Video: ಸ್ಟೀವ್ ಸ್ಮಿತ್​ಗೆ ಪೆವಿಲಿಯನ್ ಹಾದಿ ತೋರಿಸಿದ ಜಡೇಜಾರ ಬುಲೆಟ್ ಥ್ರೋ..!

India vs Australia: ಇದೇ ಪಂದ್ಯದಲ್ಲಿ ಬೌಲಿಂಗ್ ಮೂಲಕ ಮಿಂಚಿದ Ravindra Jadeja 62 ರನ್‌ಗಳಿಗೆ 4 ವಿಕೆಟ್‌ಗಳನ್ನು ಉರುಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು. ಎರಡನೇ ದಿನದಾಟದ ಮುಕ್ತಾಯಕ್ಕೆ ಭಾರತ ಮೊದಲ ಇನ್ನಿಂಗ್ಸ್ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ವಿಕೆಟ್ ಕಳೆದುಕೊಂಡು 96 ರನ್ ಗಳಿಸಿದೆ.

 Jadeja on Smith run-out

Jadeja on Smith run-out

  • Share this:
    ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತ-ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 338 ರನ್ ಗಳಿಸಿದೆ. ಆಸೀಸ್​ ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಆಸ್ಟ್ರೇಲಿಯಾ ಬೃಹತ್ ಮೊತ್ತ ಪೇರಿಸುವಂತಾಯಿತು.

    226 ಎಸೆತಗಳನ್ನು ಎದುರಿಸಿದ ಸ್ಮಿತ್ 131 ರನ್​ಗಳೊಂದಿಗೆ ಉತ್ತಮ ಬ್ಯಾಟಿಂಗ್ ಮುಂದುವರೆಸಿದ್ದರು. ಆಕರ್ಷಕ 16 ಬೌಂಡರಿಗಳನ್ನು ಬಾರಿಸಿ ಕ್ರೀಸ್ ಕಚ್ಚಿ ನಿಂತಿದ್ದ ಸ್ಮಿತ್ ಅವರನ್ನು ಔಟ್ ಮಾಡಲು ಟೀಮ್ ಇಂಡಿಯಾ ಬೌಲರುಗಳು ಹಲವು ತಂತ್ರಗಳನ್ನು ಪರೀಕ್ಷಿಸಿದರೂ ಸಫಲವಾಗಿರಲಿಲ್ಲ. ಆದರೆ ಜಸ್​ಪ್ರೀತ್ ಬುಮ್ರಾ ಬೌಲಿಂಗ್ ವೇಳೆ ಸ್ಮಿತ್ ಮಾಡಿದ ಸಣ್ಣ ಎಡವಟ್ಟು ಅವರನ್ನು ಔಟ್ ಆಗುವಂತೆ ಮಾಡಿತು.

    ಟೆಸ್ಟ್ ಕ್ರಿಕೆಟ್​ನಲ್ಲಿ ರನೌಟ್ ಆಗುವುದು ಅಪರೂಪ. ಅದರಲ್ಲೂ ಉತ್ತಮ ಫಾರ್ಮ್​ನಲ್ಲಿರುವ ಆಟಗಾರರು ಹೆಚ್ಚುವರಿ ರನ್​ಗಾಗಿ ರಿಸ್ಕ್​ ತೆಗೆದುಕೊಳ್ಳುವುದಿಲ್ಲ. ಆದರೆ ಸ್ಮಿತ್ ಡೀಪ್ ಸ್ಕ್ವೇರ್​ ಲೆಗ್​ನತ್ತ ಬಾರಿಸಿ ಎರಡನೇ ರನ್ ಓಡುವ ಉತ್ಸಾಹ ತೋರಿಸಿದ್ದರು. ಅತ್ತ ಬೌಂಡರಿ ಲೈನ್​ನಿಂದ ಓಡಿ ಬಂದ ರವೀಂದ್ರ ಜಡೇಜಾ ಸ್ಮಿತ್ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದರು.

    ಸ್ಮಿತ್ ಬಾರಿಸಿದ ಚೆಂಡನ್ನು ಬುಲೆಟ್ ವೇಗದಲ್ಲಿ ವಿಕೆಟ್ ನೇರವಾಗಿ ಎಸೆದ ಜಡೇಜಾ ಬೇಲ್ಸ್ ಹಾರಿಸಿದ್ದರು. ಅಲ್ಲಿಗೆ ಸ್ಟೀವ್ ಸ್ಮಿತ್ ಅಮೋಘ ಆಟಕ್ಕೆ ಬ್ರೇಕ್ ಬಿತ್ತು. ಜಡೇಜಾ ಅವರ ಈ ಅದ್ಭುತ ಫೀಲ್ಡಿಂಗ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸಿಸಲಾಗುತ್ತಿದೆ.



    ಇನ್ನು ಇದೇ ಪಂದ್ಯದಲ್ಲಿ ಬೌಲಿಂಗ್ ಮೂಲಕ ಮಿಂಚಿದ ಜಡ್ಡು 62 ರನ್‌ಗಳಿಗೆ 4 ವಿಕೆಟ್‌ಗಳನ್ನು ಉರುಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು. ಎರಡನೇ ದಿನದಾಟದ ಮುಕ್ತಾಯಕ್ಕೆ ಭಾರತ ಮೊದಲ ಇನ್ನಿಂಗ್ಸ್ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ವಿಕೆಟ್ ಕಳೆದುಕೊಂಡು 96 ರನ್ ಗಳಿಸಿದೆ.
    Published by:zahir
    First published: