India vs Australia: ಭಾರತ - ಆಸ್ಟ್ರೇಲಿಯಾ ಮೂರನೇ ಟೆಸ್ಟ್​ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾದಿಂದ ಮಹತ್ವದ ಹೇಳಿಕೆ

ಸದ್ಯ ಸಿಡ್ನಿ ಕ್ರಿಕೆಟ್ ಗ್ರೌಂಡ್​ ಸಾಮರ್ಥ್ಯದ ಶೇ. 25 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗುವುದು ಮಹತ್ವದ ಹೇಳಿಕೆ ನೀಡಿದೆ.

IND vs AUS

IND vs AUS

 • Share this:
  ಬಾರ್ಡರ್-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಮೂರನೇ ಪಂದ್ಯಕ್ಕೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಭರ್ಜರಿ ಅಭ್ಯಾಸದಲ್ಲಿ ತೊಡಗಿಕೊಂಡಿವೆ. ರೋಹಿತ್ ಶರ್ಮಾ ಹಿಂತಿರುಗಿರುವುದು ರಹಾನೆ ಪಡೆಯ ಬ್ಯಾಟಿಂಗ್ ಶಕ್ತಿಯನ್ನ ಮತ್ತಷ್ಟು ಹೆಚ್ಚಿಸಿದೆ. ಇತ್ತ ಕಾಂಗರೂ ಪಡೆ ಕೂಡ ಡೇವಿಡ್ ವಾರ್ನರ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಯೋಚಿಸಿದೆ. ಹೀಗಾಗಿ ಸಿಡ್ನಿಯ ಎಸ್​​ಸಿಜಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಟೆಸ್ಟ್​ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಆದರೆ, ಈ ಟೆಸ್ಟ್​ ಪಂದ್ಯಕ್ಕೆ ಕೊರೋನಾ ಕರಿನೆರಳು ಆವರಿಸಿದೆ. ಹೌದು, ಸಿಡ್ನಿ ಸುತ್ತಮುತ್ತಲ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್ ಪ್ರಕರಣಗಳ ಏರುತ್ತಲ್ಲಿದ್ದು, ಮೂರನೇ ಟೆಸ್ಟ್ ಪಂದ್ಯಕ್ಕೆ ಆತಂಕ ಎದುರಾಗಿದೆ.

  ಪರಿಸ್ಥಿತಿ ಹೀಗಿದ್ದರು ಕ್ರಿಕೆಟ್ ಆಸ್ಟ್ರೇಲಿಯಾ ಮೂರನೇ ಟೆಸ್ಟ್​ ಪಂದ್ಯ ಯಾವುದೇ ಆತಂಕವಿಲ್ಲದೆ ನಡೆಯುತ್ತದೆ ಎಂದಿದೆ. ಮೊನ್ನೆಯಷ್ಟೆ ಸಿಡ್ನಿಯ ಸುತ್ತಮುತ್ತಲ ಪ್ರದೇಶದಲ್ಲಿ ಹೊಸದಾಗಿ 10 ಕೊರೋನಾ ಪ್ರಕರಣಗಳು ಕಾಣಿಸಿಕೊಂಡಿದ್ದು, ಕಳೆದ ಎರಡು ವಾರಗಳಲ್ಲಿ ಬರೋಬ್ಬರಿ 170 ಕೇಸ್ ಪತ್ತೆಯಾಗಿವೆ. ಅಲ್ಲದೆ ಎಸ್‌ಸಿಜಿಯಿಂದ ಕೇವಲ 30 ಕಿಲೋಮೀಟರ್ ದೂರದಲ್ಲಿರುವ ಬೆರಾಲಾ ಮತ್ತು ಸ್ಮಿತ್‌ಫೀಲ್ಡ್ ಪ್ರದೇಶಗಳಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದೆ.

  Suresh Raina: ಧೋನಿ ಬೆನ್ನಲ್ಲೆ ತಾನೂ ನಿವೃತ್ತಿ ಘೋಷಿಸಿದ್ದು ಯಾಕೆಂದು ರಹಸ್ಯ ಬಿಚ್ಚಿಟ್ಟ ಸುರೇಶ್ ರೈನಾ

  ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದರೂ, ಸಿಡ್ನಿಯಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಆದರೆ, ಸದ್ಯ ಸಿಡ್ನಿ ಕ್ರಿಕೆಟ್ ಗ್ರೌಂಡ್​ ಸಾಮರ್ಥ್ಯದ ಶೇ. 25 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗುವುದು ಮಹತ್ವದ ಹೇಳಿಕೆ ನೀಡಿದೆ.

  ಪರಿಷ್ಕೃತ ಸಾಮಾಜಿಕವಾಗಿ ಅಂತರವಿರುವ ಆಸನ ಯೋಜನೆಯನ್ನು ಒಳಗೊಂಡಿರುವ ಬದಲಾವಣೆ ಮಾಡಿ ಮತ್ತೊಮ್ಮೆ ಟಿಕೆಟ್ ನೀಡಲಾಗುತ್ತದೆ. ಈಗಾಗಲೆ ಟಿಕೆಟ್ ಖರೀದಿಸಿರುವವರಿಗೆ ವಿಮೆ ಸೇರಿದಂತೆ ಎಲ್ಲ ಹಣವನ್ನು ಹಿಂದಿರುಗಿಸುತ್ತೇವೆ ಎಂದು ಹೇಳಿದೆ.

  India vs Australia: ವಾವ್… ಅಭ್ಯಾಸದ ವೇಳೆ ನಟರಾಜನ್​ರಿಂದ ಹೀಗೊಂದು ರೋಚಕ ಕ್ಯಾಚ್

  ಒಟ್ಟು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಲಾ ಒಂದೊಂದು ಪಂದ್ಯ ಗೆದ್ದಿದ್ದು, ಜ.7 ರಿಂದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮೂರನೇ ಪಂದ್ಯ ಆರಂಭವಾಗಬೇಕಿದೆ.

  ಭಾರತ ಪರ ಇಂಜುರಿಯಿಂದಾಗಿ ಸರಣಿಯಿಂದ ಹೊರಬಿದ್ದಿರುವ ಉಮೇಶ್ ಯಾದವ್ ಬದಲು ಟಿ. ನಟರಾಜನ್ ಹಾಗೂ ಮೊಹಮ್ಮದ್ ಶಮಿ ಬದಲು ಶಾರ್ದೂಲ್ ಠಾಕೂರ್ ತಂಡ ಸೇರಿಕೊಂಡಿದ್ದಾರೆ. ಮೂರನೇ ಟೆಸ್ಟ್​ನಲ್ಲಿ ರೋಹಿತ್ ಶರ್ಮಾ ಕೂಡ ಕಣಕ್ಕಿಳಿಯುವುದು ಖಚಿತವಾಗಿದೆ.
  Published by:Vinay Bhat
  First published: