India vs Australia: ಭಾರತ - ಆಸ್ಟ್ರೇಲಿಯಾ ಮೂರನೇ ಟೆಸ್ಟ್​ ಪಂದ್ಯ ನಡೆಯುವುದು ಅನುಮಾನ..!

ಸಿಡ್ನಿಯಲ್ಲಿ ಕೋವಿಡ್ ಇರುವ ಕಾರಣದಿಂದಾಗಿ ದ್ವೀತೀಯ ಟೆಸ್ಟ್ ಪಂದ್ಯದ ನಂತರ ಟೀಂ ಇಂಡಿಯಾ ಮತ್ತು ಆಸೀಸ್ ಆಟಗಾರರು ಇನ್ನೂ ಕೂಡ ಎಸ್​​ಸಿಜಿಗೆ ಆಗಮಿಸಿಲ್ಲ. ಮೆಲ್ಬೋರ್ನ್​ ಕ್ರೀಡಾಂಗಣದಲ್ಲೆ ಅಭ್ಯಾಸ ನಡೆಸುತ್ತಿದ್ದಾರೆ.

India vs Australia

India vs Australia

  • Share this:
    ಬಾರ್ಡರ್-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಮೂರನೇ ಪಂದ್ಯಕ್ಕೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಭರ್ಜರಿ ಅಭ್ಯಾಸದಲ್ಲಿ ತೊಡಗಿಕೊಂಡಿವೆ. ರೋಹಿತ್ ಶರ್ಮಾ ಹಿಂತಿರುಗಿರುವುದು ರಹಾನೆ ಪಡೆಯ ಬ್ಯಾಟಿಂಗ್ ಶಕ್ತಿಯನ್ನ ಮತ್ತಷ್ಟು ಹೆಚ್ಚಿಸಿದೆ. ಇತ್ತ ಕಾಂಗರೂ ಪಡೆ ಕೂಡ ಡೇವಿಡ್ ವಾರ್ನರ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಯೋಚಿಸಿದೆ. ಹೀಗಾಗಿ ಸಿಡ್ನಿಯ ಎಸ್​​ಸಿಜಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಟೆಸ್ಟ್​ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಆದರೆ, ಈ ಟೆಸ್ಟ್​ ಪಂದ್ಯಕ್ಕೆ ಕೊರೋನಾ ಕರಿನೆರಳು ಆವರಿಸಿದೆ. ಹೌದು, ಸಿಡ್ನಿ ಸುತ್ತಮುತ್ತಲ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್ ಪ್ರಕರಣಗಳ ಏರುತ್ತಲ್ಲಿದ್ದು, ಮೂರನೇ ಟೆಸ್ಟ್ ಪಂದ್ಯಕ್ಕೆ ಆತಂಕ ಎದುರಾಗಿದೆ.

    ಮೊನ್ನೆಯಷ್ಟೆ ಸಿಡ್ನಿಯ ಸುತ್ತಮುತ್ತಲ ಪ್ರದೇಶದಲ್ಲಿ ಹೊಸದಾಗಿ 10 ಕೊರೋನಾ ಪ್ರಕರಣಗಳು ಕಾಣಿಸಿಕೊಂಡಿದ್ದು, ಕಳೆದ ಎರಡು ವಾರಗಳಲ್ಲಿ ಬರೋಬ್ಬರಿ 170 ಕೇಸ್ ಪತ್ತೆಯಾಗಿವೆ. ಅಲ್ಲದೆ ಎಸ್‌ಸಿಜಿಯಿಂದ ಕೇವಲ 30 ಕಿಲೋಮೀಟರ್ ದೂರದಲ್ಲಿರುವ ಬೆರಾಲಾ ಮತ್ತು ಸ್ಮಿತ್‌ಫೀಲ್ಡ್ ಪ್ರದೇಶಗಳಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದೆ.

    T Natarajan: ಟೆಸ್ಟ್​ ಕ್ರಿಕೆಟ್​ಗೂ ಕಾಲಿಟ್ಟ ನಟರಾಜನ್: ಉಮೇಶ್ ಯಾದವ್ ಜಾಗಕ್ಕೆ ಯಾರ್ಕರ್ ಕಿಂಗ್ ಆಯ್ಕೆ

    "ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲು ಕರೆಗಳು ಬಂದಿವೆ ಮತ್ತು ಸಹಜವಾಗಿ ಮೂರನೇ ಟೆಸ್ಟ್ ಪಂದ್ಯ ವೀಕ್ಷಣೆಗೆ ಮೈದಾನಕ್ಕೆ ಪ್ರೇಕ್ಷಕರ ಆಗಮನವನ್ನು ತಡೆಹಿಯಲಾಗುತ್ತದೆ ಎನ್ನಲಾಗಿದೆ. ಈ ಬಗ್ಗೆ ನ್ಯೂ ಸೌತ್ ವೇಲ್ಸ್ ಪ್ರಧಾನಮಂತ್ರಿ ಅವರ ಬಳಿ ಮಾಹಿತಿ ಪಡೆಯಲಾಗುತ್ತದೆ. 2020ರ ಕೊನೆಯ ದಿನಕ್ಕೆ 10 ಪ್ರಕರಣಗಳು ಪತ್ತೆಯಾಗಿದ್ದು, ಈ ಸಂಖ್ಯೆ ನಿಜಕ್ಕೂ ಗಮನಾರ್ಹವಾಗಿದೆ" ಎಂದು ವರದಿಯಲ್ಲಿ ಹೇಳಲಾಗಿದೆ.

    ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದರೂ, ಸಿಡ್ನಿಯಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಆದರೆ, ಐಸಿಸಿ ಮಧ್ಯಪ್ರವೇಶಿಸಿ ಮೂರನೇ ಟೆಸ್ಟ್​ ಮುಂದುಡೂವುದು ಅಥವಾ ಬೇರೆ ಕ್ರೀಡಾಂಗಣದಲ್ಲಿ ಆಯೋಜಿಸಲು ಸಲಹೆ ನೀಡುವ ಸಾಧ್ಯತೆ ಕೂಡ ಇದೆ.

    ಸಿಡ್ನಿಯಲ್ಲಿ ಕೋವಿಡ್ ಇರುವ ಕಾರಣದಿಂದಾಗಿ ದ್ವೀತೀಯ ಟೆಸ್ಟ್ ಪಂದ್ಯದ ನಂತರ ಟೀಂ ಇಂಡಿಯಾ ಮತ್ತು ಆಸೀಸ್ ಆಟಗಾರರು ಇನ್ನೂ ಕೂಡ ಎಸ್​​ಸಿಜಿಗೆ ಆಗಮಿಸಿಲ್ಲ. ಮೆಲ್ಬೋರ್ನ್​ ಕ್ರೀಡಾಂಗಣದಲ್ಲೆ ಅಭ್ಯಾಸ ನಡೆಸುತ್ತಿದ್ದಾರೆ.

    ಒಟ್ಟು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಲಾ ಒಂದೊಂದು ಪಂದ್ಯ ಗೆದ್ದಿದ್ದು, ಜ.7 ರಿಂದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮೂರನೇ ಪಂದ್ಯ ಆರಂಭವಾಗಬೇಕಿದೆ.

    2021ರ ಮೊದಲ ಸಿಕ್ಸ್ ಸಿಡಿಸಿದ್ದು ಯಾರು? ಮೊದಲ ಸೋಲು ಯಾರಿಗೆ?

    ಭಾರತ ಪರ ಇಂಜುರಿಯಿಂದಾಗಿ ಸರಣಿಯಿಂದ ಹೊರಬಿದ್ದಿರುವ ಉಮೇಶ್ ಯಾದವ್ ಬದಲು ಟಿ. ನಟರಾಜನ್ ಹಾಗೂ ಮೊಹಮ್ಮದ್ ಶಮಿ ಬದಲು ಶಾರ್ದೂಲ್ ಠಾಕೂರ್ ತಂಡ ಸೇರಿಕೊಂಡಿದ್ದಾರೆ. ಮೂರನೇ ಟೆಸ್ಟ್​ನಲ್ಲಿ ರೋಹಿತ್ ಶರ್ಮಾ ಕೂಡ ಕಣಕ್ಕಿಳಿಯುವುದು ಖಚಿತವಾಗಿದೆ.
    Published by:Vinay Bhat
    First published: