ಯಾರ್ಕರ್ ಕಿಂಗ್ ನಟರಾಜನ್ ಎಸೆದ ಬೆಂಕಿಯ ಚೆಂಡಿಗೆ ನಡುಗಿದ ಆಸೀಸ್ ಬ್ಯಾಟ್ಸ್​ಮನ್: ಕ್ಲೀನ್ ಬೌಲ್ಡ್ ವಿಡಿಯೋ ಇಲ್ಲಿದೆ

ನಂಬರ್ ಒನ್ ಬೌಲರ್ ಜಸ್​ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಅತ್ಯುತ್ತಮ ಸ್ಪೆಲ್ ಮಾಡಿದ ನಟರಾಜನ್ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.

T Natarajan

T Natarajan

 • Share this:
  ಭಾರತ ಕ್ರಿಕೆಟ್ ತಂಡ ಕಾಂಗರೂಗಳ ನಾಡಿನಲ್ಲಿ ಕೊನೆಗೂ ಫಾರ್ಮ್​ಗೆ ಬಂದಿದೆ. ಏಕದಿನ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದ್ದ ಟೀಂ ಇಂಡಿಯಾ ಕೊನೆಯ ಪಂದ್ಯವನ್ನು ಗೆದ್ದಿತ್ತು. ಸದ್ಯ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ 11 ರನ್​ಗಳ ಜಯ ಸಾಧಿಸಿ ಬಲಿಷ್ಠವಾಗಿ ಗೋಚರಿಸಿದೆ. ಅಲ್ಲದೆ ಫಿಂಚ್ ಪಡೆಯ ವಿರುದ್ಧ ತನ್ನ ಟಿ-20 ದಾಖಲೆಯನ್ನು ಭದ್ರ ಪಡಿಸಿಕೊಂಡಿದ್ದು, ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿದೆ. ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಕೊಹ್ಲಿ ಪಡೆ 1-0 ಮುನ್ನಡೆ ಸಾಧಿಸಿದೆ.

  ಶುಕ್ರವಾರದ ಪಂದ್ಯದ ಪ್ರಮುಖ ಹೈಲೇಟ್ಸ್​ ರವೀಂದ್ರ ಜಡೇಜಾ ಸ್ಫೋಟಕ ಆಟದ ಜೊತೆ ಯಜುವೇಂದ್ರ ಚಹಾಲ್ ಹಾಗೂ ಟಿ. ನಟರಾಜನ್ ಬೌಲಿಂಗ್ ದಾಳಿ. ಹೌದು, ತನ್ನ ಚೊಚ್ಚಲ ಟಿ-20 ಅಂತರಾಷ್ಟ್ರೀಯ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ನಟರಾಜನ್ ಟೀಂ ಇಂಡಿಯಾದ ಭರವಸೆಯ ಬೌಲರ್ ಆಗಿ ಕಾಣಿಸಿಕೊಂಡರು.

  IND vs AUS: ಇಡೀ ಪಂದ್ಯದ ಗತಿಯನ್ನೇ ಬದಲಾಯಿಸಿತು ಆ ಒಂದು ರೋಚಕ ಕ್ಯಾಚ್: ಇಲ್ಲಿದೆ ವಿಡಿಯೋ

  ನಂಬರ್ ಒನ್ ಬೌಲರ್ ಜಸ್​ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಅತ್ಯುತ್ತಮ ಸ್ಪೆಲ್ ಮಾಡಿದ ನಟರಾಜನ್ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. 4 ಓವರ್​ಗೆ ಕೇವಲ 30 ರನ್ ನೀಡಿ ಮೊದಲ ಪಂದ್ಯದಲ್ಲೇ 3 ವಿಕೆಟ್ ಕಿತ್ತು ಮಿಂಚಿದರು. ಗ್ಲೆನ್ ಮ್ಯಾಕ್ಸ್​ವೆಲ್, ಮಿಚಲ್ ಸ್ಟಾರ್ಕ್​ ಹಾಗೂ ಡಾರ್ಸಿ ಶಾರ್ಟ್​​ರಂತಹ ಅಪಾಯಕಾರಿ ಆಟಗಾರರನ್ನೇ ಪೆವಿಲಿಯನ್​ಗೆ ಅಟ್ಟಿ ಅಟ್ಟಹಾಸ ಮೆರೆದರು.

  ಅದರಲ್ಲೂ ತಮ್ಮ ಯಾರ್ಕರ್ ಮೂಲಕ ಮಿಚೆಲ್ ಸ್ಟಾರ್ಕ್​ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದು ಮನಮೋಹಕವಾಗಿತ್ತು. 19ನೇ ಓವರ್​ನ ಮೊದಲ ಎಸೆತದಲ್ಲೇ 1 ರನ್ ಗಳಿಸಿದ್ದ ಸ್ಟಾರ್ಕ್​ ಅವರು ನಟರಾಜನ್ ಯಾರ್ಕರ್ ಅನ್ನು ಎದುರಿಸಲು ಸಾಧ್ಯವಾಗದೆ ಪರದಾಡಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಪೆವಿಲಿಯನ್​ ಕಡೆ ಹೆಜ್ಜೆ ಹಾಕಿದರು.

  ಮೊದಲ ಟಿ-20 ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಆತ್ಮವಿಶ್ವಾಸದಲ್ಲಿರುವ ಭಾರತ ಎರಡನೇ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳುವ ಹೊಂಚು ಹಾಕಿದೆ. ನಾಳೆ ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ಎರಡನೇ ಟಿ-20 ನಡೆಯಲಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ.

  India vs Australia: ಟಿ-20ಯಲ್ಲಿ ಶುಭಾರಂಭ ಮಾಡಿದ ಖುಷಿಯಲ್ಲಿದ್ದ ಭಾರತಕ್ಕೆ ಬರ ಸಿಡಿಲಿನಂತೆ ಬಂತು ಆಘಾತ

  ಟಿ-20 ಸರಣಿಯಿಂದ ಜಡೇಜಾ ಹೊರಕ್ಕೆ:

  ಭಾರತ ಬ್ಯಾಟಿಂಗ್ ಇನ್ನಿಂಗ್ಸ್​ ವೇಲೆ ಮಿಚೆಲ್‌ ಸ್ಟಾರ್ಕ್‌ ಎಸೆದ ಬೌನ್ಸರ್‌ನಲ್ಲಿ ರವೀಂದ್ರ ಜಡೇಜಾ ಹೆಲ್ಮೆಟ್‌ಗೆ ಚೆಂಡು ಬಡಿದ ಅವರು ಫೀಲ್ಡಿಂಗ್​ಗೆ ಕಣಕ್ಕಿಳಿದಿರಲಿಲ್ಲ. 10 ದಿನಗಳ ವಿಶ್ರಾಂತಿ ಬೇಕಾಗಿರುವ ಕಾರಣ ಟಿ-20 ಸರಣಿಯಿಂದ ಹೊರಗುಳಿಸಿದ್ದಾರೆ. ಜಡೇಜಾ ಬದಲು ಶಾರ್ದೂಲ್ ಠಾಕೂರ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
  Published by:Vinay Bhat
  First published: