India vs Australia: ಸವಾಲಿಗೆ ಸಿದ್ಧ...ನಟರಾಜನ್ ಟೆಸ್ಟ್ ಪದಾರ್ಪಣೆ ಬಹುತೇಕ ಖಚಿತ..!

ಬಾರ್ಡರ್-ಗವಾಸ್ಕರ್ 4 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಎರಡು ತಂಡಗಳು 1-1 ಸಮಬಲ ಸಾಧಿಸಿದ್ದು, ಹೀಗಾಗಿ ಮೂರನೇ ಪಂದ್ಯವು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

T Natarjan

T Natarjan

 • Share this:
  ಐಪಿಎಲ್​ ಸೀಸನ್​ 13ನಲ್ಲಿನ ಭರ್ಜರಿ ಪ್ರದರ್ಶನ ಟಿ.ನಟರಾಜನ್ ಅವರ ವೃತ್ತಿಜೀವನವನ್ನೇ ಬದಲಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ನೆಟ್ ಬೌಲರ್ ಆಗಿ ಸ್ಥಾನ ಪಡೆದಿದ್ದ ನಟರಾಜನ್ ಬಳಿಕ ಗಾಯಾಳು ಇಶಾಂತ್ ಶರ್ಮಾ ಸ್ಥಾನದಲ್ಲಿ ಏಕದಿನ ತಂಡದಲ್ಲಿ ಅವಕಾಶ ಪಡೆದಿದ್ದರು. ಇದಾದ ಬಳಿಕ ಟಿ20 ತಂಡದಲ್ಲೂ ಸ್ಥಾನ ಪಡೆದು ತಮ್ಮ ಯಾರ್ಕರ್ ಎಸೆತಗಳ ಮೂಲಕ ಎಲ್ಲರ ಗಮನ ಸೆಳೆದರು.

  ಏಕದಿನ ಹಾಗೂ ಟಿ20 ಪಾದರ್ಪಣೆ ಬಳಿಕ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಗೆ ನೆಟ್ ಬೌಲರ್ ಆಗಿ ಉಳಿದಿದ್ದ ನಟರಾಜನ್ ಇದೀಗ ಟೆಸ್ಟ್​ ತಂಡದಲ್ಲೂ ಪದಾರ್ಪಣೆ ಮಾಡುವುದು ಕನ್ಫರ್ಮ್​ ಆಗಿದೆ. ಗಾಯಾಳು ಉಮೇಶ್ ಯಾದವ್ ಸ್ಥಾನದಲ್ಲಿ 3ನೇ ಟೆಸ್ಟ್​ ಪಂದ್ಯದಲ್ಲಿ ನಟರಾಜನ್ ಕಣಕ್ಕಿಳಿಯಲಿದ್ದಾರೆ. ಈ ಬಗ್ಗೆ ಖುಷಿ ಹಂಚಿಕೊಂಡಿರುವ ಎಡಗೈ ವೇಗಿ, ಟೀಮ್ ಇಂಡಿಯಾದ ಟೆಸ್ಟ್ ಜರ್ಸಿಯನ್ನು ತೊಟ್ಟು ಫೋಟೋ ಶೇರ್ ಮಾಡಿದ್ದಾರೆ.  ಬಿಳಿ ಜರ್ಸಿ ತೊಡುವುದು ಹೆಮ್ಮೆಯ ಕ್ಷಣ. ಮುಂದಿನ ಸವಾಲುಗಳಿಗೆ ಸಿದ್ಧನಾಗಿದ್ದೇನೆ ಎಂದು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋಗೆ ನಟರಾಜನ್ ಶೀರ್ಷಿಕೆ ಡ ನೀಡಿದ್ದಾರೆ. ಇದರೊಂದಿಗೆ ಮೂರನೇ ಟೆಸ್ಟ್​ನಲ್ಲಿ ಜಸ್​ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಜೊತೆಗೆ  3ನೇ ವೇಗಿಯಾಗಿ ಎಡಗೈ ಬೌಲರ್ ಕಣಕ್ಕಿಳಿಯಲಿರುವುದು ಬಹುತೇಖ ಖಚಿತ ಎನ್ನಲಾಗುತ್ತಿದೆ.

  ಸದ್ಯ ಬಾರ್ಡರ್-ಗವಾಸ್ಕರ್ 4 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಎರಡು ತಂಡಗಳು 1-1 ಸಮಬಲ ಸಾಧಿಸಿದ್ದು, ಹೀಗಾಗಿ ಮೂರನೇ ಪಂದ್ಯವು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಸಿಡ್ನಿಯಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಸಹ ಕಣಕ್ಕಿಳಿಯಲಿರುವುದು ಟೀಮ್ ಇಂಡಿಯಾದ ಗೆಲುವಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
  Published by:zahir
  First published: