IND vs AUS: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್: 6ನೇ ಕ್ರಮಾಂಕದಲ್ಲಿ ಆಡುವ ಹೊಸ ಬ್ಯಾಟ್ಸ್​ಮನ್​ ಯಾರು ಗೊತ್ತೇ?

ಶುಭ್ಮನ್ ಗಿಲ್ ಉತ್ತಮ ಫಾರ್ಮ್​ನಲ್ಲಿದ್ದು ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ನಡೆದ ಎರಡು ಅಭ್ಯಾಸ ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅದರಲ್ಲೂ ದ್ವಿತೀಯ ಪಿಂಕ್‌ಬಾಲ್ ಪಂದ್ಯದಲ್ಲಿ ಗಿಲ್ ಕ್ರಮವಾಗಿ 43 ಮತ್ತು 65 ರನ್ ಬಾರಿಸಿ ಗಮನ ಸೆಳೆದಿದ್ದರು.

Team India

Team India

 • Share this:
  ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ಗೆ ಇನ್ನೇನು ಎರಡು ದಿನವಷ್ಟೆ ಬಾಕಿಯಿದೆ. ಗುರುವಾರದಂದು ಅಡಿಲೇಡ್​ನ ಓವಲ್ ಮೈದಾನದಲ್ಲಿ ಮೊದಲ ಟೆಸ್ಟ್​ ಆರಂಭವಾಗಲಿದ್ದು ಡೇ-ನೈಟ್ ಪಂದ್ಯಕ್ಕೆ ಟೀಂ ಇಂಡಿಯಾ ಆಟಗಾರರು ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ. ಈ ನಡುವೆ ಕೊಹ್ಲಿ ಪಡೆಯಲ್ಲಿ ಬ್ಯಾಟಿಂಗ್ ಕ್ರಮಾಂಕಕ್ಕೆ ಪೈಪೋಟಿ ಏರ್ಪಟ್ಟಿದೆ. ಓಪನರ್​ಗಳಾಗಿ ಮಯಾಂಕ್ ಗರ್ವಾಲ್, ಪೃಥ್ವಿ ಶಾ, ಕೆ. ಎಲ್ ರಾಹುಲ್ ಹಾಗೂ ಶುಭ್ಮನ್ ಗಿಲ್ ಹೀಗೆ ನಾಲ್ಕು ಪ್ರಮುಖ ಆಟಗಾರರಿದ್ದಾರೆ. ಇವರಲ್ಲಿ ಯಾರಿಗೆ ಸ್ಥಾನ ಕೊಡುವುದು ಎಂಬುವುದು ದೊಡ್ಡ ಸಮಸ್ಯೆಯಾಗಿದೆ.

  ಹೀಗಿರುವಾಗ ಭಾರತ ತಂಡದ ಮಾಜಿ ವೇಗಿ ಅಜಿತ್ ಅಗರ್ಕರ್ ಅವರು ಸಲಹೆಯೊಂದನ್ನು ನೀಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆ ಮೇಲೆ ತವರಿಗೆ ಮರಳಿದ ನಂತರ ಶುಭ್ಮನ್ ಗಿಲ್ ಆರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  India vs Australia: ಭಾರತ – ಆಸ್ಟ್ರೇಲಿಯಾ ಟೆಸ್ಟ್​ ಸರಣಿಗೆ ಕ್ಷಣಗಣನೆ: ಯಾವಾಗ, ಏಲ್ಲಿ, ಎಷ್ಟು ಗಂಟೆಗೆ?, ಇಲ್ಲಿದೆ ಮಾಹಿತಿ

  ಶುಭ್ಮನ್ ಗಿಲ್ ಉತ್ತಮ ಫಾರ್ಮ್​ನಲ್ಲಿದ್ದು ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ನಡೆದ ಎರಡು ಅಭ್ಯಾಸ ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅದರಲ್ಲೂ ದ್ವಿತೀಯ ಪಿಂಕ್‌ಬಾಲ್ ಪಂದ್ಯದಲ್ಲಿ ಗಿಲ್ ಕ್ರಮವಾಗಿ 43 ಮತ್ತು 65 ರನ್ ಬಾರಿಸಿ ಗಮನ ಸೆಳೆದಿದ್ದರು.

  "ವಿರಾಟ್ ಕೊಹ್ಲಿ ಎರಡನೇ ಟೆಸ್ಟ್​ ಬಳಿಕ ತವರಿಗೆ ವಾಪಾಸ್ ಆಗಲಿದ್ದಾರೆ. ನಂತರ ಅಜಿಂಕ್ಯಾ ರಹಾನೆ ನಾಲ್ಕನೇ ಸ್ಥಾನವನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ. ಹೀಗಾದಾಗ ಹನುಮಾ ವಿಹಾರಿ ಐದನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ವಿಹಾರಿ ಮತ್ತು ರಹಾನೆ ಪೂಜಾರೊಂದಿಗೆ ಮಧ್ಯಮ ಕ್ರಮಾಂಕದಲ್ಲಿ ಆಡಿದರೆ, ಇವರೊಂದಿಗೆ ಶುಬ್ಮನ್ ಗಿಲ್ 6ನೇ ಸ್ಥಾನದಲ್ಲಿ ಕಣಕ್ಕಿಳಿಬೇಕು" ಎಂಬುದು ಅಗರ್ಕರ್ ಮಾತು.

  "ತಂಡದಲ್ಲಿ ಹೆಚ್ಚಿನ ಆಟಗಾರರು ಆರಂಭಿಕ ಬ್ಯಾಟ್ಸ್‌ಮನ್‌ಗಳಂತೆ ಕಾಣುತ್ತಾರೆ ಅಲ್ವಾ?, ಯಾಕೆಂದರೆ ಹನುಮ ವಿಹಾರಿ ಮತ್ತು ಅಜಿಂಕ್ಯ ರಹಾನೆ ಸಾಮಾನ್ಯವಾಗಿ ಚೇತೇಶ್ವರ ಪೂಜಾರ ಜೊತೆ ಮಧ್ಯಮ ಕ್ರಮಾಂಕದಲ್ಲಿ ಆಡಲು ಹೋಗುತ್ತಾರೆ. ಹೆಚ್ಚಿನವರು ಗಿಲ್​ರನ್ನು ಓಪನರ್ ಆಗಿ ಆಯ್ಕೆ ಮಾಡುತ್ತಾರೆ. ಆದರೆ, 6ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ನನ್ನ ಆಯ್ಕೆ ಗಿಲ್" ಎಂದು ಸೋನಿ ಸ್ಪೋರ್ಟ್ಸ್ ಜೊತೆ ಮಾತನಾಡಿದ ಅಗರ್ಕರ್ ಹೇಳಿದ್ದಾರೆ.

  ಒಂದೇ ನೋಟದಲ್ಲಿ ನೆಟ್ಟಿಗರ ನಿದ್ದೆಕದ್ದ ಹಾರ್ದಿಕ್ ಪಾಂಡ್ಯ ಮಗ ಅಗಸ್ತ್ಯ: ಇಲ್ಲಿವೆ ವೈರಲ್ ಫೋಟೋ

  ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಡಿಸೆಂಬರ್ 17 ರಿಂದ ಆರಂಭವಾಗಲಿದೆ. ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಹೊನಲು ಬೆಳಕಿನಲ್ಲಿ ನಡೆಯಲಿರುವುದು ವಿಶೇಷ. ಈ ಪಂದ್ಯ ಬೆಳಗ್ಗೆ 9:30ಕ್ಕೆ ಆರಂಭವಾಗಲಿದೆ.

  ಇನ್ನೂ ಎರಡನೇ ಟೆಸ್ಟ್ ಡಿಸೆಂಬರ್ 26 ರಿಂದ 30ರವರೆಗೆ ಮೆಲ್ಬೋರ್ನ್​ನಲ್ಲಿ, 3ನೇ ಟೆಸ್ಟ್ ಪಂದ್ಯ ಜನವರಿ 7 ರಿಂದ 11 ರವರೆಗೆ ಸಿಡ್ನಿ ಮೈದಾನದಲ್ಲಿ ಹಾಗೂ ಅಂತಿಮ ಟೆಸ್ಟ್​ ಬ್ರಿಸ್ಬೇನ್​ನಲ್ಲಿ ಜನವರಿ 15 ರಿಂದ 19 ರವರೆಗೆ ನಡೆಯಲಿದೆ. ಎರಡು ಹಾಗೂ ಮೂರನೇ ಟೆಸ್ಟ್ ಮುಂಜಾನೆ 5 ಗಂಟೆಗೆ ಶುರುವಾದರೆ, ಅಂತಿಮ ಟೆಸ್ಟ್​ 5:30ಕ್ಕೆ ಆರಂಭವಾಗಲಿದೆ.
  Published by:Vinay Bhat
  First published: