ಆಸೀಸ್ ವಿರುದ್ಧ ಮೊದಲ ಏಕದಿನ; ಸೋಲಿನ ಕಹಿ ಮರೆಯಲು ಕೊಹ್ಲಿಯಿಂದ ರಣತಂತ್ರ

ರೋಹಿತ್ ಶರ್ಮಾ, ಶಿಖರ್ ಧವನ್ ಹಾಗೂ ಕೆ ಎಲ್ ರಾಹುಲ್. ಈ ಮೂವರಲ್ಲಿ ಯಾರು ಯಾವ ಸ್ಥಾನದಲ್ಲಿ ಆಡಲಿದ್ದಾರೆ ಎಂಬುದೆ ಕುತೂಹಲ ಕೆರಳಿಸಿದೆ. ಕೊಹ್ಲಿ ತಮ್ಮ 3ನೇ ಸ್ಥಾನ ರಾಹುಲ್​​ಗೆ ಬಿಟ್ಟು 4ನೇ ಕ್ರಮಾಂಕದಲ್ಲಿ ಆಡುತ್ತಾರ?

ಟೀಂ ಇಂಡಿಯಾ

ಟೀಂ ಇಂಡಿಯಾ

  • News18
  • Last Updated :
  • Share this:
ಹೈದರಾಬಾದ್: ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿ ಸೋಲಿನಿಂದ ತವರಿನಲ್ಲೇ ಭಾರೀ ಮುಖಭಂಗ ಅನುಭವಿಸಿದ್ದ ಭಾರತ ತಂಡ ಈಗ ಏಕದಿನ ಸರಣಿಗೆ ಸಜ್ಜಾಗಿದೆ. ಸೇಡು ತೀರಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿರುವ ಕೊಹ್ಲಿ ಪಡೆ ಎಚ್ಚರಿಕೆಯಿಂದ ಮುನ್ನುಗ್ಗಲು ನಿರ್ಧರಿಸಿದೆ.

ನಾಳೆ ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಐದು ಪಂದ್ಯಗಳ ಏಕದಿನ ಸರಣಿ ಪೈಕಿ ಮೊದಲ ಪಂದ್ಯ ನಡೆಯಲಿದೆ. ವಿಶ್ವಕಪ್ ಮಹಾಸಮರಕ್ಕೆ ಸೂಕ್ತ ಆಟಗಾರರ ಆಯ್ಕೆಗೆ ಭಾರತಕ್ಕಿದು ಕೊನೆಯ ಅವಕಾಶವಾಗಿದೆ. ಹೀಗಾಗಿ ಒಂದಿಷ್ಟು ಬದಲಾವಣೆಯೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿಯುವುದು ಖಚಿತ.

ರೋಹಿತ್ ಶರ್ಮಾ, ಶಿಖರ್ ಧವನ್ ಹಾಗೂ ಕೆ ಎಲ್ ರಾಹುಲ್. ಈ ಮೂವರಲ್ಲಿ ಯಾರು ಯಾವ ಸ್ಥಾನದಲ್ಲಿ ಆಡಲಿದ್ದಾರೆ ಎಂಬುದೆ ಕುತೂಹಲ ಕೆರಳಿಸಿದೆ. ಜೊತೆಗೆ ನಾಯಕ ವಿರಾಟ್ ಕೊಹ್ಲಿ ತಮ್ಮ 3ನೇ ಸ್ಥಾನವನ್ನು ರಾಹುಲ್​​ಗೆ ಬಿಟ್ಟು 4ನೇ ಕ್ರಮಾಂಕದಲ್ಲಿ ಆಡುತ್ತಾರ ಎಂಬುದು ಕಾದುನೋಡಬೇಕಿದೆ.

ಮಧ್ಯಮ ಕ್ರಮಾಂಕದಲ್ಲಿ ಭಾರತ ಇನ್ನು ಬಲಿಷ್ಠವಾಗಿಲ್ಲ. ರಿಷಭ್ ಪಂತ್ ಕೂಡ ಆವೇಶಕ್ಕೆ ಒಳಗಾಗದೆ ಎಚ್ಚರಿಕೆಯಿಂದ ಬ್ಯಾಟ್ ಬೀಸಬೇಕಿದೆ. ಅಲ್ಲದೆ ಅಂಬಟಿ ರಾಯುಡು, ಎಂಎಸ್ ಧೋನಿ ಹಾಗೂ ಕೇದರ್ ಜಾಧವ್ ಮಧ್ಯೆ ಮಧ್ಯಮ ಕ್ರಮಾಂಕವನ್ನು ಯಾರು ನಿಭಾಹಿಸಿವರು ಎಂಬ ಬಗ್ಗೆ ಪ್ರಯೋಗ ನಡೆಯಬೇಕಿದೆ.

ಇದನ್ನೂ ಓದಿ: 'ನಾಯಕನಿಗೇ ಎದುರು ಮಾತಾಡ್ತೀಯಾ?'; ಬುಮ್ರಾಗೆ ಖಡಕ್ ವಾರ್ನಿಂಗ್ ನೀಡಿದ ಕೊಹ್ಲಿ

ಇನ್ನು ಆಲ್ರೌಂಡರ್ ಜವಾಬ್ದಾರಿ ವಿಜಯ್ ಶಂಕರ್​​​ಗೆ ಫಿಕ್ಸ್​ ಆದಂತಿದೆ. ಸ್ಪಿನ್ ವಿಭಾಗದಲ್ಲಿ ಯಜುವೇಂದ್ರ ಚಹಾಲ್ ಹಾಗೂ ಕುಲ್ದೀಪ್ ಯಾದವ್ ಮೋಡಿ ನಡೆಯಲಿದ್ದರೆ, ವೇಗಿಗಳಾಗಿ ಜಸ್​ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ತಯಾರಾಗಿದ್ದಾರೆ.

ಇತ್ತ ಟಿ-20 ಸರಣಿ ಗೆದ್ದು ಆತ್ಮವಿಶ್ವಾಸದಲ್ಲಿರುವ ಫಿಂಚ್ ಪಡೆ, ಗೆಲುವಿನ ಓಟ ಮುಂದುವರಿಸಲು ಸಕಲ ತಯಾರಿ ಮಾಡಿಕೊಂಡಿದೆ. ಸ್ಪೋಟಕ ಬ್ಯಾಟ್ಸ್​ಮನ್​ ಗ್ಲೆನ್ ಮ್ಯಾಕ್ಸ್​ವೆಲ್​​ ಫಾರ್ಮ್​ಗೆ ಮರಳಿರುವುದು ತಂಡಕ್ಕೆ ಮತ್ತಷ್ಟು ಬಲ ಬಂದಂತಾಗಿದ್ದು, ಬೌಲಿಂಗ್​​ನಲ್ಲು ಆಸೀಸ್ ಉತ್ತಮ ಪ್ರದರ್ಶನ ತೋರುತ್ತಿದೆ.

ಒಟ್ಟಾರೆ ಭಾರತಕ್ಕೆ ಈ ಏಕದಿನ ಸರಂಇ ಬಹುಮುಖ್ಯವಾಗಿದ್ದು, ಟಿ-20 ಯಲ್ಲಿ ಹೋದ ಮಾನ ಇದರಲ್ಲಾದರು ಪಡೆದುಕೊಳ್ಳುತ್ತಾರಾ ಎಂಬುದು ಕಾದುನೋಡಬೇಕಿದೆ.

ಪಂದ್ಯ ಆರಂಭ: ಮಧ್ಯಾಹ್ನ 1:30 ಕ್ಕೆ

First published: