India vs Australia: ವಾವ್… ಅಭ್ಯಾಸದ ವೇಳೆ ನಟರಾಜನ್​ರಿಂದ ಹೀಗೊಂದು ರೋಚಕ ಕ್ಯಾಚ್

ಮೈದಾನದಲ್ಲಿ ನಟರಾಜನ್ ಭರ್ಜರಿ ಅಭ್ಯಾಸದಲ್ಲಿ ಕಾಣಿಸಿಕೊಂಡಿದ್ದಾರೆ. ಬೌಲಿಂಗ್ ಪ್ರ್ಯಾಕ್ಟೀಸ್ ಜೊತೆಗೆ ಫೀಲ್ಡಿಂಗ್​ನಲ್ಲೂ ನಟರಾಜನ್ ಕಮಾಲ್ ಮಾಡುತ್ತಿದ್ದಾರೆ.

T natarajan

T natarajan

 • Share this:
  ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಈಗಾಗಲೆ ಎರಡು ಪಂದ್ಯಗಳು ನಡೆದಿದ್ದು ಉಭಯ ತಂಡಗಳು 1-1ರ ಸಮಬಲ ಸಾಧಿಸಿದೆ. ಮೂರನೇ ಪಂದ್ಯ ಜನವರಿ 7 ರಿಂದ ಆರಂಭವಾಗಲಿದ್ದು ಸಿಡ್ನಿಯ ಎಸ್​ಸಿಜಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡೂ ತಂಡಕ್ಕೆ ಈ ಪಂದ್ಯ ಮುಖ್ಯವಾಗಿದ್ದು ಆಟಗಾರರು ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಭಾರತ ತಂಡವಂತು ಎರಡನೇ ಪಂದ್ಯಕ್ಕಿಂತ ಈಗ ಮತ್ತಷ್ಟು ಬಲಿಷ್ಠವಾಗಿದೆ. ರೋಹಿತ್ ಶರ್ಮಾ ಸಂಪೂರ್ಣ ಫಿಟ್ ಆಗಿ ತಂಡ ಸೇರಿಕೊಂಡಿರುವ ಜೊತೆ ಟಿ. ನಟರಾಜನ್ ಹಾಗೂ ಶಾರ್ದೂಲ್ ಠಾಕೂರ್ ಕೂಡ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

  ಎರಡನೇ ಟೆಸ್ಟ್ ಪಂದ್ಯದಲ್ಲಿ ಮೀನಖಂಡದ ಗಾಯದ ಸಮಸ್ಯೆಗೆ ತುತ್ತಾದ ಬಲಗೈ ವೇಗದ ಬೌಲರ್‌ ಉಮೇಶ್‌ ಯಾದವ್, ಬಾರ್ಡರ್-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಿಂದ ಹೊರಬಿದಿದ್ದರು. ಹೀಗಾಗಿ ಇವರ ಜಾಗಕ್ಕೆ ಟಿ. ನಟರಾಜನ್​ರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ನಟರಾಜನ್ ಟೆಸ್ಟ್ ಕ್ರಿಕೆಟ್​ಗೂ ಕಾಲಿಟ್ಟಿದ್ದು, ಪದಾರ್ಪಣೆ ಮಾಡುವ ಸಾಧ್ಯತೆ ಇದೆ.

  India vs Australia: ಟೀಂ ಇಂಡಿಯಾ ಎಲ್ಲ ಆಟಗಾರರಿಗೆ ಕೋವಿಡ್ ಟೆಸ್ಟ್​: ರಿಪೋರ್ಟ್​ನಲ್ಲಿ ಏನಿದೆ?

  ಅಲ್ಲದೆ ಮೈದಾನದಲ್ಲಿ ನಟರಾಜನ್ ಭರ್ಜರಿ ಅಭ್ಯಾಸದಲ್ಲಿ ಕಾಣಿಸಿಕೊಂಡಿದ್ದಾರೆ. ಬೌಲಿಂಗ್ ಪ್ರ್ಯಾಕ್ಟೀಸ್ ಜೊತೆಗೆ ಫೀಲ್ಡಿಂಗ್​ನಲ್ಲೂ ನಟರಾಜನ್ ಕಮಾಲ್ ಮಾಡುತ್ತಿದ್ದಾರೆ. ಇಂಡಿಯನ್ ಕ್ರಿಕೆಟ್ ಟೀಂ ಇನ್​ಸ್ಟಾಗ್ರಾಂ ಖಾತೆ ನಟರಾಜನ್ ಫೀಲ್ಡಿಂಗ್ ಮಾಡುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಇದರಲ್ಲಿ ಯಾರ್ಕರ್ ಕಿಂಗ್ ಹಿಂಬದಿಯಿಂದ ಓಡಿ ಹೋಗಿ ಅದ್ಭುತವಾಗಿ ಚೆಂಡನ್ನು ಹಿಡಿದಿದ್ದಾರೆ.


  ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್​ನಲ್ಲಿ ನಟರಾಜನ್ ಅಥವಾ ಶಾರ್ದೂಲ್ ಠಾಕೂರ್ ಪೈಕಿ ಯಾರಿಗೆ ಸ್ಥಾನ ಎಂಬುದು ಇನ್ನೂ ಖಚಿತಾವಗಿಲ್ಲ. ಆದರೆ, ಆಸೀಸ್ ವಿರುದ್ಧದ ಸಿಮೀತ ಓವರ್​ಗಳ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ನಟರಾಜನ್ ಅವರನ್ನು ಟೀಂ​ ಮ್ಯಾನೇಜ್​ಮೆಂಟ್​ ಆಡುವ ಬಳಗದಲ್ಲಿ ಪರಿಗಣಿಸಲಿದೆ ಎನ್ನಲಾಗಿದೆ.

  ಟಿ. ನಟರಾಜನ್ ಕಣಕ್ಕಿಳಿದರೆ ಇದು ಅವರಿಗೆ ಪದಾರ್ಪಣೆಯ ಪಂದ್ಯ. ಆದರೆ, ಶಾರ್ದೂಲ್ ಠಾಕೂರ್ ಈ ಹಿಂದೆಯೇ ಭಾರತ ಪರ ಟೆಸ್ಟ್​ನಲ್ಲಿ ಆಡಿದ್ದರು. 62 ಪ್ರಥಮದರ್ಜೆ ಪಂದ್ಯಗಳನ್ನು ಆಡಿರುವ ಠಾಕೂರ್ 206 ವಿಕೆಟ್‌ಗಳನ್ನು ಉರುಳಿಸಿದ ಅನುಭವ ಹೊಂದಿದ್ದಾರೆ. ಹೀಗಾಗಿ ಅನನುಭವಿ ನಟರಾಜನ್‌ ಬದಲು ಶಾರ್ದುಲ್‌ ಆಯ್ಕೆ ಸಾಧ್ಯತೆ ಕೂಡ ದಟ್ಟವಾಗಿದೆ. ಅಲ್ಲದೆ ಬ್ಯಾಟಿಂಗ್‌ನಲ್ಲೂ ಒಂದು ಹೆಜ್ಜೆ ಮುಂದಿರುವ ಶಾರ್ದುಲ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 6 ಶತಕಗಳನ್ನು ಬಾರಿಸಿದ್ದಾರೆ.

  Rohit Sharma: ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್: ವಿಶ್ವ ದಾಖಲೆಯತ್ತ ರೋಹಿತ್ ಶರ್ಮಾ

  ಸಿಡ್ನಿಯಲ್ಲಿ ಕೊರೋನಾ ಆತಂಕ:

  ಮೊನ್ನೆಯಷ್ಟೆ ಸಿಡ್ನಿಯ ಸುತ್ತಮುತ್ತಲ ಪ್ರದೇಶದಲ್ಲಿ ಹೊಸದಾಗಿ 10 ಕೊರೋನಾ ಪ್ರಕರಣಗಳು ಕಾಣಿಸಿಕೊಂಡಿದ್ದು, ಕಳೆದ ಎರಡು ವಾರಗಳಲ್ಲಿ ಬರೋಬ್ಬರಿ 170 ಕೇಸ್ ಪತ್ತೆಯಾಗಿವೆ. ಅಲ್ಲದೆ ಎಸ್‌ಸಿಜಿಯಿಂದ ಕೇವಲ 30 ಕಿಲೋಮೀಟರ್ ದೂರದಲ್ಲಿರುವ ಬೆರಾಲಾ ಮತ್ತು ಸ್ಮಿತ್‌ಫೀಲ್ಡ್ ಪ್ರದೇಶಗಳಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದೆ. ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದರೂ, ಸಿಡ್ನಿಯಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಆದರೆ, ಐಸಿಸಿ ಮಧ್ಯಪ್ರವೇಶಿಸಿ ಮೂರನೇ ಟೆಸ್ಟ್​ ಮುಂದುಡೂವುದು ಅಥವಾ ಬೇರೆ ಕ್ರೀಡಾಂಗಣದಲ್ಲಿ ಆಯೋಜಿಸಲು ಸಲಹೆ ನೀಡುವ ಸಾಧ್ಯತೆ ಕೂಡ ಇದೆ.
  Published by:Vinay Bhat
  First published: