T Natarajan: ಟೆಸ್ಟ್​ ಕ್ರಿಕೆಟ್​ಗೂ ಕಾಲಿಟ್ಟ ನಟರಾಜನ್: ಉಮೇಶ್ ಯಾದವ್ ಜಾಗಕ್ಕೆ ಯಾರ್ಕರ್ ಕಿಂಗ್ ಆಯ್ಕೆ

ಬಾಕ್ಸಿಂಗ್ ಡೇ ಟೆಸ್ಟ್‌ನ ಮೂರನೇ ದಿನದಾಟದ ವೇಳೆಯಲ್ಲಿ ಉಮೇಶ್ ಯಾದವ್ ಮಂಡಿರಜ್ಜು ಸೆಳೆತಕ್ಕೆ ಒಳಗಾದರು. ಹೀಗಾಗಿ ಇವರ ಜಾಗಕ್ಕೆ ಟಿ. ನಟರಾಜನ್​ರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಬಿಸಿಸಿಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

T Natarajan

T Natarajan

  • Share this:
    ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೀನಖಂಡದ ಗಾಯದ ಸಮಸ್ಯೆಗೆ ತುತ್ತಾದ ಬಲಗೈ ವೇಗದ ಬೌಲರ್‌ ಉಮೇಶ್‌ ಯಾದವ್, ಬಾರ್ಡರ್-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಿಂದ ಹೊರಬಿದಿದ್ದಾರೆ. ಹೀಗಾಗಿ ಇವರ ಜಾಗಕ್ಕೆ ಟಿ. ನಟರಾಜನ್​ರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಬಿಸಿಸಿಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಈ ಮೂಲಕ ನಟರಾಜನ್ ಟೆಸ್ಟ್ ಕ್ರಿಕೆಟ್​ಗೂ ಕಾಲಿಟ್ಟಿದ್ದು, ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ನಟರಾಜನ್ ಆಸ್ಟ್ರೇಲಿಯಾದಲ್ಲೇ ಉಳಿದುಕೊಂಡಿದ್ದರಾದರೂ ಟೆಸ್ಟ್ ತಂಡಕ್ಕೆ ಸೇರಿಸಿಕೊಂಡಿರಲಿಲ್ಲ. ಅವರು ನೆಟ್ ಬೌಲರ್ ಆಗಿ ಟೆಸ್ಟ್ ತಂಡದ ಜತೆಗಿದ್ದರು. ಸದ್ಯ ಉಮೇಶ್ ಬದಲು ಸ್ಥಾನ ಸಿಕ್ಕ ಕಾರಣ ಮೂರನೇ ಟೆಸ್ಟ್​ನಲ್ಲಿ ಕಣಕ್ಕಿಳಿಯುವ ಅಂದಾಜಿದೆ.





    ಬಾಕ್ಸಿಂಗ್ ಡೇ ಟೆಸ್ಟ್‌ನ ಮೂರನೇ ದಿನದಾಟದ ವೇಳೆಯಲ್ಲಿ ಉಮೇಶ್ ಯಾದವ್ ಮಂಡಿರಜ್ಜು ಸೆಳೆತಕ್ಕೆ ಒಳಗಾದರು. ಹೀಗಾಗಿ ಅವರು ಬಳಿಕ ಮೈದಾನಕ್ಕೆ ಇಳಿದಿರಲಿಲ್ಲ. ಸದ್ಯ ಉಮೇಶ್ ಭಾರತಕ್ಕೆ ಹಿಂದಿರುಗಲಿದ್ದು, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ)ಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

    S Sreesanth: ಅಭ್ಯಾಸ ಪಂದ್ಯದಲ್ಲಿ ಕೋಪಗೊಂಡ ಶ್ರೀಶಾಂತ್: ಎದುರಾಳಿ ಬ್ಯಾಟ್ಸ್​ಮನ್​ಗೆ ಮಾಡಿದ್ದೇನು ನೋಡಿ

    ಇನ್ನೂ ಮೊದಲನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್ ಶಮಿ ಬ್ಯಾಟಿಂಗ್‌ವೇಳೆಯಲ್ಲಿ ಕೈಗೆ ಏಟು ಮಾಡಿಕೊಂಡಿದ್ದರು. ಹೀಗಾಗಿ ಸರಣಿಯಿಂದಲೇ ಹೊರಬಿದ್ದರು. ಇವರ ಜಾಗಕ್ಕೆ ಬಿಸಿಸಿಐ ಶಾರ್ದೂಲ್ ಠಾಕೂರ್ ಅವರನ್ನು ಆಯ್ಕೆ ಮಾಡಿದೆ. ಹೀಗಾಗಿ ನಟರಾಜನ್ ಜೊತೆ ಠಾಕೂರ್ ಸಿಡ್ನಿ ಟೆಸ್ಟ್​ನಲ್ಲಿ ಆಡುತ್ತಾರ ಎಂಬುದು ನೋಡಬೇಕಿದೆ.

    ಟಿ. ನಟರಾಜನ್ ಕಣಕ್ಕಿಳಿದರೆ ಇದು ಅವರಿಗೆ ಪದಾರ್ಪಣೆಯ ಪಂದ್ಯ. ಆದರೆ, ಶಾರ್ದೂಲ್ ಠಾಕೂರ್ ಈ ಹಿಂದೆಯೇ ಭಾರತ ಪರ ಟೆಸ್ಟ್​ನಲ್ಲಿ ಆಡಿದ್ದರು. ಆದ್ರೆ, ಒಂದು ಓವರ್‌ ಎಸೆಯುವ ಮೊದಲೇ ಗಾಯಕ್ಕೆ ತುತ್ತಾಗಿದ್ದು ದುರದೃಷ್ಟ.

    ಶಾರ್ದುಲ್‌ ಈವರೆಗೆ 62 ಪ್ರಥಮದರ್ಜೆ ಪಂದ್ಯಗಳನ್ನು ಆಡಿದ್ದು 206 ವಿಕೆಟ್‌ಗಳನ್ನು ಉರುಳಿಸಿದ ಅನುಭವ ಹೊಂದಿದ್ದಾರೆ. ಹೀಗಾಗಿ ಅನನುಭವಿ ನಟರಾಜನ್‌ ಬದಲು ಶಾರ್ದುಲ್‌ ಆಯ್ಕೆ ಸಾಧ್ಯತೆ ದಟ್ಟವಾಗಿದೆ. ಇತ್ತ ಬ್ಯಾಟಿಂಗ್‌ನಲ್ಲೂ ಒಂದು ಹೆಜ್ಜೆ ಮುಂದಿರುವ ಶಾರ್ದುಲ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 6 ಶತಕಗಳನ್ನು ಬಾರಿಸಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲೂ ಠಾಕೂರ್‌ ಹಲವು ಬಾರಿ ತಮ್ಮ ಬ್ಯಾಟಿಂಗ್‌ ಸಾಮರ್ಥ್ಯ ಅನಾವರಣ ಪಡಿಸಿದ್ದರು.

    ಈ ವರ್ಷ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ..!

    ಆದರೆ, ಆಸ್ಟ್ರೇಲಿಯಾ ವಿರುದ್ಧದ ಸಿಮೀತ ಓವರ್​ಗಳ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ನಟರಾಜನ್ ಅವರನ್ನು ಟೀಂ​ ಮ್ಯಾನೇಜ್​ಮೆಂಟ್​ ಆಡುವ ಬಳಗದಲ್ಲಿ ಪರಿಗಣಿಸಲಿದೆ ಎನ್ನಲಾಗಿದೆ. ಭಾರತ - ಆಸ್ಟ್ರೇಲಿಯಾ ಮೂರನೇ ಟೆಸ್ಟ್‌ ಜನವರು 7 ರಿಂದ ಆರಂಭವಾಗಲಿದ್ದು ಎಸ್‌ಸಿಜಿ ಕ್ರೀಡಾಂಗಣದಲ್ಲಿ ನಡೆಯಲಿದೆ.
    Published by:Vinay Bhat
    First published: