ಆಸೀಸ್​ ಎದುರು ಕ್ರಿಕೆಟ್ ಅಂಗಳದಲ್ಲೇ ಕ್ರೀಡಾಸ್ಫೂರ್ತಿ ಮೆರೆದ ಮೊಹಮ್ಮದ್ ಸಿರಾಜ್; ವಿಡಿಯೋ ವೈರಲ್​

ರನ್​ಗಿಂತ ತನ್ನ ಸಹ ಆಟಗಾರನಿಗೆ ಪೆಟ್ಟಾದಾಗದ ಆತನನ್ನು ಸಂತೈಸುವ ಯೋಗಕ್ಷೇಮ ವಿಚಾರಿಸುವ ಕನಿಷ್ಟ ಕಾಳಜಿ ಅಥವಾ ಮಾನವೀಯತೆಯೇ ಮುಖ್ಯ ಎಂಬುದನ್ನು ಸಿರಾಜ್ ಮಹಮ್ಮದ್ ಇಂದಿನ ಪಂದ್ಯದಲ್ಲಿ ತೋರಿಸಿಕೊಟ್ಟಿದ್ದಾರೆ.

ವೈರಲ್ ಆಗುತ್ತಿರುವ ದೃಶ್ಯ.

ವೈರಲ್ ಆಗುತ್ತಿರುವ ದೃಶ್ಯ.

 • Share this:
  ಮೊಹಮ್ಮದ್ ಸಿರಾಜ್​ ಹೈದ್ರಾಬಾದ್​ ಮೂಲದ ಈ ಬೌಲರ್​ ಇತ್ತೀಚೆಗೆ ಐಪಿಎಲ್ ಟೂರ್ನಿಯಲ್ಲಿ ಸದ್ದು ಮಾಡಿದ್ದರು. ಅಕ್ಟೋಬರ್ 21 ರಂದು ನಡೆದ ಕೋಲ್ಕತ್ತಾ ನೈಟ್‌ ರೈಡರ್ಸ್ ಎದುರಿನ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರವಾಗಿ ಬೌಲ್ ಮಾಡಿದ್ದ ಸಿರಾಜ್​ 4 ಓವರ್‌ಗಳಲ್ಲಿ ಕೇವಲ 8 ರನ್ ನೀಡಿ 2 ಮೇಡನ್ ಮತ್ತು 3 ವಿಕೆಟ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಈ ಪ್ರದರ್ಶನದ ಮೂಲಕ ಆಯ್ಕೆದಾರರ ಗಮನ ಸೆಳೆದು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಿದ್ದ ಸಿರಾಜ್ ಮೊಹಮ್ಮದ್ ಇದೀಗ ಆಸ್ಟ್ರೇಲಿಯಾ ಎ ತಂಡದ ಎದುರಿನ ಅಭ್ಯಾಸ ಪಂದ್ಯದಲ್ಲಿ ಕ್ರೀಡಾಂಗಣದಲ್ಲಿ ಮಾನವೀಯತೆ ಮೆರೆಯುವ ಮೂಲಕ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ. 

  ಭಾರತ ಮತ್ತು ಆಸ್ಟ್ರೇಲಿಯಾ ಎ ತಂಡಗಳ ನಡುವೆ ಇಂದು ಎರಡನೇ ಅಭ್ಯಾಸ ಪಂದ್ಯ ಆರಂಭವಾಗಿದೆ. ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಅಲ್ಪ ಮೊತ್ತಕ್ಕೆ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ, ಭಾರತದ ಪರ ಬೌಲರ್​ ಜಸ್ಪ್ರೀತ್​ ಬುಮ್ರಾ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದರು. ಈ ವೇಳೆ ಭಾರತ ಪಂದ್ಯದ 44ನೇ ಓವರ್‌ಗಳಲ್ಲಿ 165 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿತ್ತು. ಕೊನೆಗೆ ಜಸ್ಪ್ರಿತ್ ಬೂಮ್ರ ಮತ್ತು ಮೊಹಮ್ಮದ್ ಸಿರಾಜ್ ಕ್ರೀಸ್‌ನಲ್ಲಿದ್ದರು.

  ಆಗ 44 ನೇ ಓವರ್‌ನಲ್ಲಿ ಆಸ್ಟ್ರೇಲಿಯಾದ ವೇಗಿ ಕ್ಯಾಮರೂನ್ ಗ್ರೀನ್ ಬೌಲಿಂಗ್ ಮಾಡಿದರು. ಬ್ಯಾಟಿಂಗ್ ಕ್ರೀಸ್‌ನಲ್ಲಿದ್ದ ಬೂಮ್ರ ತನ್ನತ್ತ ಬಂದ್ ಬೌಲ್‌ಗೆ ನೇರವಾಗಿ ಬಾರಿಸಿದಾಗ ಅದು ಸೀದಾ ಬೌಲರ್ ಕ್ಯಾಮರೂನ್ ಗ್ರೀನ್ ತಲೆಗೆ ಬಡಿಯಿತು. ಈ ವೇಳೆ ಬುಮ್ರಾ ರನ್​ ತೆಗೆದುಕೊಳ್ಳಲು ಮುಂದಾದರೆ, ಕ್ರೀಸ್‌ನ ಮತ್ತೊಂದು ಬದಿಯಲ್ಲಿದ್ದ ಮೊಹಮ್ಮದ್ ಸಿರಾಜ್ ಕ್ಷಣಮಾತ್ರದಲ್ಲಿ ಬ್ಯಾಟ್ ಕೈಬಿಟ್ಟು ಸೀದಾ ಕ್ಯಾಮರೂನ್ ಗ್ರೀನ್ ಬಳಿಗೆ ಓಡಿ ಅವರ ರಕ್ಷಣೆಗೆ ಮುಂದಾದರು.  ಈ ಸಮಯದಲ್ಲಿ ತಾನು ರನ್​ ಓಡಬೇಕು, ಒಂದು ವೇಳೆ ಫೀಲ್ಡರ್​ಗಳು ಬಾಲ್​ ಅನ್ನು ವಿಕೆಟ್​ಗೆ ಹೊಡೆದರೆ ತಾನು ಔಟ್​ ಆಗುವುದು ಖಚಿತ ಎಂಬ ಅರಿವು ಸಿರಾಜ್ ಅವರಿಗೆ ಇಲ್ಲದೇ ಏನಿಲ್ಲ. ಆದರೆ, ರನ್​ಗಿಂತ ತನ್ನ ಸಹ ಆಟಗಾರನಿಗೆ ಪೆಟ್ಟಾದಾಗದ ಆತನನ್ನು ಸಂತೈಸುವ ಯೋಗಕ್ಷೇಮ ವಿಚಾರಿಸುವ ಕನಿಷ್ಟ ಕಾಳಜಿ ಅಥವಾ ಮಾನವೀಯತೆಯೇ ಮುಖ್ಯ ಎಂಬುದನ್ನು ಸಿರಾಜ್ ಮಹಮ್ಮದ್ ಇಂದಿನ ಪಂದ್ಯದಲ್ಲಿ ತೋರಿಸಿಕೊಟ್ಟಿದ್ದಾರೆ. ಸಿರಾಜ್ ಅವರ ಈ ಕ್ರೀಡಾಸ್ಪೂರ್ತಿಗೆ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  ಇದನ್ನೂ ಓದಿ : Matthew Hayden: ದಶಕದ ಅತ್ಯಂತ ಪ್ರಭಾವಶಾಲಿ ಕ್ರಿಕೆಟಿಗನನ್ನು ಹೆಸರಿಸಿದ ಮ್ಯಾಥ್ಯೂ ಹೇಡನ್..!

  ಈ ಘಟನೆ ನಡೆದ ತಕ್ಷಣ ಎಲ್ಲರೂ ಕ್ಯಾಮರೂನ್ ಗ್ರೀನ್ ಬಳಿ ಓಡಿದ್ದಾರೆ. ಅಂಪೈರ್ ಕೂಡ ತೆರಳಿ ಮೆಡಿಕಲ್ ಟೀಮ್‌ ಬರಲು ಸನ್ಹೆ ಮಾಡಿದರು. ಆದರೆ ಎಲ್ಲರಿಗಿಂತ ಮೊದಲು ತೆರಳಿದ್ದು ಮಾತ್ರ ನಾನ್‌ಸ್ಟ್ರೈಕರ್‌ ನಲ್ಲಿದ್ದ ಮೊಹಮ್ಮದ್ ಸಿರಾಜ್.

  ಸಿರಾಜ್ ಮಹಮ್ಮದ್ ಅವರ ಈ ನಡೆ ಇದೀಗ ಆಸ್ಟ್ರೇಲಿಯಾದ ಕ್ರಿಕೆಟ್​ ಅಭಿಮಾನಿಗಳನ್ನೂ ಮನ ಸೆಳೆದಿದೆ. ಈ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್​ ಮಾಡಿರುವ ಆಸ್ಟ್ರೇಲಿಯನ್ನರು, "ಮೊಹಮ್ಮದ್ ಸಿರಾಜ್, ಸ್ವಾರ್ಥರಹಿತ ಕ್ರಿಕೆಟರ್ ಇಂದು ನನ್ನ ಹೃದಯ ಗೆದ್ದಿದ್ದಾರೆ. ಎಂಥ ಅದ್ಬುತ ಕ್ಷಣ" ಎಂದು ಟ್ವೀಟ್‌ ಮಾಡಿದ್ದಾರೆ.
  Published by:MAshok Kumar
  First published: