ಕೊಹ್ಲಿ ಇಲ್ಲಾಂದ್ರು ನೋ ಟೆನ್ಷನ್: ಟೀಂ ಇಂಡಿಯಾದಲ್ಲಿ ನಾಯಕನಾಗಲು 3-4 ಆಟಗಾರರಿದ್ದಾರೆ: ವಾರ್ನರ್

ಭಾರತ ತಂಡದಲ್ಲಿ ಯಾವುದೇ ಸಮಯದಲ್ಲಿ ನಾಯಕತ್ವಕ್ಕೆ ಅರ್ಹರಾಗಿರುವ ಆಟಗಾರರು ಮೂರರಿಂದ ನಾಲ್ಕು ಜನರಿದ್ದಾರೆ" ಎಂದು ವಾರ್ನರ್ ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ - ಡೇವಿಡ್ ವಾರ್ನರ್.

ವಿರಾಟ್ ಕೊಹ್ಲಿ - ಡೇವಿಡ್ ವಾರ್ನರ್.

 • Share this:
  ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳುವ ಮುನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಘಾತಕಾರಿ ಸುದ್ದಿಯೊಂದನ್ನ ನೀಡಿತು. ಬಹುನಿರೀಕ್ಷಿತ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದ ಬಳಿಕ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಲಭ್ಯರಿಲ್ಲ ಎಂಬ ಮಾಹಿತಿ ಹೊರಹಾಕಿತ್ತು. ಹೀಗಾಗಿ ಎರಡನೇ ಟೆಸ್ಟ್​ನಿಂದ ಭಾರತ ತಂಡವನ್ನು ನಾಯಕನಾಗಿ ಅಜಿಂಕ್ಯಾ ರಹಾನೆ ಮುಂದುವರೆಸಲಿದ್ದಾರೆ ಎಂದು ಪ್ರಕಣೆಯಲ್ಲಿ ತಿಳಿಸಿತ್ತು. ಭಾರತಕ್ಕೆ ಇದು ದೊಡ್ಡ ಹಿನ್ನಡೆಯಾದರೆ, ಇತ್ತ ಕಾಂಗರೂ ಪಡೆ ಕೊಹ್ಲಿ ಅಲಭ್ಯತೆಯನ್ನು ಉತ್ತಮ ರೀತಿಯಲ್ಲಿ ಉಪಯೋಗಿಸುವ ಪ್ಲ್ಯಾನ್ ಮಾಡಿದೆ.

  ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಒಟ್ಟು 4 ಪಂದ್ಯಗಳ ಐದು ದಿನಗಳ ಟೆಸ್ಟ್​ ಸರಣಿ ಆಡಲಿದೆ. ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಡಿಸೆಂಬರ್ 17 ರಿಂದ ಆರಂಭವಾಗಲಿದೆ. ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಹೊನಲು ಬೆಳಕಿನಲ್ಲಿ ನಡೆಯಲಿರುವುದು ವಿಶೇಷ. ಈ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಭಾರತಕ್ಕೆ ಹಿಂದಿರುಗಲಿದ್ದಾರೆ.

  ಕೊಹ್ಲಿ ಸ್ಫೋಟಕ: ಕೆ. ಎಲ್ ರಾಹುಲ್ ತಂಡದ ವಿರುದ್ಧ ವಿರಾಟ್ ಬಳಗಕ್ಕೆ ಭರ್ಜರಿ ಜಯ: ಇಲ್ಲಿದೆ ಸ್ಕೋರ್

  2021ರ ಜನವರಿಯಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕೊಹ್ಲಿ ಅವರು ಪತ್ನಿ ಅನುಷ್ಕಾ ಶರ್ಮಾ ಜೊತೆ ಇರಲು ಬಯಸಿರುವುದರಿಂದ ಬಿಸಿಸಿಐ ಪಿತೃತ್ವ ರಜೆಯ ಅವಕಾಶ ನೀಡಿದೆ. ಕೊಹ್ಲಿ ಅವರು ಮೊದಲ ಟೆಸ್ಟ್​ ನಂತರ ಭಾರತಕ್ಕೆ ವಾಪಸ್ ಬರಲು ಅವಕಾಶ ನೀಡುವಂತೆ ಕೋರಿದ್ದರು. ಇದನ್ನು ಬಿಸಿಸಿಐ ಮಾನ್ಯ ಮಾಡಿದೆ. ಹೀಗಾಗಿ 4 ಪಂದ್ಯಗಳ ಟೆಸ್ಟ್ ಸರಣಿ ಪೈಕಿ ಕೊಹ್ಲಿ ಕೇವಲ ಒಂದು ಪಂದ್ಯವನ್ನಾಡಲಿದ್ದು, ಇನ್ನುಳಿದ ಮೂರು ಟೆಸ್ಟ್ ಪಂದ್ಯಗಳಿಂದ ವಂಚಿತರಾಗಲಿದ್ದಾರೆ.

  ಈ ಕಾರಣಕ್ಕೆ ಭಾರತ ತಂಡವನ್ನು ರಹಾನೆ ಮುನ್ನಡೆಸಲಿದ್ದಾರೆ. ಸದ್ಯ ಈ ವಿಚಾರವಾಗಿ ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಡೇವಿಡ್ ವಾರ್ನರ್ ಮಾತನಾಡಿದ್ದಾರೆ. ಕೊಹ್ಲಿಗೆ ಹೋಲಿಕೆ ಮಾಡಿದರೆ ರಹಾನೆ ನಾಯಕತ್ವ ವಿಭಿನ್ನವಾಗಿದೆ ಎಂದಿದ್ದಾರೆ.

  "ರಹಾನೆ ಅವರದ್ದು ಶಾಂತ ಸ್ವಾಭಾವದ ವ್ಯಕ್ತಿತ್ವ. ಮತ್ತು ಯೋಚನೆ ಮಾಡಿ ಪ್ರತಿಯೊಂದು ನಿರ್ಧಾರ ತೆಗೆದುಕೊಳ್ಳುತ್ತಾರೆ. ಹಾಗೆ ನೋಡಿದರೆ ಭಾರತ ತಂಡದಲ್ಲಿ ಯಾವುದೇ ಸಮಯದಲ್ಲಿ ನಾಯಕತ್ವಕ್ಕೆ ಅರ್ಹರಾಗಿರುವ ಆಟಗಾರರು ಮೂರರಿಂದ ನಾಲ್ಕು ಜನರಿದ್ದಾರೆ" ಎಂದು ವಾರ್ನರ್ ಎಂದು ಹೇಳಿದ್ದಾರೆ.

  India vs Australia: ಕಾಂಗರೂಗಳ ನಾಡಿನಲ್ಲಿ ಅಬ್ಬರಿಸಲಿರುವ ಭಾರತದ 4 ಆಟಗಾರರು ಇವರೇ ನೋಡಿ

  ಟೀಂ ಇಂಡಿಯಾ ಮೂರು ತಿಂಗಳ ದೀರ್ಘಕಾಲಿಕ ಆಸ್ಟ್ರೇಲಿಯಾ ಪ್ರವಾಸಕ್ಕೆ ಸಜ್ಜಾಗಿದೆ. ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಒಟ್ಟು 4 ಪಂದ್ಯಗಳ ಐದು ದಿನಗಳ ಟೆಸ್ಟ್​ ಸರಣಿ ಆಡಲಿದೆ. ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಡಿಸೆಂಬರ್ 17 ರಿಂದ ಆರಂಭವಾಗಲಿದೆ.

  ಎರಡನೇ ಟೆಸ್ಟ್ ಡಿಸೆಂಬರ್ 26 ರಿಂದ 30ರವರೆಗೆ ಮೆಲ್ಬೋರ್ನ್​ನಲ್ಲಿ, 3ನೇ ಟೆಸ್ಟ್ ಪಂದ್ಯ ಜನವರಿ 7 ರಿಂದ 11 ರವರೆಗೆ ಸಿಡ್ನಿ ಮೈದಾನದಲ್ಲಿ ಹಾಗೂ ಅಂತಿಮ ಟೆಸ್ಟ್​ ಬ್ರಿಸ್ಬೇನ್​ನಲ್ಲಿ ಜನವರಿ 15 ರಿಂದ 19 ರವರೆಗೆ ನಡೆಯಲಿದೆ. ಎರಡು ಹಾಗೂ ಮೂರನೇ ಟೆಸ್ಟ್ ಮುಂಜಾನೆ 5 ಗಂಟೆಗೆ ಶುರುವಾದರೆ, ಅಂತಿಮ ಟೆಸ್ಟ್​ 5:30ಕ್ಕೆ ಆರಂಭವಾಗಲಿದೆ.

  ಟೆಸ್ಟ್ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಮಾಯಾಂಕ್ ಅಗರ್ವಾಲ್, ಪೃಥ್ವಿ ಶಾ, ಕೆ.ಎಲ್ ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪ ನಾಯಕ), ಹನುಮ ವಿಹಾರಿ, ಶುಭ್​ಮನ್ ಗಿಲ್, ವೃದ್ಧಿಮಾನ್ ಸಾಹ, ರಿಷಭ್ ಪಂತ್, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ನವದೀಪ್ ಸೈನಿ, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಆರ್.ಅಶ್ವಿನ್, ಮೊಹಮ್ಮದ್ ಸಿರಾಜ್.
  Published by:Vinay Bhat
  First published: