IND vs AUS: ಹೀನಾಯ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾಕ್ಕೆ ಊಹಿಸಲಾಗದ ಮತ್ತೊಂದು ದೊಡ್ಡ ಆಘಾತ!

ತೀವ್ರವಾದ ನೋವಿನಿಂದ ಮೊಹಮ್ಮದ್ ಶಮಿ ಬಳಲುತ್ತಿರುವ ಕಾರಣ ಅವರು ಮುಂದಿನ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇವರ ಬದಲು ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಮೊಹಮ್ಮದ್ ಸಿರಾಜ್ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

Team India

Team India

 • Share this:
  ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲುಕಂಡಿತು. ಮೊದಲ ಇನ್ನಿಂಗ್ಸ್​ನಲ್ಲಿ ಕೊಹ್ಲಿ ಪಡೆಯ ಪ್ರದರ್ಶನ ಸಾಧಾರಣವಾಗಿದ್ದರೆ, 2ನೇ ಇನ್ನಿಂಗ್ಸ್​ನಲ್ಲಿ ಕೇವಲ 36 ರನ್​ಗೆ ಆಲೌಟ್ ಆಗುವ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ ಹಿಂದೆಂದೂ ಕಾಣದ ಅತ್ಯಂತ ಕಳಪೆ ಆಟವಾಡಿತು. ಈ ಸೋಲನ್ನು ಅರಗಿಸಿಕೊಳ್ಳುವ ಮುನ್ನವೇ ಟೀಂ ಇಂಡಿಯಾಕ್ಕೆ ಮತ್ತೊಂದು ದೊಡ್ಡ ಆಘಾತ ಉಂಟಾಗಿದೆ. ತಂಡದ ಪ್ರಮುಖ ಹಿರಿಯ ವೇಗಿ ಮೊಹಮ್ಮದ್ ಶಮಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಿಂದ ಹೊರಬಿದ್ದಿದ್ದಾರೆ. ಇದು ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದ್ದು ಸ್ಟಾರ್ ಬೌಲರ್ ಅನುಪಸ್ಥಿತಿ ಎದ್ದು ಕಾಣಲಿದೆ.

  ಭಾರತ ಬ್ಯಾಟಿಂಗ್​ನ ಎರಡನೇ ಇನ್ನಿಂಗ್ಸ್‌ನಲ್ಲಿ ಆಸೀಸ್ ವೇಗಿ ಪ್ಯಾಟ್ ಕಮ್ಮಿನ್ಸ್ ಎಸೆದ ಶಾರ್ಟ್ ಬಾಲ್​ ಶಮಿ ಅವರ ಮೊಣಕೈಗೆ ತಗುಲಿದ ಪರಿಣಾಮ ತೀವ್ರ ನೋವಿನಿಂದ ಮೈದಾನದಲ್ಲೇ ಕುಳಿತರು. ಅಲ್ಲೆ ಭಾರತದ ಫಿಸಿಯೋ ಬಂದರಾದರು ನೋವು ವಿಪರೀತವಾಗಿದ್ದ ಕಾರಣ ರಿಟೈರ್ಡ್ ಹರ್ಟ್ ಪಡೆದು ಮೈದಾನದಿಂದ ಹೊರ ನಡೆದರು.

  India vs Australia 1st Test: ಆಸ್ಟ್ರೇಲಿಯಾ ಬೌಲಿಂಗ್ ದಾಳಿಗೆ ನಡುಗಿದ ಭಾರತ: ಮೊದಲ ಟೆಸ್ಟ್​ನಲ್ಲಿ ಕಾಂಗರೂ ಪಡೆಗೆ ಜಯ

  ಪಂದ್ಯ ಮುಗಿದ ಬಳಿಕ ಮೊಹಮ್ಮದ್ ಶಮಿ ಸ್ಥಿತಿ ಬಗ್ಗೆ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ, 'ಶಮಿ ಕೈಗೆ ಚೆಂಡುಬಡಿದಿರುವ ಕಾರಣ ತೀವ್ರವಾದ ನೋವಿನಿಂದ ಬಳಲುತ್ತಿದ್ದಾರೆ. ಅವರಿಗೆ ಕೈಯನ್ನುಮೇಲಕ್ಕೆತ್ತಲು ಕೂಡಾ ಸಾಧ್ಯವಾಗುತ್ತಿಲ್ಲ. ಸದ್ಯ ಸ್ಕ್ಯಾನಿಂಗ್ ನಡೆಸಲಾಗಿದೆ. ಸಂಪೂರ್ಣ ಮಾಹಿತಿ ಸದ್ಯದಲ್ಲೆ ದೊರಕಲಿದೆ' ಎಂದು ಹೇಳಿಕೆ ನೀಡಿದ್ದರು.

  ತೀವ್ರವಾದ ನೋವಿನಿಂದ ಶಮಿ ಬಳಲುತ್ತಿರುವ ಕಾರಣ ಅವರು ಮುಂದಿನ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇವರ ಬದಲು ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಮೊಹಮ್ಮದ್ ಸಿರಾಜ್ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

  ಇನ್ನೂ ಹೀನಾಯ ಸೋಲಿನ ಬಳಿಕ ಮಾತನಾಡಿರುವ ವಿರಾಟ್, "ಸೋಲಿನ ಭಾವನೆಯನ್ನು ಪದಗಳಲ್ಲಿ ಹೇಳುವುದು ತುಂಬಾ ಕಷ್ಟ. ನಾವು 60 ರನ್​ಗಳ ಮುನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ್ರೂ, ಕೇವಲ 36 ರನ್​ ಗಳಿಗೆ ಪತನ ಕಂಡಿದ್ದು ಬೇಸರದ ಸಂಗತಿಯಾಗಿದೆ. ನಮ್ಮ ಬ್ಯಾಟಿಂಗ್​ನಲ್ಲಿ ತೀಕ್ಷ್ಣತೆ ಇಲ್ಲದಿರುವುದೇ ಮುಖ್ಯ ಕಾರಣ. ವಿವಿಧ ಹಂತಗಳಲ್ಲಿ ಏನು ಮಾಡಬೇಕೆಂಬುದನ್ನು ಅರ್ಥಮಾಡಿಕೊಳ್ಳಲು ನಾವು ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಆದರೆ ಮೈದಾನದಲ್ಲಿ ಉತ್ತಮ ಪ್ರದರ್ಶನ ತೋರಲು ಆಗಲಿಲ್ಲ" ಎಂದಿದ್ದಾರೆ.

  ಇತ್ತ ವಿರಾಟ್ ಕೊಹ್ಲಿ ಕೂಡ ಪಿತೃತ್ವ ರಜೆ ಮೇಲೆ ಇಂದು ಅಥವಾ ನಾಳೆ ಭಾರತಕ್ಕೆ ವಾಪಾಸ್ ಆಗಲಿದ್ದಾರೆ. ಇವರು ಕೂಡ ಮುಂದಿನ ಟೆಸ್ಟ್​ಗೆ ಅಲಭ್ಯರಿಲ್ಲ. ರೋಹಿತ್ ಶರ್ಮಾ ಆಸ್ಟ್ರೇಲಿಯಾ ತಲುಪಿದ್ದಾರೆ ಆದರೂ ಕ್ವಾರಂಟೈನ್​ನಲ್ಲಿರುವ ಕಾರಣ ಮೂರನೇ ಟೆಸ್ಟ್​ನಿಂದ ಅವರ ಸೇವೆ ಸಿಗಲಿದೆ. ಹೀಗಾಗಿ ಎರಡನೇ ಟೆಸ್ಟ್​ ಭಾರತ ತಂಡಕ್ಕೆ ಅತ್ಯಂತ ಕಠಿಣವಾಗಿರಲಿದೆ.

  INDvsAUSTest: ಟೀಮ್​ ಇಂಡಿಯಾ ಸೋಲು; ಟ್ರೋಲಿಗೆ ಗುರಿಯಾದ ವಿರಾಟ್​ ಮಡದಿ ಅನುಷ್ಕಾ ಶರ್ಮಾ

  ಡಿಸೆಂಬರ್ 26 ರಂದು ಮೆಲ್ಬೋರ್ನ್​ ಕ್ರಿಕೆಟ್ ಗ್ರೌಂಡ್​ನಲ್ಲಿ ಎರಡನೇ ಟೆಸ್ಟ್​ ಪಂದ್ಯ ಆರಂಭವಾಗಲಿದೆ.
  Published by:Vinay Bhat
  First published: