ್ಲಿ ಔಟ್ ಆದರು. ಅಚ್ಚರಿ ಎಂದರೆ ಕೊಹ್ಲಿ ಕ್ರೀಸ್​ಗೆ ಬಂದು 16 ರನ್ ಗಳಿಸಿರುವಾಗಲೇ ಔಟ್ ಆಗಿದ್ದರು ಎಂಬುದು.

IND vs AUS Live Score, 1st Test

ಹೌದು, ಸ್ಪಿನ್ನರ್ ನೇಥನ್ ಲ್ಯಾನ್ ಬೌಲಿಂಗ್​ನಲ್ಲಿ ಚೆಂಡು ಟರ್ನ್ ಆಗಿ ಲೆಗ್ ಸ್ಟಂಪ್ ಬಂದಿದ್ದನ್ನು ವಿರಾಟ್ ಕೊಹ್ಲಿ ಲೆಗ್ ಸೈಡ್​ಗೆ ಅಟ್ಟಲು ಯತ್ನಿಸಿದರು. ಆದರೆ, ವಿಫಲವಾಗಿ ಚೆಂಡು ಕೀಪರ್ ಟಿಮ್ ಪೈನ್ ಕೈ ಸೇರಿತು. ಬೌಲರ್ ಸೇರಿ ಆಸ್ಟ್ರೇಲಿಯಾ ಆಟಗಾರರು ಔಟ್​ಗಾಗಿ ಮನವಿ ಮಾಡಿದರು. ಆದರೆ, ಅಂಪೈರ್ ಔಟ್ ಕೊಡಲಿಲ್ಲ.

ಇತ್ತ ಆಸ್ಟ್ರೇಲಿಯಾಕ್ಕೆ ಡಿಆರ್​ಎಸ್ ಅವಕಾಶ ಇತ್ತಾದರೂ ನಾಯಕ ಟಿಮ್ ಪೈನ್ ಥರ್ಡ್​ ಅಂಪೈರ್ ಮೊರೆ ಹೋಗಲಿಲ್ಲ. ಬಳಿಕ ಹಾಟ್ ಸ್ಪಾಟ್​ನಲ್ಲಿ ವೀಕ್ಷಿಸಿದಾಗ ಕೊಹ್ಲಿ ಗ್ಲೌಸ್​ಗೆ ಚೆಂಡು ಸರಿಯಾಗಿ ತಾಗಿರುವುದು ಕಂಡುಬಂದಿದೆ. ಆಸ್ಟ್ರೇಲಿಯಾ ಡಿಆರ್​ಎಸ್ ತೆಗೆದುಕೊಂಡಿದ್ದೇ ಆದಲ್ಲಿ ಕೊಹ್ಲಿ ಆಗಲೇ ಪೆವಿಲಿಯನ್ ಸೇರಿಕೊಳ್ಳಬೇಕಿತ್ತು.

ಪ್ರಥಮ ಟೆಸ್ಟ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಾಯಕ ವಿರಾಟ್ ಕೊಹ್ಲಿ ಅವರ 74 ರನ್, ಚೇತೇಶ್ವರ್ ಪೂಜಾರ 43 ಹಾಗೂ ಉಪ ನಾಯಕ ಅಜಿಂಕ್ಯಾ ರಹಾನೆaವರ 42 ರನ್​ಗಳ ನೆರವಿನಿಂದ ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 233 ರನ್ ಗಳಿಸಿತ್ತು.

India vs Australia: ಭಾರತ-ಆಸ್ಟ್ರೇಲಿಯಾ ಪ್ರಥಮ ಟೆಸ್ಟ್​ನ ಮೊದಲ ದಿನದಾಟದ ರೋಚಕ ಕ್ಷಣಗಳು

300 ರನ್​ಗಳ ಗುರಿ ಇಟ್ಟು ಎರಡನೇ ದಿನದಾಟ ಆರಂಭಿಸಿದ ಭಾರತ ಇಂದು 11 ರನ್ ಗಳಿಸಲಷ್ಟೇ ಶಕ್ತವಾಯಿತು. 2ನೇ ದಿನದಾಟದ ಮೊದಲ ಓವರ್​ನಲ್ಲೇ ಭಾರತ ಆಘಾತ ಅನುಭವಿಸಿತು. 15 ರನ್ ಗಳಿಸಿದ್ದ ಆರ್. ಅಶ್ವಿನ್ ಆರಂಭದಲ್ಲೇ ಔಟ್ ಆದರೆ, ವೃದ್ದಿಮಾನ್ ಸಾಹ ಕೂಡ 9 ರನ್​ಗೆ ಪೆವಿಲಿಯನ್ ಸೇರಿಕೊಂಡರು. ಉಮೇಶ್ ಯಾದವ್ 6 ಹಾಗೂ ಮೊಹಮ್ಮದ್ ಶಮಿ ಶೂನ್ಯಕ್ಕೆ ಔಟ್ ಆಗುವ ಮೂಲಕ ಭಾರತ 244 ರನ್​ಗೆ ಸರ್ವಪತನ ಕಂಡಿತು.
Published by: Vinay Bhat
First published: December 18, 2020, 12:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories